Adipurush: 'ರಾಮಾಯಣ-ಕುರಾನ್ ಗಳಂತಹ ಗ್ರಂಥಗಳನ್ನು ಬಿಟ್ಟುಬಿಡಿ', ಆದಿಪುರುಷ್ ನಿರ್ಮಾಪಕರಿಗೆ ಹೈಕೋರ್ಟ್ ಛೀಮಾರಿ

Adipurush Controversy: ನ್ಯಾಯಾಲಯದಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ಇತರ ಪ್ರತಿವಾದಿಗಳ ಗೈರುಹಾಜರಾತೀಯ ಬಗ್ಗೆಯೂ ಕೂಡ ನ್ಯಾಯಾಲಯ ಕಠಿಣ ನಿಲುವನ್ನು ತಲ್ಡೆದಿದೆ . ಸೆನ್ಸಾರ್ ಮಂಡಳಿಯು ಇನ್ನೂ ತನ್ನ ಉತ್ತರವನ್ನು ಸಲ್ಲಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ವಕೀಲೆ ರಂಜನಾ ಅಗ್ನಿಹೋತ್ರಿ ಮತ್ತು ಚಿತ್ರದ ಆಕ್ಷೇಪಾರ್ಹ ಸಂಗತಿಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಯಪಡಿಸಿದ್ದಾರೆ.  

Written by - Nitin Tabib | Last Updated : Jun 26, 2023, 06:34 PM IST
  • ಬಾವಲಿಗೆ ರಾವಣ ಮಾಂಸವನ್ನು ತಿನ್ನಿಸುವುದು, ಸೀತೆಯನ್ನು ಬ್ಲೌಸ್ ಇಲ್ಲದೆ ತೋರಿಸುವುದು, ಕಪ್ಪು ಬಣ್ಣದ ಲಂಕಾ, ಬಾವಲಿಯನ್ನು ರಾವಣನ ವಾಹನ ಎಂದು ಹೇಳುವುದು,
  • ಸುಷೇಣ ವೈದ್ಯನ ಬದಲಿಗೆ ವಿಭೀಷಣನ ಪತ್ನಿ ಲಕ್ಷ್ಮಣನಿಗೆ ಸಂಜೀವನಿ ನೀಡುವುದನ್ನು ತೋರಿಸುವುದು, ಆಕ್ಷೇಪಾರ್ಹ ಡೈಲಾಗ್‌ಗಳು ಮತ್ತು ಇತರ ಎಲ್ಲ ಸಂಗತಿಗಳನ್ನು ನ್ಯಾಯಾಲಯದಲ್ಲಿ ಇರಿಸಲಾಗಿದ್ದು.
  • ನ್ಯಾಯಾಲಯವು ಅವುಗಳಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿದ್ದು, ಮುಂದಿನ ವಿಚಾರಣೆ ಮಂಗಳವಾರ ಅಂದರೆ ಜೂನ್ 27 ರಂದು ನಡೆಯಲಿದೆ.
Adipurush: 'ರಾಮಾಯಣ-ಕುರಾನ್ ಗಳಂತಹ ಗ್ರಂಥಗಳನ್ನು ಬಿಟ್ಟುಬಿಡಿ', ಆದಿಪುರುಷ್ ನಿರ್ಮಾಪಕರಿಗೆ ಹೈಕೋರ್ಟ್ ಛೀಮಾರಿ title=

Adipurush Controversy:  ‘ಆದಿಪುರುಷ’ ಚಿತ್ರದ ವಿರುದ್ಧ ಜನರ ಆಕ್ರೋಶ ಕಡಿಮೆಯಾಗುವ ಮಾತೆ ಎತ್ತುತ್ತಿಲ್ಲ. ಬಿಡುಗಡೆಯಾಗಿ 10 ದಿನ ಕಳೆದರೂ ನಿರ್ಮಾಪಕರು, ನಿರ್ದೇಶಕರು ಜನರ ಆಕ್ರೋಶವನ್ನು ಎದುರಿಸುತ್ತಲೇ ಇದ್ದಾರೆ. ಇದೀಗ ಈ ಚಿತ್ರದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ. ವಕೀಲ ಕುಲದೀಪ್ ತಿವಾರಿ ಅವರ ಈ ಅರ್ಜಿಯ ವಿಚಾರಣೆ ಸೋಮವಾರ (ಜೂನ್ 26) ನಡೆದಿದೆ. ವಿಚಾರಣೆ ವೇಳೆ ಹೈಕೋರ್ಟ್ ಚಿತ್ರದ ನಿರ್ಮಾಪಕ-ನಿರ್ದೇಶಕರ ಮೇಲೆ ಮಾತ್ರವಲ್ಲದೆ ಸೆನ್ಸಾರ್ ಮಂಡಳಿ ಮೇಲೂ ಚಾಟಿ ಬೀಸಿದೆ.

ಈ ಕುರಿತು ಹೇಳಿಕೆ ನೀಡಿರುವ ಅರ್ಜಿ ಸಲ್ಲಿಸಿದ ವಕೀಲ ಕುಲದೀಪ್ ತಿವಾರಿ, ವಿವಾದಿತ ಚಿತ್ರ ಆದಿಪುರುಷ ಕುರಿತು ಇಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಚಿತ್ರದ ನಿರ್ಮಾಪಕ-ನಿರ್ದೇಶಕರು ಹಾಗೂ ಸೆನ್ಸಾರ್ ಮಂಡಳಿಗೆ ಛೀಮಾರಿ ಹಾಕಲಾಗಿದೆ ಎಂದು ಹೇಳಿದ್ದಾರೆ.

ಸೆನ್ಸಾರ್ ಮಂಡಳಿ ಏನು ಮಾಡುತ್ತಿದೆ?
ವಾದದ ವೇಳೆ, ಚಿತ್ರದಲ್ಲಿ ತೋರಿಸಿರುವ ಆಕ್ಷೇಪಾರ್ಹ ಸಂಗತಿಗಳು ಮತ್ತು ಸಂಭಾಷಣೆಗಳ ಬಗ್ಗೆ ಹಿರಿಯ ವಕೀಲೆ ರಂಜನಾ ಅಗ್ನಿಹೋತ್ರಿ ನ್ಯಾಯಾಲಯಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಜೂನ್ 22 ರಂದು ಸಲ್ಲಿಸಲಾದ ತಿದ್ದುಪಡಿ ಅರ್ಜಿಯನ್ನು ಅನುಮೋದಿಸುವಾಗ, ಸೆನ್ಸಾರ್ ಮಂಡಳಿಯ ಪರವಾಗಿ ಹಾಜರಾದ ವಕೀಲ ಅಶ್ವನಿ ಸಿಂಗ್ ಅವರನ್ನು ಸೆನ್ಸಾರ್ ಮಂಡಳಿಯು ಏನು ಮಾಡುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.  ಸಿನಿಮಾ ಸಮಾಜದ ಕನ್ನಡಿ, ಮುಂದಿನ ಪೀಳಿಗೆಗೆ ಏನು ಕಲಿಸಲು ಬಯಸುತ್ತೀರಿ? ಸೆನ್ಸಾರ್ ಮಂಡಳಿಗೆ ತನ್ನ ಜವಾಬ್ದಾರಿ ಅರ್ಥವಾಗುತ್ತಿಲ್ಲವೇ? ಎಂದು ನ್ಯಾಯಪೀಠ ಪ್ರಶ್ನೆಗಳ ಸುರಿಮಳೆಯನ್ನೇಗೈದಿದೆ. 

ರಾಮಾಯಣ ಮಾತ್ರವಲ್ಲದೆ ಪವಿತ್ರ ಕುರಾನ್, ಗುರು ಗ್ರಂಥ ಸಾಹಿಬ್ ಮತ್ತು ಗೀತೆಯಂತಹ ಧಾರ್ಮಿಕ ಗ್ರಂಥಗಳನ್ನಾದರೂ ಬಿಟ್ಟುಬಿಡಿ. ಉಳಿದೆಲ್ಲವನ್ನು ಈಗಾಗಲೇ ಮಾಡುತ್ತಲೇ ಇರುವಿರಿ ಎಂದು ನ್ಯಾಯಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ-Bollywood News: ರೇಖಾಗೆ ಹಿಂದಿ ಚಿತ್ರೋದ್ಯಮದಲ್ಲಿ ಬ್ರೇಕ್ ನೀಡಿದ ಚಿತ್ರ ನಿರ್ಮಾಪಕ ಕುಲ್ಜೀತ್ ಪಾಲ್ ಇನ್ನಿಲ್ಲ

ನ್ಯಾಯಾಲಯದಲ್ಲಿ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ಇತರ ಪ್ರತಿವಾದಿಗಳ ಗೈರುಹಾಜರಾತಿಯ ಬಗ್ಗೆಯೂ ಕೂಡ ನ್ಯಾಯಾಲಯವು ಕಠಿಣ ನಿಲುವನ್ನು ತಾಳೆದಿದೆ. ಸೆನ್ಸಾರ್ ಮಂಡಳಿಯು ಈ ಕುರಿತು ಇದುವರೆಗೆ ಉತ್ತರವನ್ನು ಸಲ್ಲಿಸದಿರುವುದನ್ನು ಆಕ್ಷೇಪಿಸಿದ ಹಿರಿಯ ವಕೀಲೆ ರಂಜನಾ ಅಗ್ನಿಹೋತ್ರಿ, ಚಿತ್ರದ ಆಕ್ಷೇಪಾರ್ಹ ಸಂಗತಿಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ-Virushka Net Worth: ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಚಿತ್ರದಲ್ಲಿ ಹಲವು ಆಕ್ಷೇಪಾರ್ಹ ಸಂಗತಿಗಳಿವೆ
ಬಾವಲಿಗೆ ರಾವಣ ಮಾಂಸವನ್ನು ತಿನ್ನಿಸುವುದು, ಸೀತೆಯನ್ನು ಬ್ಲೌಸ್ ಇಲ್ಲದೆ ತೋರಿಸುವುದು, ಕಪ್ಪು ಬಣ್ಣದ ಲಂಕಾ, ಬಾವಲಿಯನ್ನು ರಾವಣನ ವಾಹನ ಎಂದು ಹೇಳುವುದು, ಸುಷೇಣ ವೈದ್ಯನ ಬದಲಿಗೆ ವಿಭೀಷಣನ ಪತ್ನಿ ಲಕ್ಷ್ಮಣನಿಗೆ ಸಂಜೀವನಿ ನೀಡುವುದನ್ನು ತೋರಿಸುವುದು, ಆಕ್ಷೇಪಾರ್ಹ ಡೈಲಾಗ್‌ಗಳು ಮತ್ತು ಇತರ ಎಲ್ಲ ಸಂಗತಿಗಳನ್ನು ನ್ಯಾಯಾಲಯದಲ್ಲಿ ಇರಿಸಲಾಗಿದ್ದು. ನ್ಯಾಯಾಲಯವು ಅವುಗಳಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿದ್ದು,  ಮುಂದಿನ ವಿಚಾರಣೆ ಮಂಗಳವಾರ ಅಂದರೆ ಜೂನ್ 27 ರಂದು ನಡೆಯಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News