Urvashi: ಇವರೇ ನೋಡಿ ನಟಿ ಊರ್ವಶಿ ಮಗಳು.. ಸಿನಿರಂಗಕ್ಕೆ ತೇಜಲಕ್ಷ್ಮಿ ಎಂಟ್ರಿ ಯಾವಾಗ?

Urvashi Daughter Tejalakshmi : ನಟಿ ಊರ್ವಶಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಟಿಕ್ ಟಾಕ್ ಸ್ಟಾರ್ ಆಗಿ ಜನಪ್ರಿಯರಾಗಿ ಮಗಳು ತೇಜಲಕ್ಷ್ಮಿ ಸಹ ಇದರಲ್ಲಿದ್ದಾರೆ.   

Written by - Chetana Devarmani | Last Updated : Jun 13, 2023, 01:55 PM IST
  • ಕುಟುಂಬದ ಜೊತೆ ಫೋಟೋ ಶೇರ್‌ ಮಾಡಿದ ಬಹುಭಾಷಾ ತಾರೆ ಊರ್ವಶಿ
  • ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್‌ ಮಾಡಿದ್ದಾರೆ
  • ಟಿಕ್ ಟಾಕ್ ಸ್ಟಾರ್ ಆಗಿ ಜನಪ್ರಿಯರಾಗಿ ಮಗಳು ತೇಜಲಕ್ಷ್ಮಿ
Urvashi: ಇವರೇ ನೋಡಿ ನಟಿ ಊರ್ವಶಿ ಮಗಳು.. ಸಿನಿರಂಗಕ್ಕೆ ತೇಜಲಕ್ಷ್ಮಿ ಎಂಟ್ರಿ ಯಾವಾಗ? title=
Urvashi

Urvashi: ಮಗಳು ಕುಂಜತಾ ಮತ್ತು ಮಗ ಇಶಾನ್ ಜೊತೆಗಿನ ನಟಿ ಊರ್ವಶಿ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ನಟಿ ಊರ್ವಶಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರು ಮತ್ತು ಹಿತೈಷಿಗಳ ಕೋರಿಕೆಯ ಮೇರೆಗೆ ಇನ್‌ಸ್ಟಾಗ್ರಾಮ್‌ಗೆ ಬಂದಿದ್ದೇನೆ ಎಂದು ಊರ್ವಶಿ ಸ್ಪಷ್ಟಪಡಿಸಿದ್ದಾರೆ. 

ಊರ್ವಶಿ ಮೊದಲು ತಮ್ಮ ಮಗ ಇಶಾನ್ ಮತ್ತು ಪತಿ ಶಿವಪ್ರಸಾದ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಊರ್ವಶಿ ದುಬೈ ಪ್ರವಾಸದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಅಲ್ಲಿ ಅವರು ಕುಟುಂಬದೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಶೇರ್‌ ಮಾಡಿದ್ದಾರೆ. ತಮ್ಮ ಮಕ್ಕಳೊಂದಿಗೆ ಸಹ ಊರ್ವಶಿ ಫೋಟೋ ಶೇರ್ ಮಾಡಿದ್ದಾರೆ. ಊರ್ವಶಿ ಮತ್ತು ತೇಜಲಕ್ಷ್ಮಿ ಇಬ್ಬರೂ ಒಟ್ಟಿಗೆ ಇರುವ ಕೆಲವು ಚಿತ್ರಗಳನ್ನು Instagram ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.  

ಇದನ್ನೂ ಓದಿ: ವಿಜಯ್ ವರ್ಮಾ ಜೊತೆಗಿನ ಸಂಬಂಧವನ್ನು ಖಚಿತಪಡಿಸಿದ ತಮನ್ನಾ ಭಾಟಿಯಾ!!

ಬಹುಭಾಷಾ ತಾರೆ ಊರ್ವಶಿ 8 ವರ್ಷದವರಿದ್ದಾಗಲೇ ಬಾಲನಟಿಯಾಗಿ ಸಿನಿ ಕರಿಯರ್‌ ಆರಂಭಿಸಿದರು. ಕೆಲ ವರ್ಷಗಳ ನಂತರ ನಾಯಕಿಯಾದರು. ಊರ್ವಶಿ ಅವರ ಮಗಳು ತೇಜಲಕ್ಷ್ಮಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುತ್ತಾರೆ. ಟಿಕ್ ಟಾಕ್ ಸ್ಟಾರ್ ಆಗಿ ಜನಪ್ರಿಯರಾಗಿದ್ದಾರೆ. ತಾಯಿ ಮಗಳು ಒಟ್ಟಿಗೆ ಕಾಣಿಸಿಕೊಂಡಿದ್ದು ಅಬಿಮಾನಿಗಳಲ್ಲಿ ಸಂತಸ ತಂದಿದೆ. ಅವರ ಮಗಳು ತೇಜಲಕ್ಷ್ಮಿ ಕೂಡ ನಟಿಯಷ್ಟೇ ಸುಂದರವಾಗಿದ್ದಾರೆ.  

 

 

 

ಊರ್ವಶಿ ಮತ್ತು ಮನೋಜ್ ಕೆ ಜಯನ್ ಅವರ ಪುತ್ರಿ, ಕುಂಜಟಾ ಅವರ ನಿಜವಾದ ಹೆಸರು ತೇಜಲಕ್ಷ್ಮಿ. ತೇಜಲಕ್ಷ್ಮಿ ಟಿಕ್ ಟಾಕ್ ವಿಡಿಯೋ ಮೂಲಕ ಅನೇಕರ ಗಮನ ಸೆಳೆದಿದ್ದಾರೆ. ಮನೋಜ್ ಕೆ ಜಯನ್ ಅವರೊಂದಿಗೆ ವಿಚ್ಛೇದನದ ನಂತರ ಊರ್ವಶಿ 2013 ರಲ್ಲಿ ಶಿವಪ್ರಸಾದ್ ಅವರನ್ನು ವಿವಾಹವಾದರು. ಆ ಬಳಿಕ ಇಶಾನ್ ಎಂಬ ಪುತ್ರನಾದ. 

ಹಲವು ಕನ್ನಡ ಸಿನಿಮಾಗಳಲ್ಲಿಯೂ ಊರ್ವಶಿ ನಟಿಸಿದ್ದಾರೆ. ರಾಜ್ ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್‌, ರಮೇಶ್‌ ಅರವಿಂದ್‌ ಸೇರಿದಂತೆ ಹಲವು ಸ್ಟಾರ್‌ ನಟರ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ. ಊರ್ವಶಿ ಹಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಭಾಷ್ ಲಲಿತಾ ಸುಬ್ರಮಣಿಯನ್ ನಿರ್ದೇಶಿಸಿದ ಚಾರ್ಲ್ಸ್ ಎಂಟರ್‌ಪ್ರೈಸಸ್ ಊರ್ವಶಿಯವರ ಕೊನೆಯ ಮಲಯಾಳಂ ಚಿತ್ರ. 

ಇದನ್ನೂ ಓದಿ: ರಾವಣನ ಪಾತ್ರದಲ್ಲಿ ನಟಿಸಲು ʻNOʼ ಎಂದಿದ್ದೇಕೆ ಯಶ್?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News