ನನ್ನ ಮೊದಲ ಲಿಪ್‌ಲಾಕ್ ʼಆ ನಟʼನ ಜೊತೆ ಮಾತ್ರ...! ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? 

Sreeleela lipkiss : ಟಾಲಿವುಡ್‌ ಮೋಸ್ಟ್ ವಾಂಟೆಡ್ ಹೀರೋಯಿನ್, ಚಂದನವನದ ಸುಂದರಿ, ನಟಿ ಶ್ರೀಲೀಲಾ ʼಲಿಪ್ ಲಾಕ್ʼ ಬಗ್ಗೆ ಇಂಟ್ರಸ್ಟಿಂಗ್‌ ಹೇಳಿಕೆ ನೀಡಿದ್ದಾರೆ. ನನ್ನ ಮೊದಲ ಲಿಪ್ ಲಾಕ್ ಅವನಿಗೆ ಮೀಸಲು.. ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಹಾಗಿದ್ರೆ ಶ್ರೀಲೀಲಾಗೆ ಮುತ್ತು ಕೊಡುವ ಆ ನಟ ಯಾರು..? ನೋಡೋಣ ಬನ್ನಿ..

Written by - Krishna N K | Last Updated : Oct 26, 2023, 03:20 PM IST
  • ಟಾಲಿವುಡ್‌ ಮೋಸ್ಟ್ ವಾಂಟೆಡ್ ಹೀರೋಯಿನ್ ನಟಿ ಶ್ರೀಲೀಲಾ.
  • ಚಂದನವನದ ಸುಂದರಿ ಸಧ್ಯ ತೆಲುಗು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.
  • ಲೀಲಾ ನಟನೆಯ ಎಲ್ಲಾ ಚಿತ್ರಗಳು ಉತ್ತಮ ಯಶಸ್ಸು ಪಡೆಯುತ್ತಿವೆ.
ನನ್ನ ಮೊದಲ ಲಿಪ್‌ಲಾಕ್ ʼಆ ನಟʼನ ಜೊತೆ ಮಾತ್ರ...! ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..?  title=

Sreeleela : ಸ್ಯಾಂಡಲ್‌ವುಡ್‌ ಕ್ಯೂಟ್‌ ಬ್ಯೂಟಿ ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಾರೆ. ಲೀಲಾ ನಟನೆಯ ಎಲ್ಲಾ ಚಿತ್ರಗಳು ಉತ್ತಮ ಯಶಸ್ಸು ಪಡೆಯುತ್ತಿದ್ದು, ತೆಲುಗು ಚಿತ್ರರಂಗದ ಮೋಸ್ಟ್ ವಾಂಟೆಡ್ ನಾಯಕಿ ಎನಿಸಿಕೊಂಡಿದ್ದಾರೆ. ಯಂಗ್ ಹೀರೋಗಳಿಂದ ಹಿಡಿದು ಸೀನಿಯರ್ ಹೀರೋಗಳ ಸಿನಿಮಾಗಳಿಗೂ ಶ್ರೀಲೀಲಾ ಮೊದಲ ಆಯ್ಕೆಯಾಗುತ್ತಿದ್ದಾರೆ.

ಸದ್ಯ ಶ್ರೀಲೀಲಾ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಚಿತ್ರಗಳಿವೆ. ಅವುಗಳಲ್ಲಿ ಹೆಚ್ಚಿನವು ಬಿಗ್‌ ಬಜೆಟ್‌ ಚಲನಚಿತ್ರಗಳಾಗಿವೆ. ಇತ್ತೀಚಿನ ತೆರೆಕಂಡ ನಟಸಿಂಹ ಸಂದಮೂರಿ ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಉತ್ತಮ ಪ್ರದರ್ಶನ ಕಾಣುತ್ತಿದೆ. ಅನಿಲ್ ರವಿಪುಡಿ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಕೃಷ್ಣ ಮಗಳ ಪಾತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮನೆ ಶೋಧಿಸಿದ ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರ..! ಹೈಕೋರ್ಟ್‌ ಮೊರೆ ಹೋದ ನಟ ಜಗ್ಗೇಶ್‌

ಸಧ್ಯ ‘ಭಗವಂತ್ ಕೇಸರಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಬ್ಯೂಟಿ, ಸರಣಿ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ಜೊತೆಗೆ ಹಲವು ವೈಯಕ್ತಿಕ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ನಟಿಗೆ ಒಂದು ಹುಚ್ಚು ಪ್ರಶ್ನೆ ಎದುರಾಯಿತು. ಟಾಲಿವುಡ್‌ನಲ್ಲಿ ಲಿಪ್ ಲಾಕ್ ಸೀನ್ ಮಾಡಬೇಕಾದರೆ ಯಾರೊಂದಿಗೆ ಮಾಡುತ್ತೀರಿ? ಅಂತ ಆಂಕರ್ ಪ್ರಶ್ನೆ ಕೇಳಿದ್ದರು..

ಈ ಪ್ರಶ್ನೆಗೆ ಶ್ರೀಲೀಲಾ ಬಹಳ ಸ್ವಾರಸ್ಯಕರ ಉತ್ತರ ನೀಡಿದ್ದಾಳೆ. ಮೊದಲಿಗೆ ಯಾವುದೇ ನಾಯಕನ ಜೊತೆ ಲಿಪ್ ಲಾಕ್ ದೃಶ್ಯಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗೆ ಮಾಡಬೇಕಾದರೆ ಗಂಡನಿಗೆ ಮೊದಲ ಮುತ್ತು ಕೊಡುತ್ತೇನೆ ಎಂದಿದ್ದಾಳೆ. ಲಿಪ್ ಲಾಕ್ ದೃಶ್ಯಗಳನ್ನು ಮಾಡಬಾರದು ಅಂತ ಶ್ರೀಲೀಲಾ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ಮನೆಯಲ್ಲಿ 8 ಹುಲಿ ಉಗುರಿನ ಪೆಂಡೆಂಟ್ ಪತ್ತೆ..! ಅಸಲಿ ಅಥವಾ ನಕಲಿ..?

ಸದ್ಯ ಶ್ರೀಲೀಲಾ ಪಂಜ ವೈಷ್ಣವ್ ತೇಜ್ ಜೊತೆಗೆ 'ಆದಿ ಕೇಶವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಇತ್ತೀಚಿಗೆ ಈ ಚಿತ್ರದ ʼಲೀಲಮ್ಮೋʼ ಸಾಂಗ್‌ ರಿಲೀಸ್‌ ಆಗಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಎಲ್ಲರ ಮನಸೆಳೆಯುತ್ತಿದೆ. 

ಪ್ರಸ್ತುತ, ಲೀಲಾ ಮಹೇಶ್ ಬಾಬು ಜೊತೆ 'ಗುಂಟೂರು ಕಾರ', ಪವನ್ ಕಲ್ಯಾಣ್ 'ಉಸ್ತಾದ್ ಭಗತ್ ಸಿಂಗ್', ವಿಜಯ್ ದೇವರಕೊಂಡ ಮತ್ತು ನಿತಿನ್ ನಟನಯ ಮುಂಬರುವ ಚಿತ್ರಗಳಲ್ಲಿ ನಟಿಸಲಿದ್ದಾರೆ. ಇನ್ನು ಕೆಲವು ಸಿನಿಮಾಗಳಿಗೂ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News