ಕನ್ನಡ ಸಿನಿಮಾ ಮಾಡಲ್ಲ ಅಂದಿದ್ದ ನಟಿ...KGF-2 ಟ್ರೈಲರ್ ಬಗ್ಗೆ ಗುಣಗಾನ..!

ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಶೃತಿ ಹಾಸನ್‌ಗೆ ತೆಲುಗು ಮತ್ತು ತಮಿಳಿನಲ್ಲಿ ಭಾರೀ ಬೇಡಿಕೆಯಿದೆ. ಕನ್ನಡ ಚಿತ್ರರಂಗದ ಕಡೆಗೆ ಮಾತ್ರ ಮುಖ ಮಾಡಿಲ್ಲ ಎಂದಿದ್ದರು ಶೃತಿ ಹಾಸನ್. ಹಲವು ವರ್ಷಗಳ ಹಿಂದೆ ಶ್ರುತಿ ಹಾಸನ್, ಕನ್ನಡ ಸಿನಿಮಾದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾಗಿದ್ದರು.

Written by - MADHUMALA | Edited by - Manjunath N | Last Updated : Mar 30, 2022, 07:37 PM IST
  • ನಮ್ಮ ಕೆಜಿಎಫ್-2 ಸಿನಿಮಾದ ಟ್ರೈಲರ್ ನೋಡಿ, ಇದು ಅದ್ಭುತವಾದ ಚಮತ್ಕಾರ!!!!, can't wait!!! ಕೆಜಿಎಫ್2 ನೋಡಲು ಕಾತುರಳಾಗಿದ್ದೇನೆ ಎಂದು ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ ಮಾಡಲ್ಲ ಅಂದಿದ್ದ ನಟಿ...KGF-2 ಟ್ರೈಲರ್ ಬಗ್ಗೆ ಗುಣಗಾನ..!  title=
file photo

ಬೆಂಗಳೂರು: ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಶೃತಿ ಹಾಸನ್‌ಗೆ ತೆಲುಗು ಮತ್ತು ತಮಿಳಿನಲ್ಲಿ ಭಾರೀ ಬೇಡಿಕೆಯಿದೆ. ಕನ್ನಡ ಚಿತ್ರರಂಗದ ಕಡೆಗೆ ಮಾತ್ರ ಮುಖ ಮಾಡಿಲ್ಲ ಎಂದಿದ್ದರು ಶೃತಿ ಹಾಸನ್. ಹಲವು ವರ್ಷಗಳ ಹಿಂದೆ ಶ್ರುತಿ ಹಾಸನ್, ಕನ್ನಡ ಸಿನಿಮಾದ ಬಗ್ಗೆ ಮಾತನಾಡಿ ಟೀಕೆಗೆ ಗುರಿಯಾಗಿದ್ದರು.

ಇದನ್ನೂ ಓದಿ: KGF Chapter 2: ಕೆಜಿಎಫ್‌2 ಸಿನಿಮಾಗೆ ಯಶ್‌ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಅಂದು ಕನ್ನಡ ಸಿನಿಮಾದಲ್ಲಿ ನಟಿಸುವ ಬಗ್ಗೆ ಕೇವಲವಾಗಿ ಮಾತನಾಡಿದ್ದ ಶೃತಿ ಹಾಸನ್ (Shruti Haasan) ಇದೀಗ ಕನ್ನಡ ಸಿನಿಮಾ ಬಗ್ಗೆಯೇ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹೌದು... ಅದು ನಮ್ಮ ಕೆಜಿಎಫ್-2 ಸಿನಿಮಾದ ಟ್ರೈಲರ್ ನೋಡಿ, ಇದು ಅದ್ಭುತವಾದ ಚಮತ್ಕಾರ!!!!,  can't wait!!! ಕೆಜಿಎಫ್2 ನೋಡಲು ಕಾತುರಳಾಗಿದ್ದೇನೆ ಎಂದು ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಬಿಗ್‌ ಬಿ​? ಸಿದ್ಧವಾಗುತ್ತಿದೆ ಅಮಿತಾಬ್‌ ಬಚ್ಚನ್ ನಟನೆಯ ಮಿನಿ ಸಿನಿ ಸೀರಿಸ್!​

ಇನ್ನು ಇದಕ್ಕೆ ಹಲವು ಕನ್ನಡಿಗರು ಕೂಡ ಕಮೆಂಟ್ ಮಾಡುತ್ತಿದ್ದು, ಅವತ್ತು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲ್ಲ ಎಂದಿದ್ರಿ. ಈಗ ನಿಮಗೆ ಅರ್ಥವಾಯಿತಾ ಕನ್ನಡ ಸಿನಿಮಾದ ಪವರ್ ಏನು ಅಂತ ಎಂದು ಪ್ರಶ್ನಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಶ್ರುತಿ ಹಾಸನ್ ಪ್ರತಿಕ್ರಿಯಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News