ಭರ್ಜರಿ ಲಾಟ್ರಿ! ಆಲಿಯಾ ಭಟ್‌ ನಟಿಸಬೇಕಿದ್ದ ಆ ಸ್ಟಾರ್​ ಮೂವಿಯಲ್ಲಿ ರಶ್ಮಿಕಾ ಮಂದಣ್ಣ!!

Rashmika Mandanna: ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರವ ನಟಿ. ಬಿಗ್​ ಸ್ಟಾರ್​ ಸಿನಿಮಾದಲ್ಲಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರಂತೆ. 

Written by - Chetana Devarmani | Last Updated : Apr 24, 2022, 04:36 PM IST
  • ಆಲಿಯಾ ಭಟ್‌ ಮಾಡಬೇಕಿದ್ದ ಆ ಸ್ಟಾರ್​ ಮೂವಿಯಲ್ಲಿ ರಶ್ಮಿಕಾ ಮಂದಣ್ಣ
  • ಹಿಂದಿಯಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ
  • ಮತ್ತೊಂದು ಬಿಗ್​ ಸ್ಟಾರ್​ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರಂತೆ
ಭರ್ಜರಿ ಲಾಟ್ರಿ! ಆಲಿಯಾ ಭಟ್‌ ನಟಿಸಬೇಕಿದ್ದ ಆ ಸ್ಟಾರ್​ ಮೂವಿಯಲ್ಲಿ ರಶ್ಮಿಕಾ ಮಂದಣ್ಣ!! title=
ರಶ್ಮಿಕಾ ಮಂದಣ್ಣ

Rashmika Mandanna: ದಕ್ಷಿಣ ಸಿನಿರಂಗದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ತಾನೊಬ್ಬ ಅದೃಷ್ಟವಂತ ನಟಿ ರಶ್ಮಿಕಾ ಮಂದಣ್ಣ ಎಂದು ಸಾಬೀತು ಮಾಡಿದ್ದಾರೆ. ಸದ್ಯ ಟಾಲಿವುಡ್, ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಈ ಬೆನ್ನಲ್ಲೇ ಮತ್ತೊಂದು ಬಿಗ್​ ಸ್ಟಾರ್​ ಸಿನಿಮಾದಲ್ಲಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರಂತೆ. ಅದು ಕೂಡ ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ನಟಿಸಬೇಕಿದ್ದ ಚಿತ್ರ ಈಗ ರಶ್ಮಿಕಾ ಕೈ ಸೇರಿದೆಯಂತೆ. ಮೊನ್ನೆಯಷ್ಟೇ ಮದುವೆಯಾದ  ನಟಿ ಆಲಿಯಾ ಭಟ್ ಈಗಾಗಲೇ RRR ಸಿನಿಮಾದಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಮತ್ತೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುವ ಆಸೆಯನ್ನು ಆಲಿಯಾ ವ್ಯಕ್ತಪಡಿಸಿದ್ದರು. ಅದಕ್ಕೆ ಸರಿಯಾಗಿ, ಜೂ.ಎನ್‌ಟಿಆರ್ ಜೊತೆಗೆ ಹೊಸ ಸಿನಿಮಾವೊಂದಕ್ಕೆ ಆಲಿಯಾರನ್ನು ಆಯ್ಕೆ ಸಹ ಮಾಡಲಾಗಿತ್ತು. ಆದರೆ ಈಗ ಆ ಪಾತ್ರ ರಶ್ಮಿಕಾ ಮಂದಣ್ಣ ಪಾಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: SS.Rajamouli New Car : ದುಬಾರಿ ಕಾರ್ ಖರೀದಿಸಿದ ಸ್ಟಾರ್ ನಿರ್ದೇಶಕ ರಾಜಮೌಳಿ!

ಮೊನ್ನೆಯಷ್ಟೇ ತಮಿಳು ಸ್ಟಾರ್​ ನಟ ದಳಪತಿ ವಿಜಯ್​ ಜೊತೆ ರಶ್ಮಿಕಾ ನಟಿಸುತ್ತಿರುವ ಸಿನಿಮಾದ ಮುಹೂರ್ತ ನೆರವೇರಿತ್ತು. ಇದೀಗ ಮತ್ತೊಂದು ಬಿಗ್​ ಸ್ಟಾರ್​ ಸಿನಿಮಾದಲ್ಲಿ ಅದೂ ಬಾಲಿವುಡ್‌ ನಟಿ ಆಲಿಯಾ ಭಟ್‌ ನಟಿಸಬೇಕಿದ್ದ ಈ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರಂತೆ. 

ಅಷ್ಟಕ್ಕೂ ಈ ಸಿನಿಮಾ ಆಲಿಯಾ ಬದಲು ರಶ್ಮಿಕಾ ಕೈ ಸೇರಿರುವುದಕ್ಕೆ ಒಂದು ಮುಖ್ಯ ಕಾರಣವಿದೆ. ಯಾವುದೇ ಪಾತ್ರ ಕೊಟ್ಟರೂ ಸರಾಗವಾಗಿ ನಟಿಸುತ್ತಾರೆ ಆಲಿಯಾ. ಇತ್ತೀಚೆಗಷ್ಟೇ ರಿಲೀಸ್​ ಆಗಿದ್ದ ಗಂಗೂಬಾಯ್​ ಕಾಥಿಯಾವಾಡಿ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡಿತ್ತು. 

ತನ್ನ ನಟನಾಶೈಲಿಯ ಮೂಲಕ ಎಲ್ಲರ ಮನ ಗೆದ್ದಿರುವ ಈ ಮುದ್ದು ಮುಖದ ಚೆಲುವೆ ಆಲಿಯಾ ಬತ್ತಳಿಕೆಯಲ್ಲಿ ಈಗಾಗಲೇ ಸಾಲು-ಸಾಲು ಸಿನಿಮಾಗಳಿವೆ. ಹೀಗಾಗಿ ಒಂದೆಡೆ ಅವರು ಫುಲ್‌ ಬ್ಯುಸಿಯಾಗಿದ್ದಾರೆ. ಅಲ್ಲದೇ, ನಟಿ ಆಲಿಯಾ ಭಟ್ ಬಹಳ ದುಬಾರಿ ನಟಿ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಆಲಿಯಾ ಬದಲಿಗೆ ಜೂ.ಎನ್‌ಟಿಆರ್ ಜೊತೆ ನಾಯಕಿಯಾಗಿ ರಶ್ಮಿಕಾರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಧ್ಯೆ ಬಾಲಿವುಡ್‌ ಸೂಪರ್‌ಸ್ಟಾರ್‌ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅನಿಮಲ್‌ ಸಿನಿಮಾದ ಚಿತ್ರೀಕರಣಕ್ಕಾಗಿ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದಾರೆ. ರಣಬೀರ್‌ ಕಪೂರ್‌ ಹಾಗೂ ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿಮಾನಿಗಳೊಂದಿಗೆ ಪೋಸ್‌ ನೀಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದೀಗ ಮತ್ತೊಂದು ಬಿಗ್‌ ಸಿನಿಮಾ ರಶ್ಮಿಕಾ ಕೈ ಸೇರಿದ್ದು, ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಇದನ್ನೂ ಓದಿ: ಕೆಜಿಎಫ್ 2 ಚಿತ್ರ ನನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ನೆನಪಿಸಿತು - ಸಂಜಯ್ ದತ್

ತೆಲುಗು ನಟ ಜ್ಯೂ.ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ. ಕೊರಟಾಲ ಶಿವ ನಿರ್ದೇಶನದ ಹೊಸ ಚಿತ್ರದಲ್ಲಿ RRR ಯಶಸ್ಸಿನ ಬೆನ್ನಲ್ಲೇ ಎನ್‌ಟಿಆರ್‌ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್‌ ನಟಿ ಆಲಿಯಾ ನಟಿಸಬೇಕಿತ್ತು. ಆದರೆ ಇದೀಗ ಈ ಸಿನಿಮಾದಲ್ಲಿ ಆಲಿಯಾ ಬದಲು ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News