ಪರಿಣಿತಿ-ರಾಘವ್ ಚಡ್ಡಾ ಮದುವೆ: ಅತಿಥಿಗಳ ಫೋನ್ ಕ್ಯಾಮೆರಾಗಳಿಗೆ ಟೇಪ್, ಬಿಗಿ ಭದ್ರತೆ

Parineeti Chopra : ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಶೀಘ್ರದಲ್ಲೇ ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಮದುವೆ ಕಾರ್ಯಕ್ರಮದ ಫೊಟೋಗಳು ವೈರಲ್‌ ಆಗದಂತೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿದೆ.

Written by - Krishna N K | Last Updated : Sep 23, 2023, 10:27 PM IST
  • ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಶೀಘ್ರದಲ್ಲೇ ಉದಯಪುರದಲ್ಲಿ ವಿವಾಹವಾಗಲಿದ್ದಾರೆ.
  • ಮದುವೆ ಕಾರ್ಯಕ್ರಮದ ಫೊಟೋಗಳು ವೈರಲ್‌ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
  • ಇದರಿಂದ ಅಧಿಕೃತವಾಗಿ ಈ ಕಪಲ್ಸ್‌ ವಿಡಿಯೋ ಬಿಡುಗಡೆ ಮಾಡುವವರೆಗೂ ಕಾಯಬೇಕಾಗುತ್ತದೆ.
ಪರಿಣಿತಿ-ರಾಘವ್ ಚಡ್ಡಾ ಮದುವೆ: ಅತಿಥಿಗಳ ಫೋನ್ ಕ್ಯಾಮೆರಾಗಳಿಗೆ ಟೇಪ್, ಬಿಗಿ ಭದ್ರತೆ title=

Parineeti Raghav marriage : ನಟಿ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ಮದುವೆ ತಯಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಈ ಜೋಡಿಯ ವಿವಾಹ ಕಾರ್ಯಕ್ರಮಗಳನ್ನು ನೋಡಲು ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಆದ್ರೆ, ಅಧಿಕೃತವಾಗಿ ಈ ಕಪಲ್ಸ್‌ ವಿಡಿಯೋ ಬಿಡುಗಡೆ ಮಾಡುವವರೆಗೂ ಕಾಯಬೇಕಾಗುತ್ತದೆ. ಏಕೆಂದ್ರೆ ಜೋಡಿ ತಮ್ಮ ಮದುವೆಯ ವಿಡಿಯೋಗಳು ವೈರಲ್‌ ಆಗದಂತೆ ಬಹಳ ಎಚ್ಚರ ವಹಿಸಿದ್ದಾರೆ. 

ಹೌದು.. ಪರಿಣಿತಿ ಚೋಪ್ರಾ ಮತ್ತು ರಾಘವ್‌ ಚಡ್ಡಾ ಸೆಪ್ಟೆಂಬರ್ 24 ರಂದು ಅದ್ಧೂರಿಯಾಗಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಮದುವೆ ಸ್ಥಳವಾದ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ಬಿಗಿ ಭದ್ರತೆಗೆ ಆಯೋಜನೆ ಮಾಡಲಾಗಿದೆ. ವಧು ಮತ್ತು ವರನ ಕುಟುಂಬಸ್ಥರು ಮತ್ತು ಗಣ್ಯ ವ್ಯಕ್ತಿಗಳು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

ಇದನ್ನೂ ಓದಿ: 'ಮಾರ್ಕ್‌ ಅಂಥೋನಿ' ಪ್ರತಿ ಟಿಕೇಟ್ ನಿಂದ ರೈತನಿಗೆ ಒಂದು ರೂ...! ʼವಿಶಾಲʼ ಹೃದಯವಂತಿಕೆ

ಇನ್ನು ತಮ್ಮ ಮದುವೆ ಫೋಟೋ ಮತ್ತು ವಿಡಿಯೋಗಳು ಎಲ್ಲಿಯೂ ವೈರಲ್‌ ಆಗದಂತೆ ಪರಿಣಿತಿ ಮತ್ತು ರಾಘವ್‌ ಎಚ್ಚರಿಕೆ ವಹಿಸುತ್ತಿದ್ದಾರೆ. ಎಲ್ಲಾ ರೀತಿಯ ವಿಷಯಗಳನ್ನು ಅತ್ಯಂತ ಗೌಪ್ಯವಾಗಿ ಮತ್ತು ಖಾಸಗಿಯಾಗಿ ಇರಿಸಲು ಬಿಗಿಯಾದ ಭದ್ರತಾ ಪಡೆಯನ್ನು ಸಹ ನಿಯೋಜಿಸಿದ್ದಾರೆ. ಅಲ್ಲದೆ, ವೀಡಿಯೊ ಮತ್ತು ಫೋಟೋ ಕ್ಲಿಕ್ ಮಾಡುವುದನ್ನು ತಡೆಯಲು ಮೊಬೈಲ್ ಕ್ಯಾಮೆರಾಗಳಿಗೆ ಕೆಂಪು ಟೇಪ್ಗಳನ್ನು ಅಂಟಿಸಲಾಗಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಈ ಹೋಟೆಲ್‌ಗಳ ಸಿಬ್ಬಂದಿ ಮತ್ತು ಇತರ ಉದ್ಯೋಗಿಗಳು ಮೂರು ದಿನಗಳವರೆಗೆ ಹೊರಗೆ ಹೋಗದಂತೆ ತಡೆಯಲಾಗಿದೆಯಂತೆ. ಯಾರಾದರೂ ಕೆಂಪು ಟೇಪ್ ಅನ್ನು ತೆಗೆದುಹಾಕಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಈ ಸ್ಟಾರ್‌ ಜೋಡಿ ರಾಜಮನೆತನದ ವಿವಾಹವನ್ನು ಸೆರೆಹಿಡಿಯಲು ದೆಹಲಿಯಿಂದ 12 ಛಾಯಾಗ್ರಾಹಕರು ಮತ್ತು ವೀಡಿಯೊಗ್ರಾಫರ್‌ಗಳು ನಿಯೋಜನೆಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News