‌"ನಾನು 41 ಸೈಜ್‌ ಧರಿಸೋದು... ಇಲ್ಲೇ ಕೊಡ್ಲಾ ಅಥವಾ ಎಲ್ಲರ ಮುಂದೆ ಕೊಡ್ಲಾ?"- ನಿರ್ಮಾಪಕನ ಮುಂದೆ ಸೌತ್‌ ಖ್ಯಾತ ನಟಿ ಖುಷ್ಬೂ ಶಾಕಿಂಗ್‌ ಹೇಳಿಕೆ

Khushbu Statement on Casting Couch: ಹೇಮಾ ಸಮಿತಿ ವರದಿಗೆ ಪ್ರತಿಕ್ರಿಯಿಸಿದ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. "ಇಲ್ಲಿ ನಡೆಯುತ್ತಿರುವ ಅನ್ಯಾಯ ತಡೆಯಲು ಹೇಮಾ ಸಮಿತಿ ಅತ್ಯಂತ ಅಗತ್ಯವಾಗಿತ್ತು. ಎಲ್ಲರೂ ಗುರುತಿಸಿಕೊಳ್ಳಲು ಇದೊಂದು ಅವಕಾಶವಾಗಬೇಕು" ಎಂದು ಹೇಳಿದ್ದರು.  

Written by - Bhavishya Shetty | Last Updated : Aug 30, 2024, 03:16 PM IST
    • ಮಲಯಾಳಂ ಚಿತ್ರರಂಗದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಹೇಮಾ ಸಮಿತಿ ವರದಿ
    • ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು
    • ಆರಂಭಿಕ ದಿನಗಳಲ್ಲಿ ನಿರ್ಮಾಪಕರಿಂದ ಕೆಟ್ಟ ಅನುಭವವಾಗಿತ್ತು ಎಂದ ನಟಿ
‌"ನಾನು 41 ಸೈಜ್‌ ಧರಿಸೋದು... ಇಲ್ಲೇ ಕೊಡ್ಲಾ ಅಥವಾ ಎಲ್ಲರ ಮುಂದೆ ಕೊಡ್ಲಾ?"- ನಿರ್ಮಾಪಕನ ಮುಂದೆ ಸೌತ್‌ ಖ್ಯಾತ ನಟಿ ಖುಷ್ಬೂ ಶಾಕಿಂಗ್‌ ಹೇಳಿಕೆ  title=
File Photo

Actress Khushbu warns producer: ಮಲಯಾಳಂ ಚಿತ್ರರಂಗದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ತಮಗಾದ ಕೆಟ್ಟ ಅನುಭವದ ಬಗ್ಗೆ ತೆರೆದಿಟ್ಟಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ದಕ್ಷಿಣ ಭಾರತದ ಚಿತ್ರರಂಗಕ್ಕೆ ಬಂದ ಆರಂಭಿಕ ದಿನಗಳಲ್ಲಿ ನಿರ್ಮಾಪಕರಿಂದ ಕೆಟ್ಟ ಅನುಭವವಾಗಿತ್ತು ಎಂದಿದ್ದಾರೆ.

ಇದನ್ನೂ ಓದಿ: ಬಿಗ್‌ ಬಿ ಅಮಿತಾಭ್ ಬಚ್ಚನ್ ತನ್ನ ಶತಕೋಟಿ ಆಸ್ತಿಯನ್ನು ಬರೆದಿರೋದು ಯಾರ ಹೆಸರಿಗೆ ಗೊತ್ತಾ?

"ನಾನು ಚಿತ್ರರಂಗದಲ್ಲಿ ಒಬ್ಬಂಟಿಯಾಗಿದ್ದೇನೆ ಎಂಬ ಕಾರಣಕ್ಕೆ ನಿರ್ಮಾಪಕನೊಬ್ಬ ನನ್ನನ್ನು ಸಂಪರ್ಕಿಸಿದ. ನನಗೆ ಇಲ್ಲಿ ಗಾಡ್ ಫಾದರ್ ಇರಲಿಲ್ಲ. ಹಾಗಾಗಿ ಒತ್ತಡಕ್ಕೆ ಮಣಿಯುತ್ತೇನೆ ಎಂದು ಆತ ಅಂದುಕೊಂಡಿರಬೇಕು. ತೆಲುಗು ಸಿನಿಮಾವೊಂದರ ಶೂಟಿಂಗ್ ನಡೆಯುತ್ತಿತ್ತು. ಆ ನಿರ್ಮಾಪಕ ನನ್ನ ಮೇಕಪ್ ಕೋಣೆಗೆ ಪ್ರವೇಶಿಸಿ ನನಗೆ ಸಿಗ್ನಲ್‌ ನೀಡುತ್ತಿದ್ದ. ಅದಕ್ಕೆ ನಾನು ನನ್ನ ಚಪ್ಪಲಿಗಳನ್ನು ತೆಗೆದು, ನಾನು 41 ಸೈಜ್ (ಚಪ್ಪಲಿ ಗಾತ್ರ) ಧರಿಸೋದು, ಇಲ್ಲಿಯೇ ಕೊಡಲಾ? (ಕಪಾಳಮೋಕ್ಷ) ಅಥವಾ ಎಲ್ಲರ ಮುಂದೆ ಹೊಡೆಯಲಾ? ಎಂದು ಕೇಳಿದೆ" ಎಂದು ಖುಷ್ಬು ವಾರ್ನಿಂಗ್‌ ಕೊಟ್ಟ ದಿನದ ಬಗ್ಗೆ ಮಾತನಾಡಿದ್ದಾರೆ.

ಹೇಮಾ ಸಮಿತಿ ವರದಿಗೆ ಪ್ರತಿಕ್ರಿಯಿಸಿದ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿತ್ತು. "ಇಲ್ಲಿ ನಡೆಯುತ್ತಿರುವ ಅನ್ಯಾಯ ತಡೆಯಲು ಹೇಮಾ ಸಮಿತಿ ಅತ್ಯಂತ ಅಗತ್ಯವಾಗಿತ್ತು. ಎಲ್ಲರೂ ಗುರುತಿಸಿಕೊಳ್ಳಲು ಇದೊಂದು ಅವಕಾಶವಾಗಬೇಕು" ಎಂದು ಹೇಳಿದ್ದರು.

ಇದನ್ನೂ ಓದಿ:  ಎಲ್ಲಾ ಮಾದರಿ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್‌ ವೇಗಿ: 10 ರನ್‌ʼಗೆ 4 ವಿಕೆಟ್‌ ಕಬಳಿಸಿ ಮಿಂಚಿದ್ದ ಬೌಲರ್ ಈತ

"ನೀವು ಮುಕ್ತವಾಗಿ ಬಹಿರಂಗಪಡಿಸಿದ್ದೀರಿ. ಅದಕ್ಕೆ ಇಂದು ಅಥವಾ ನಾಳೆ ಎಂಬುದು ಮುಖ್ಯವಲ್ಲ. ನೀವು ಎಷ್ಟು ಬೇಗ ಹೇಳುತ್ತೀರೋ ಅಷ್ಟು ಬೇಗ ಗಾಯಗಳು ಗುಣವಾಗುತ್ತವೆ ಮತ್ತು ತನಿಖೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಬದುಕುಳಿದವರು ನಿಮಗೆ ಮತ್ತು ನನಗೆ ಅಪರಿಚಿತರಾಗಿರುತ್ತಾರೆ ಆದರೆ ಅವರಿಗೆ ನಮ್ಮ ಬೆಂಬಲ ಬೇಕು. ನನ್ನನ್ನು ರಕ್ಷಿಸಬೇಕಾಗಿದ್ದ ಬಲಿಷ್ಠ ತೋಳುಗಳಿಂದ ನಾನು ಶೋಷಣೆಗೆ ಒಳಗಾಗಿದ್ದೆ. ಈ ಶೋಷಣೆ ನಿಲ್ಲಬೇಕು ಮತ್ತು ಮಹಿಳೆಯರು ರಾಜಿ ಮಾಡಿಕೊಳ್ಳಬೇಡಿ" ಎಂದು ನಟಿ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News