ಮಹಿಳೆಯರ ಕಣ್ಣು ಕುಕ್ಕುತ್ತಿವೆ ಅರಮನೆಯ ಆಭರಣಗಳು.. ನಟಿ ಆರಾಧನ ಅಂದಕ್ಕೆ ಪಡ್ಡೆಹೈಕ್ಳ ಕ್ಲೀನ್ ಬೋಲ್ಡ್!

Actress Aradhana: ನಗರದ ಬೆಂಗಳೂರು ಅರಮನೆ ಆರಂಭವಾದ ಮೂರು ದಿನಗಳ ವಿನೂತನ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ "ದಿ ಜ್ಯುವೆಲ್ಲರಿ ಶೋ" ಅನ್ನು ನಟಿ ಮಾಲಾಶ್ರೀ ಮತ್ತು ಅವರ ಪುತ್ರಿ, ದಿ ಜ್ಯುವೆಲ್ಲರಿ ಶೋ ಬ್ರಾಂಡ್ ಅಂಬಾಸಿಡರ್ ಆಗಿರುವ ನಟಿ ಆರಾಧನಾ ಅವರು ಉದ್ಘಾಟಿಸಿದರು.  

Written by - Savita M B | Last Updated : Aug 24, 2024, 11:37 AM IST
  • ಗ್ರಾಹಕರ ಮನಗೆಲ್ಲುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.
  • ಆಭರಣ ಮೇಳದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದರು.
ಮಹಿಳೆಯರ ಕಣ್ಣು ಕುಕ್ಕುತ್ತಿವೆ ಅರಮನೆಯ ಆಭರಣಗಳು.. ನಟಿ ಆರಾಧನ ಅಂದಕ್ಕೆ ಪಡ್ಡೆಹೈಕ್ಳ ಕ್ಲೀನ್ ಬೋಲ್ಡ್! title=

ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್. ಮತ್ತು ಹೇಮಲತಾ ಜಗದೀಶ್ ಅವರು ಈ ಮೇಳ ಆಯೋಜಿಸಿದ್ದು, ಶುಕ್ರವಾರದಿಂದ ಮುೂರು ದಿನಗಳ ಕಾಲ ನಡೆಯಲಿದೆ. ದೇಶದ 100 ಅಗ್ರ ಶ್ರೇಣಿಯ ಆಭರಣ ತಯಾರಕರು ಇದರಲ್ಲಿ ಭಾಗವಹಿಸಿದ್ದಾರೆ.

ಮೇಳ ಉದ್ಘಾಟಿಸಿ ಮಾತನಾಡಿದ ನಟಿ ಆರಾಧನಾ, ಅತ್ಯಂತ ಪ್ರತಿಷ್ಠಿತ ಜ್ಯುವೆಲ್ಲರಿ ಶೋ ಇದಾಗಿದ್ದು, ಇಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳ ಸಂಗ್ರಹ ತುಂಬಾ ಚೆನ್ನಾಗಿದೆ. ಮುಂಬರುವ ಮದುವೆ ಮತ್ತು ಹಬ್ಬದ ಸೀಜನ್ ಗೆ ಅಗತ್ಯವಿರುವ ಅತ್ಯುತ್ತಮ ಆಭರಣಗಳು ಇಲ್ಲಿ ಲಭ್ಯವಿವೆ. ಅಪೂರ್ವ ಮತ್ತು ಲಿಮಿಟೆಡ್ ಆಡಿಷನ್ ಆಭರಣಗಳು ಮೇಳದಲ್ಲಿ ಇದ್ದು, ರಿಯಾಯಿತಿಯೂ ಸಿಗುವುದರರಿಂದ ಗ್ರಾಹಕರ ಮನಗೆಲ್ಲುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.

ನಟಿ ಮಾಲಾಶ್ರೀ ಮಾತನಾಡಿ, ನಾನು ಮೊದಲಿನಿಂದಲೂ ಆಭರಣ, ಅದರಲ್ಲೂ ಮುಖವಾಗಿ ವಜ್ರದ ಆಭರಣಗಳ ಪ್ರಿಯೆ. ಇಲ್ಲಿನ ವೈವಿದ್ಯಮಯ ವಜ್ರಾಭರಣಗಳನ್ನು ನೋಡಿ ಅಚ್ಚರಿಯಾಗಿದೆ. 90ಕ್ಕೂ ಹೆಚ್ಚು ಬ್ರಾಂಡ್ ನ ಬೇರೆ ಬೇರೆ ಡಿಸೈನ್ ಗಳು ಇಲ್ಲಿ ಲಭ್ಯವಿವೆ. ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಮದುವೆ ಸೀಜನ್ ಇರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಆಭರಣ ಮೇಳದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದರು.

ಮೇಳದಲ್ಲಿ ಲಭ್ಯವಿರುವ ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿದ್ದು, ವಜ್ರಾಭರಣಗಳು ಅಂತಾರಾಷ್ಟ್ರೀಯ ಜಿಐಎ/ಐಜಿಐ ಟ್ಯಾಗ್ ಹೊಂದಿವೆ. ಆಭರಣ ಮಳಿಗೆಗಳ ಸದಸ್ಯರು ಆಭರಣಗಳ ವೈಶಿಷ್ಟ್ಯತೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ಗ್ರಾಹಕರ ಅಭಿರುಚಿ ಮತ್ತು ಬಜೆಟ್‍ ಗೆ ಅನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಲಭ್ಯವಿವೆ.

ಇದನ್ನೂ ಓದಿ-ಮದುವೆ ಪ್ರಶ್ನೆಗಳಿಗೆ ಉತ್ತರ... ಕೊನೆಗೂ ಪ್ರೀತಿಯಲ್ಲಿ ಬಿದ್ದ ಆಂಕರ್‌ ಅನುಶ್ರೀ!? ಮಾತಿನ ಮಲ್ಲಿಯ ʼಜೋಡಿʼ ಯಾರು?
 
ಬೆಂಗಳೂರಿನ ಅನನ್ಯ ಜ್ಯುವೆಲ್ಸ್, ಅಭೂಷಣ್, ಅರ್ಜುನ ವರ, ಗಜರಾಜ್, ಎಂ.ಪಿ. ಸ್ವರ್ಣ ಮಹಲ್, ನಿಕಾರ್, ನಿರ್ಮಲ್ ಜುವೆಲ್ಸ್, ಪಂಚ ಕೇಸರಿ ಬಡೇರ, ಪಿಎಂಜೆ, ರಾಜ್ ಡೈಮಂಡ್ಸ್, ಸಿಂಹ ಜುವೆಲ್ಸ್, ಶ್ರೀ ಗಣೇಶ ಡೈಮಂಡ್ಸ್, ವರಶ್ರೀ, ಕಳಸ, ಶ್ರೀ ಕೃಷ್ಣ ಡೈಮಂಡ್ಸ್, ಬಿ.ಎನ್.ಆರ್ ಗೋಲ್ಡ್, ಧವನಂ, ಸನ್ ರೈಸ್ ಆಭರಣ್, ಸಾಗರ್ ಜುವೆಲ್, ಎನ್.ಎಸ್, ಜುವೆಲ್ಸ್, ಸೃಷ್ಟಿ, ಅಮ್ರಪಾಲಿ, ಮಹೇಂದ್ರ ಡೈಮಂಡ್ಸ್, ಎಂ.ಆರ್.ಕೆ. ಜೀವಾ, ವಿವಾಂತ್, ಬ್ಲೋಬೈ ಕೀರ್ತಿಲಾಲ್, ವಿನ್ಯಾಸ, ಸಂಕೇಶ್ ಸುರಾನ, ಟ್ರೈ ದಿಯಾ, ವಂಡರ್ ಡೈಮಂಡ್ಸ್, ಕೋಹಿರಾ, ಎವಾಲ್ ಜುವೆಲ್ಸ್, ರೂಪಂ ಸಿಲ್ವರ್, ಸಿಲ್ವರ್ ಗ್ಯಾಲರಿ, ಮೈ ಸಿಲ್ವರ್, ಸ್ಯಾಂಚೀಸ್, ಕಿನಾಶೆ, ಟ್ಟೈಲ್ ಔರಾ, ಮದನ್ ಜೆಮ್ಸ್, ತಾರ್ ಹ್ಯಾಂಡಿಕ್ರಾಪ್ಟ್ಸ್  ಮತ್ತಿತರ ಮಳಿಗೆಗಳು ಮೇಳದಲ್ಲಿವೆ.

ದಿ ಜ್ಯುವೆಲ್ಲರಿ ಶೋ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ ಉದ್ಯಮಿಗಳಾದ ಲಕ್ಷ್ಮೀ ಗೋವಿಂದರಾಜು, ಪಲ್ಲವಿ ಸಿ.ಟಿ.ರವಿ, ಫ್ಯಾಷನ್ ಡಿಸೈನರ್ ಅರ್ಪಿತಾ ರಣದೀಪ್ ಮತ್ತಿತರರು ಉಪಸ್ಥಿತರಿದ್ದರು. 

ಇದನ್ನೂ ಓದಿ-ಪತ್ನಿಯ ಎದೆಹಾಲು ಕುಡಿಯುತ್ತಿದ್ದನಂತೆ ಈ ಖ್ಯಾತ ನಟ..! ಏಕೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

Trending News