ಎರಡು ಮದುವೆಯಾಗಿದ್ದರೂ ಸಹ ಶರತ್‌ ʼಒಂಟಿʼಯಾಗಿದ್ದರು..! ಕಾರಣ ಏನ್‌ ಗೊತ್ತಾ..?

Sarath babu wife : ನಟ ಶರತ್‌ ಬಾಬು ಅವರು 1974ರಲ್ಲಿ ಖ್ಯಾತ ನಟಿ ರಮಾ ಪ್ರಭಾ ಅವರ ಜೊತೆ ಮದುವೆಯಾದರು. ಅವರು ಬೇರ್ಪಡುವ ಮೊದಲು ಒಂದು ದಶಕಕ್ಕೂ ಹೆಚ್ಚು ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ಆದ್ರೆ ಅವರ ಸಂಬಂಧ ಹದಗೆಡಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

Written by - Krishna N K | Last Updated : May 22, 2023, 04:25 PM IST
  • ಹಿರಿಯ ನಟ ಶರತ್‌ ಬಾಬು ಇನ್ನಿಲ್ಲ.
  • ಆರೋಗ್ಯ ಸಮಸ್ಯಯಿಂದ ನಟ ನಿಧನರಾಗಿದ್ದಾರೆ.
  • ಎರಡು ಮದುವೆಯಾಗಿದ್ದರೂ ಸಹ ಶರತ್‌ ʼಒಂಟಿʼಯಾಗಿದ್ದರು.
ಎರಡು ಮದುವೆಯಾಗಿದ್ದರೂ ಸಹ ಶರತ್‌ ʼಒಂಟಿʼಯಾಗಿದ್ದರು..! ಕಾರಣ ಏನ್‌ ಗೊತ್ತಾ..? title=

Sarath Babu passed away : ಹಿರಿಯ ನಟ ಶರತ್ ಬಾಬು ಅವರು ಅನಾರೋಗ್ಯ ಸಮಸ್ಯೆಯಿಂದ ಇಂದು ನಿಧನರಾಗಿದ್ದಾರೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಬಹು ಅಂಗಾಂಗ ವೈಫಲ್ಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದ  ಶರತ್‌ ಅವರು ತಮ್ಮ ಕೊನೆಗಾಲದವರೆಗೂ ಒಂಟಿಯಾಗಿ ಜೀವನ ನಡೆಸುತ್ತಿದ್ದರು ಎನ್ನುವುದೇ ವಿಪರ್ಯಾಸ.

ಹೌದು.. ಸ್ಪುರದ್ರೂಪಿ ನಟ ಶರತ್‌ ಬಾಬು ಅವರು 1974ರಲ್ಲಿ ಖ್ಯಾತ ನಟಿ ರಮಾ ಪ್ರಭಾ ಅವರ ಜೊತೆ ಮದುವೆಯಾದರು. ಅವರು ಬೇರ್ಪಡುವ ಮೊದಲು ಒಂದು ದಶಕಕ್ಕೂ ಹೆಚ್ಚು ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ಆದ್ರೆ ಅವರ ಸಂಬಂಧ ಹದಗೆಡಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇಬ್ಬರೂ ಆಗಾಗ್ಗೆ ಒಬ್ಬರಮೇಲೋಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತಿದ್ದರು. ವಿಶೇಷವಾಗಿ ರಮಾ ಅವರು ಶರತ್ ತಮ್ಮನ್ನು ದುರುದ್ದೇಶದಿಂದ ಪ್ರೀತಿಸುತ್ತಿದ್ದರು ಎಂದು ಹೇಳುವ ಮೂಲಕ ಸಂಚನ ಸೃಷ್ಟಿಸಿದ್ದರು.

ಇದನ್ನೂ ಓದಿ: Sarath Babu : ಖ್ಯಾತ ಹಿರಿಯ ನಟ ಶರತ್‌ ಬಾಬು ನಿಧನ..!

ಶರತ್ ಮತ್ತು ರಮಾ ಇಬ್ಬರೂ ಸೌತ್ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇದಲ್ಲದೆ, ಶರತ್ ಅವರು ಸಿನಿ ಪ್ರವೇಶದ ಒಂದು ದಶಕದ ನಂತರ ರಮಾ ಅವರು ಸಿನಿರಂಗ ಪ್ರವೇಶಿಸಿದರು ಆದರೆ ಶೀಘ್ರದಲ್ಲೇ ಉದ್ಯಮದಲ್ಲಿ ಜನಪ್ರಿಯರಾದರು. ಇಬ್ಬರು ತಮ್ಮ ಸ್ನೇಹಿತರ ಮೂಲಕ ಭೇಟಿಯಾಗಿ, ಸ್ನೇಹಿತರಾದರು. ಒಟ್ಟಿಗೆ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ಈ ಜೋಡಿ ಎಷ್ಟು ಹತ್ತಿರವಾಯಿತು ಎಂದರೆ ಅವರು ಲಿವ್-ಇನ್ ಸಂಬಂಧವನ್ನು ಪ್ರವೇಶಿಸಿದರು. ರಮಾ ಮತ್ತು ಶರತ್ ಮದುವೆಯಾಗಿದ್ದಾರೆ ಎಂದು ಹೇಳುತ್ತಿದ್ದ ಬಹಳಷ್ಟು ಮಾಧ್ಯಮಗಳಿಗೆ ಇದು ಗೊಂದಲದ ವಿಷಯವಾಗಿತ್ತು.

ರಮಾ ಮತ್ತು ಶರತ್ 1974 ರಲ್ಲಿ ಮದುವೆಯಾದರು. ಸುಮಾರು 14 ರಿಂದ 15 ವರ್ಷಗಳ ಕಾಲ ಒಟ್ಟಿಗೆ ಇದ್ದರು. ನಂತರ ಅವರು ಇಬ್ಬರು ವಿಚ್ಛೇದನ ಪಡೆದುಕೊಂಡರು. ನಂತರ ಶರತ್‌ 1990 ರಲ್ಲಿ ಸ್ನೇಹಾ ನಂಬಿಯಾರ್ ಅವರನ್ನು ವಿವಾಹವಾದರು. 21 ವರ್ಷಗಳ ಕಾಲ ಒಟ್ಟಿಗೆ ಇದ್ದ ಜೋಡಿ 2011 ರಲ್ಲಿ ಬೇರ್ಪಟ್ಟರು. ಅದ್ರೆ, ರಮಾ ಮತ್ತು ಶರತ್ ಪರಸ್ಪರ ದೂರ ಸರಿಯಲು ಕಾರಣವೇನು ಅಂತ ಇಂದಿಗೂ ತಿಳಿದಿಲ್ಲ. 

ಇದನ್ನೂ ಓದಿ: Sarath Babu Movie: ಶರತ್ ಬಾಬು ಅಮೃತವರ್ಷಿಣಿ ಸಿನಿಮಾವಲ್ಲದೇ ಇನ್ನು ಯಾವ ಯಾವ ಚಿತ್ರಗಳಲ್ಲಿ ನಟಿಸಿದ್ದಾರೆ ಗೊತ್ತಾ..?

ಆದರೆ, ಶರತ್ ತಮಗೆ ಮೋಸ ಮಾಡಿದ್ದಾನೆ, ತಮ್ಮ ಆಸ್ತಿಗಾಗಿ ತನ್ನೊಂದಿಗೆ ಇದ್ದಾನೆ ಎಂದು ರಮಾ ಹೇಳಿಕೊಂಡಿದ್ದರು. ಇದನ್ನು ಸ್ಪಷ್ಟಪಡಿಸಲು, ಶರತ್ ಸಂದರ್ಶನವೊಂದರಲ್ಲಿ ರಮಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ನಾನು ಬೆಳ್ಳಿ ಚಮಚದೊಂದಿಗೆ ಜನಿಸಿದವನು, ಅವರ ಆಸ್ತಿಯನ್ನು ನಾನು ತೆಗೆದುಕೊಂಡಿಲ್ಲ ಎಂದು ರಮಾ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದರು. ಒಟ್ಟಾರೆಯಾಗಿ ತಮ್ಮ ನಟನೆಯಿಂದ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಒಬ್ಬ ಉತ್ತಮ ನಟ ಇನ್ನಿಲ್ಲ ಎಂಬುವುದು ವಿಷಾದಕರವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News