'ಬಾಹುಬಲಿ' ಪ್ರಭಾಸ್ ಇನ್ಸ್ಟಾಗ್ರಾಂ ಗೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ?

 ಬಾಹುಬಲಿ ಸಿನಿಮಾದ ಮೂಲಕ ಭಾರತೀಯ ಚಲನಚಿತ್ರರಂಗದದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟನೆಂದರೆ ಅದು ನಿಸ್ಸಂದೇಹವಾಗಿ ಪ್ರಭಾಸ್. ಹೌದು ಈ ಚಿತ್ರ ಮಾಡಿದ ಮೋಡಿಯೇ ಅಂತದ್ದು. ಮೇಕಿಂಗ್ ನಲ್ಲಿ ಐತಿಹಾಸಿಕ ಹಾಗೂ ಚಿತ್ರದಂತೆ ಹೊಲಿದರೂ ಕೂಡ ಇದೊಂದು ಕಾಲ್ಪನಿಕ ಕಥೆ .ಇಂತಹ ಕಥೆ ಮೂಲಕ  ಚಿತ್ರದ ಫ್ರೇಮ್ ನಲ್ಲಿಯೂ ಕೂಡ ಪ್ರೇಕ್ಷಕರಲ್ಲಿ ಕುತೂಹಲವನ್ನು ಈ ಸಿನಿಮಾ ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು.

Last Updated : Apr 19, 2019, 07:33 PM IST
'ಬಾಹುಬಲಿ' ಪ್ರಭಾಸ್ ಇನ್ಸ್ಟಾಗ್ರಾಂ ಗೆ ಎಂಟ್ರಿ ಕೊಟ್ಟಿದ್ದು ಹೇಗೆ ಗೊತ್ತಾ? title=
file photo

ನವದೆಹಲಿ:  ಬಾಹುಬಲಿ ಸಿನಿಮಾದ ಮೂಲಕ ಭಾರತೀಯ ಚಲನಚಿತ್ರರಂಗದದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟನೆಂದರೆ ಅದು ನಿಸ್ಸಂದೇಹವಾಗಿ ಪ್ರಭಾಸ್. ಹೌದು ಈ ಚಿತ್ರ ಮಾಡಿದ ಮೋಡಿಯೇ ಅಂತದ್ದು. ಮೇಕಿಂಗ್ ನಲ್ಲಿ ಐತಿಹಾಸಿಕ ಹಾಗೂ ಚಿತ್ರದಂತೆ ಹೊಲಿದರೂ ಕೂಡ ಇದೊಂದು ಕಾಲ್ಪನಿಕ ಕಥೆ .ಇಂತಹ ಕಥೆ ಮೂಲಕ  ಚಿತ್ರದ ಫ್ರೇಮ್ ನಲ್ಲಿಯೂ ಕೂಡ ಪ್ರೇಕ್ಷಕರಲ್ಲಿ ಕುತೂಹಲವನ್ನು ಈ ಸಿನಿಮಾ ಹಿಡಿದಿಡುವಲ್ಲಿ ಯಶಸ್ವಿಯಾಗಿತ್ತು.

 
 
 
 

 
 
 
 
 
 
 
 
 
 
 

A post shared by Prabhas (@actorprabhas) on

ಈಗ ಅಷ್ಟಕ್ಕೂ ನಾವು ಹೇಳಹೊರಟಿರುವುದು ಮತ್ತೊಂದು ಬಾಹುಬಲಿ ಸಿನಿಮಾದ ಕುರಿತಾಗಿ ಅಲ್ಲ. ಬದಲಾಗಿ ಬಾಹುಬಲಿ ಪ್ರಭಾಸ್ ಅವರು ಫೋಟೋ ಶೇರಿಂಗ್ ವೇದಿಕೆಯಾಗಿರುವ ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿರುವ ಬಗ್ಗೆ. ಸಾಮಾನ್ಯವಾಗಿ ಇದು ಸೋಶಿಯಲ್ ಮೀಡಿಯಾ ಜಮಾನ ಪ್ರತಿಯೊಬ್ಬರೂ ಕೂಡ ತಮ್ಮದೇ ತಮ್ಮ ಭಿನ್ನ ಭಿನ್ನ ಫೋಟೋಗಳನ್ನು ಇದರಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲ ಆಕ್ಟಿವ್ ಆಗಿರುತ್ತಾರೆ. ಜನ ಸಾಮಾನ್ಯರಂತು ತಮ್ಮ ನೆಚ್ಚಿನ ಹೀರೋಗಳ ಖಾತೆಯನ್ನು ಫಾಲೋ ಮಾಡುವುದೆಂದರೆ ಎಲ್ಲಿಲ್ಲದ ಸಂತಸ ಅವರಿಗೆ.ಈಗ ಈ ಹಿನ್ನಲೆಯಲ್ಲಿ ಅಭಿಮಾನಿಗಳನ್ನು ತಲುಪುವ ನಿಟ್ಟಿನಲ್ಲಿ ಬಾಹುಬಲಿ ಪ್ರಬಾಸ್ ಈಗ ಇನ್ಸ್ಟಾಗ್ರಾಂಗೆ  ಪ್ರವೇಶಿಸಿದ್ದಾರೆ.

ವಿಶೇಷವೆಂದರೆ ಅವರು ತಮ್ಮ ಬಾಹುಬಲಿ ಸಿನಿಮಾದಲ್ಲಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.ಈ ಫೋಟೋ ಎರಡು ಕತ್ತಿಗಳಿಂದ ಎದುರಾಳಿಯ ಹೋರಾಟಕ್ಕೆ ತಡೆಯೊಡ್ದುವಂತಿದೆ.ಈವರೆಗೆ ಈ ಫೋಟೋವನ್ನು ಸುಮಾರು 3 ಲಕ್ಷ 38 ಸಾವಿರ ಜನರು ಲೈಕ್ ಮಾಡಿದ್ದಾರೆ. ಪ್ರಬಾಸ್ ಇನ್ಸ್ಟಾ ಗ್ರಾಂ ಗೆ ಎಂಟ್ರಿ  ಕೊಟ್ಟ ಕೇವಲ ಒಂದೇ ದಿನದಲ್ಲಿ  ಬರೋಬ್ಬರಿ 8 ಲಕ್ಷ 95 ಸಾವಿರ ಜನರು ಅವರನ್ನು ಈ ವೇದಿಕೆಯಲ್ಲಿ ಫಾಲೋ ಮಾಡಿದ್ದಾರೆ.
 

Trending News