War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!

War 2 Movie Updates: ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ ೨ ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.

Written by - Puttaraj K Alur | Last Updated : Aug 19, 2024, 07:48 PM IST
  • War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ
  • ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಜೂನಿಯರ್‌ NTR ಕೈಗಳಿಗೆ ಗಾಯ
  • ಆಸ್ಪತ್ರೆಗೆ ದಾಖಲಾಗಿರುವ ನಟನಿಗೆ 2 ತಿಂಗಳ ಬೆಡ್‌ ರೆಸ್ಟ್‌ ಹೇಳಿರುವ ವೈದ್ಯರು
War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು! title=
ಜೂನಿಯರ್ NTRಗೆ ಗಾಯ!

War 2 Movie Updates: ಬಹುನಿರೀಕ್ಷಿತ War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಜೂನಿಯರ್ NTR ಮತ್ತು ಹೃತಿಕ್ ರೋಷನ್ ಸೀಕ್ವೆಲ್ War 2ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಈ ಮಧ್ಯೆ ಜ್ಯೂನಿಯರ್ NTR ಅವರು ಸೆಟ್‌ನಲ್ಲಿ ಗಾಯಗೊಂಡಿದ್ದು, ಅವರಿಗೆ ವೈದ್ಯರು 2 ತಿಂಗಳ ಬೆಡ್ ರೆಸ್ಟ್‌ಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆ ಜ್ಯೂನಿಯರ್ NTR ಭಾಗದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.  

ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್.. ಬೆಲೆ ತಿಳಿದ್ರೆ ತಲೆ ತಿರುಗುತ್ತೆ..! ನಡೆದಾಡುವ ಅರಮೆನೆ ಗುರು..

ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ 2 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.

ಸುಮಾರು 200 ಕೋಟಿ ರೂ. ವೆಚ್ಚದಲ್ಲಿ War 2 ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಜೂನಿಯರ್ NTR & ಹೃತಿಕ್ ರೋಷನ್ ಜೊತೆಗೆ ಜಾನ್ ಅಬ್ರಹಾಂ, ಕಿಯಾರಾ ಅಡ್ವಾಣಿ, ಶಬೀರ್ ಅಹ್ಲುವಾಲಿಯಾ & ಪಾರ್ಥ ಸಿದ್ಧಪುರ ಸೇರಿದಂತೆ ಹಲವರು ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು 2025ರ ಆಗಸ್ಟ್ 14ರಂದು ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಲಾಗಿದೆ.  

ಇದನ್ನೂ ಓದಿ: ಅಂದು ದರ್ಶನ್‌ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್‌ ಮಾಡಿ ನೋಡೋಣ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News