ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್‌ ಭಾವನಾತ್ಮಕ ಬರಹ

ಜೇಮ್ಸ್‌ ಟೀಸರ್‌ ರಿಲೀಸ್‌ ಆಗಿ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್‌ ವೀವ್ಸ್‌ ಗಡಿಯನ್ನ ದಾಟಿದೆ. ಅರ್ಧ ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಕೂಡ ಗಿಟ್ಟಿಸಿದೆ. ಆದರೆ ಈ ಹೊತ್ತಲ್ಲೇ ನಟ ಜಗ್ಗೇಶ್‌ ಹಂಚಿಕೊಂಡಿರುವ‌ ಆ ಒಂದು ಭಾವನಾತ್ಮಕ ಪೋಸ್ಟ್‌ ಪವರ್‌ ಸ್ಟಾರ್‌ ನೆನಪನ್ನು ಮತ್ತೆ ಮತ್ತೆ ಕಾಡುವಂತೆ ಮಾಡಿದೆ.

Written by - Zee Kannada News Desk | Last Updated : Feb 12, 2022, 09:45 PM IST
  • ಜಗ್ಗೇಶ್‌ ತಮ್ಮ ಪೋಸ್ಟ್‌ನಲ್ಲಿ ಭಾವನಾತ್ಮಕವಾಗಿ ಹೇಳಿಕೊಂಡಂತೆ, ‘’ಮಂತ್ರಾಲಯದಲ್ಲಿ ಏಪ್ರಿಲ್ 5, 2021ರ ಸೋಮವಾರ ಪುನೀತ್ ಜೊತೆಗೆ ಕೊನೇ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದ್‌ರಾಮನನ್ನು.. ಈ ಅಪರೂಪದ ವಿಡಿಯೋ ಕಳಿಸಿದ ಮಂತ್ರಾಲಯ ಪಿಆರ್‌ಓ ನರಸಿಂಹಾಚಾರ್ಯ ಅವರಿಗೆ ಧನ್ಯವಾದ. ಪುನೀತ್ ಅಲ್ಲೇ ರಾಯರ ಜೊತೆ ಉಳಿದುಬಿಟ್ಟ’’ ಎಂದು ನಟ ಜಗ್ಗೇಶ್ ಬರೆದುಕೊಂಡಿದ್ದಾರೆ. ಇದು ಅಪ್ಪು ಅಭಿಮಾನಿಗಳ ಕಣ್ಣು ಒದ್ದೆ ಮಾಡುತ್ತಿದೆ.
ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಬಗ್ಗೆ ಜಗ್ಗೇಶ್‌ ಭಾವನಾತ್ಮಕ ಬರಹ title=

ಬೆಂಗಳೂರು: ಜೇಮ್ಸ್‌ ಟೀಸರ್‌ ರಿಲೀಸ್‌ ಆಗಿ ಕೆಲವೇ ಗಂಟೆಗಳಲ್ಲಿ 10 ಮಿಲಿಯನ್‌ ವೀವ್ಸ್‌ ಗಡಿಯನ್ನ ದಾಟಿದೆ. ಅರ್ಧ ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಕೂಡ ಗಿಟ್ಟಿಸಿದೆ. ಆದರೆ ಈ ಹೊತ್ತಲ್ಲೇ ನಟ ಜಗ್ಗೇಶ್‌ ಹಂಚಿಕೊಂಡಿರುವ‌ ಆ ಒಂದು ಭಾವನಾತ್ಮಕ ಪೋಸ್ಟ್‌ ಪವರ್‌ ಸ್ಟಾರ್‌ ನೆನಪನ್ನು ಮತ್ತೆ ಮತ್ತೆ ಕಾಡುವಂತೆ ಮಾಡಿದೆ.

ಹೌದು, ಅಪ್ಪು ಇಂದು ನಮ್ಮೊಂದಿಗಿಲ್ಲ.. ಈಗ ಉಳಿದಿರುವುದು ಅವರ ನೆನಪು ಮಾತ್ರ. ಹೀಗಾಗಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬಿಟ್ಟು ಹೋದ ಕೊನೇ ಚಿತ್ರ ಜೇಮ್ಸ್ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಅಚ್ಚಳಿಯದ ಉಳಿದುಬಿಟ್ಟಿದೆ. ನಿನ್ನೆ ರಿಲೀಸ್‌ ಆಗಿದ್ದ ಜೇಮ್ಸ್‌ ಚಿತ್ರದ ಟೀಸರ್‌ ಸಿಕ್ಕಾಪಟ್ಟೆ ಹವಾ ಕ್ರಿಯೇಟ್‌ ಮಾಡಿದೆ. ಆದರೆ ಈ ಹೊತ್ತಲ್ಲೇ ನಟ ಜಗ್ಗೇಶ್‌ ಹಂಚಿಕೊಂಡಿರುವ ಆ ಒಂದು ಪೋಸ್ಟ್‌ ಅಭಿಮಾನಿಗಳ ಕಣ್ಣು ಒದ್ದೆ ಮಾಡುತ್ತಿದೆ.

ಕಾಡುತಿದೆ ನೆನಪು
ಅಕ್ಟೋಬರ್ 29 ರಂದು ಯಾರೂ ಊಹಿಸದ ದುರ್ಘಟನೆ ನಡೆದು ಹೋಗಿತ್ತು. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಮರಣ ಎಲ್ಲರಿಗೂ ಆಘಾತ ನೀಡಿತ್ತು. ಹೀಗೆ ಅಪ್ಪು ಅವರನ್ನು ಕಳೆದುಕೊಂಡು ಸುಮಾರು 3 ತಿಂಗಳು ಉರುಳಿದೆ. ನಟ ಜಗ್ಗೇಶ್‌ ಅಪ್ಪು ಅವರ ಹಳೆಯ ನೆನಪೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್

ವಿಡಿಯೋ ವೈರಲ್
ಅಂದಹಾಗೆ ದೊಡ್ಮನೆಗೂ ಮಂತ್ರಾಲಯಕ್ಕೂ ಅವಿನಾಭಾವ ಸಂಬಂಧ. ವರನಟ ಡಾ.ರಾಜ್‌ಕುಮಾರ್‌ ಕೂಡ ರಾಯರ ಭಕ್ತರು. ಹೀಗೆ ಅಪ್ಪು ಕೂಡ ಆಗಾಗ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಿದ್ದರು. 2021ರ ಏಪ್ರಿಲ್‌ನಲ್ಲಿ ಅಪ್ಪು ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದರು. ಆ ಅಪರೂಪದ ವಿಡಿಯೋವನ್ನು ನವರಸ ನಾಯಕ ಜಗ್ಗೇಶ್ ಶೇರ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್‌ ಆಗುತ್ತಿದೆ.

ಭಾವನಾತ್ಮಕ ಪೋಸ್ಟ್
ಜಗ್ಗೇಶ್‌ ತಮ್ಮ ಪೋಸ್ಟ್‌ನಲ್ಲಿ ಭಾವನಾತ್ಮಕವಾಗಿ ಹೇಳಿಕೊಂಡಂತೆ, ‘’ಮಂತ್ರಾಲಯದಲ್ಲಿ ಏಪ್ರಿಲ್ 5, 2021ರ ಸೋಮವಾರ ಪುನೀತ್ ಜೊತೆಗೆ ಕೊನೇ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದ್‌ರಾಮನನ್ನು.. ಈ ಅಪರೂಪದ ವಿಡಿಯೋ ಕಳಿಸಿದ ಮಂತ್ರಾಲಯ ಪಿಆರ್‌ಓ ನರಸಿಂಹಾಚಾರ್ಯ ಅವರಿಗೆ ಧನ್ಯವಾದ. ಪುನೀತ್ ಅಲ್ಲೇ ರಾಯರ ಜೊತೆ ಉಳಿದುಬಿಟ್ಟ’’ ಎಂದು ನಟ ಜಗ್ಗೇಶ್ ಬರೆದುಕೊಂಡಿದ್ದಾರೆ. ಇದು ಅಪ್ಪು ಅಭಿಮಾನಿಗಳ ಕಣ್ಣು ಒದ್ದೆ ಮಾಡುತ್ತಿದೆ.

ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ಒಟ್ನಲ್ಲಿ ಅಪ್ಪು ಎಲ್ಲೂ ಹೋಗಿಲ್ಲ.. ಅಪ್ಪು ನಮ್ಮ ಜೊತೆಗೇ ಇದ್ದಾರೆ.. ಅವರ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆ ದಿನವನ್ನ ಹಬ್ಬದಂತೆ ಆಚರಿಸುತ್ತೇವೆ ಅಂತಿದ್ದಾರೆ ಅಭಿಮಾನಿಗಳು. ಹೀಗೆ ಅಭಿಮಾನಿಗಳ ಅಭಿಮಾನ ಹಾಗೂ ಅಪ್ಪು ಮೇಲಿನ ಪ್ರೀತಿ ಜೇಮ್ಸ್‌ ಚಿತ್ರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಟೀಸರ್‌ನಲ್ಲೇ ಇಷ್ಟು ಹವಾ ಎಬ್ಬಿಸಿರುವ ಅಪ್ಪು ಅಭಿನಯದ ಕೊನೆಯ ಸಿನಿಮಾ ಜೇಮ್ಸ್, ಚಿತ್ರಮಂದಿರದಲ್ಲಿ ಧೂಳ್‌ ಎಬ್ಬಿಸೋದು ಗ್ಯಾರಂಟಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News