ಅಭಿಮಾನಿಗಳಿಂದಲೇ ಕ್ರಾಂತಿ ಸಿನಿಮಾದ ಪ್ರಚಾರ : ಇದು D Boss ಫ್ಯಾನ್ಸ್‌ಗಳಿಂದ ಮಾತ್ರ ಸಾಧ್ಯ..!

ಒಬ್ಬ ನಟ ತನ್ನ ಸಿನಿಮಾವನ್ನು ಅದ್ಧೂರಿಯಾಗಿ ವೇದಿಕೆ ಹಾಕಿ ಪ್ರಚಾರ ಮಾಡುವುದನ್ನು ನೋಡಿದ್ದೇವೆ. ಬೇರೆ ಸಿನಿರಂಗದ ಸ್ಟಾರ್‌ ನಟರನ್ನು ಕರೆಯಿಸಿ ಅವರಿಂದ ಸಿನಿಮಾ ಪ್ರಚಾರ ಮಾಡುವುದನ್ನೂ ಕಂಡಿದ್ದೇವೆ.. ಆದ್ರೆ ನೆಚ್ಚಿನ ನಟನ ಸಿನಿಮಾವನ್ನು ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡುತ್ತಿರುವುದಕ್ಕೆ ಸಾಕ್ಷಿ ಅಂದ್ರೆ ನಟ ದರ್ಶನ್‌ ಅಭಿನಯದ ʼಕ್ರಾಂತಿʼ ಸಿನಿಮಾ.

Written by - Krishna N K | Last Updated : Nov 17, 2022, 04:47 PM IST
  • ಅಭಿಮಾನಿಗಳಿಂದಲೇ ದರ್ಶನ್‌ ʼಕ್ರಾಂತಿʼ ಸಿನಿಮಾದ ಪ್ರಚಾರ
  • ಇದು D Boss ಫ್ಯಾನ್ಸ್‌ಗಳಿಂದ ಮಾತ್ರ ಸಾಧ್ಯ
  • ವಿಶ್ವದಾದ್ಯಂತ ಭರ್ಜರಿಯಾಗಿ ನಡೆಯುತ್ತಿದೆ ದಚ್ಚು ಫ್ಯಾನ್ಸ್‌ಗಳ ಕ್ರಾಂತಿ ಪ್ರಮೋಷನ್‌
ಅಭಿಮಾನಿಗಳಿಂದಲೇ ಕ್ರಾಂತಿ ಸಿನಿಮಾದ ಪ್ರಚಾರ : ಇದು D Boss ಫ್ಯಾನ್ಸ್‌ಗಳಿಂದ ಮಾತ್ರ ಸಾಧ್ಯ..! title=

D Boss : ಒಬ್ಬ ನಟ ತನ್ನ ಸಿನಿಮಾವನ್ನು ಅದ್ಧೂರಿಯಾಗಿ ವೇದಿಕೆ ಹಾಕಿ ಪ್ರಚಾರ ಮಾಡುವುದನ್ನು ನೋಡಿದ್ದೇವೆ. ಬೇರೆ ಸಿನಿರಂಗದ ಸ್ಟಾರ್‌ ನಟರನ್ನು ಕರೆಯಿಸಿ ಅವರಿಂದ ಸಿನಿಮಾ ಪ್ರಚಾರ ಮಾಡುವುದನ್ನೂ ಕಂಡಿದ್ದೇವೆ.. ಆದ್ರೆ ನೆಚ್ಚಿನ ನಟನ ಸಿನಿಮಾವನ್ನು ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡುತ್ತಿರುವುದಕ್ಕೆ ಸಾಕ್ಷಿ ಅಂದ್ರೆ ನಟ ದರ್ಶನ್‌ ಅಭಿನಯದ ʼಕ್ರಾಂತಿʼ ಸಿನಿಮಾ.

ಹೌದು... ಕ್ರಾಂತಿ ಸ್ಯಾಂಡಲ್‌ವುಡ್‌ನ ಮೋಸ್ಟ್‌ ಎಕ್ಸ್ಪೆಕ್ಟೆಡ್ ಸಿನಿಮಾ. ದರ್ಶನ್‌ ಅಭಿನಯದ ಈ ಚಿತ್ರ ಜ.26 ರಂದು ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರ್ತಿದೆ. ಇಲ್ಲಿ ವಿಶೇಷ ಅಂದ್ರೆ, ದರ್ಶನ್‌ ಅವರ ಅಭಿಮಾನಿಗಳು. ಸ್ವತಃ ದರ್ಶನ್‌ ಅವರ ಫ್ಯಾನ್ಸ್‌ ಈ ಚಿತ್ರದ ಪ್ರಚಾರ ಕೆಲಸ ಮಾಡುತ್ತಿದ್ದಾರೆ. ಕಾರು, ಬೈಕ್‌, ಸೈಕಲ್‌, ಆಟೋ ಹೀಗೆ ಡಿ ಬಾಸ್‌ ಅಭಿಮಾನಿಗಳು ಕ್ರಾಂತಿ ಸಿನಿಮಾದ ಪೋಸ್ಟರ್‌ ಹಚ್ಚಿ ಸಿನಿ ಪ್ರಚಾರ ಕೈಗೊಂಡಿದ್ದಾರೆ. 

ಇದನ್ನೂ ಓದಿ: Janhvi Kapoor : ಜಾನ್ವಿಗೆ ಬಾತ್ ರೂಂ ಲಾಕ್‌ ಮಾಡಲು ಬಿಡುತ್ತಿರಲಿಲ್ಲವಂತೆ ತಾಯಿ ಶ್ರೀದೇವಿ.!

ಇಷ್ಟಲ್ಲದೆ, ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುವ ದರ್ಶನ್ ಅಭಿಮಾನಿಗಳು ಸಹ ಕೈಯಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್‌ ಹಿಡಿದು ನೆಚ್ಚಿನ ನಟನ ಸಿನಿಮಾ ಯಶಸ್ಸು ಗಳಿಸಿಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ವಿದೇಶದಲ್ಲಿಯೂ ಸಹ ಕ್ರಾಂತಿ ಪ್ರಚಾರ ಅಬ್ಬರಿಸುತ್ತಿದೆ. ಹೊರದೇಶದಲ್ಲಿರುವ ದಚ್ಚು ಅಭಿಮಾನಿಗಳು ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಕಾರಿನ ಮೇಲೆ ಕ್ರಾಂತಿ ಸಿನಿಮಾದ ಪೋಸ್ಟರ್‌ ಹಚ್ಚಿ ಭರ್ಜರಿಯಾಗಿ ಪ್ರಮೋಷನ್‌ ಮಾಡುತ್ತಿದ್ದಾರೆ.

ಇತ್ತೀಚಿಗೆ ಅಂಜನಾದ್ರಿ ಬೆಟ್ಟದಲ್ಲಿ ದಚ್ಚು ಅಭಿಮಾನಿಯೊಬ್ಬರು ಕ್ರಾಂತಿ ಸಿನಿಮಾದ ಪೋಸ್ಟರ್‌ ಹಿಡಿದು ಮಂಗನಿಗೆ ತೋರಿಸಿದ್ದ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಸ್ವತಃ ಆಂಜನೇಯನೇ ಕ್ರಾಂತಿಗೆ ಶುಭ ಹಾರೈಸಿದ ರೀತಿಯಲ್ಲಿ ದೃಶ್ಯ ಕಂಡು ಬಂದಿತ್ತು. ಇನ್ನು ಕ್ರಾಂತಿ ಸಿನಿಮಾಗೆ ವಿ. ಹರಿಕೃಷ್ಣ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ರಚಿತಾ ರಾಮ್‌ ಮಿಂಚಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News