Darshan:ಕಾಟೇರ ಸಕ್ಸಸ್ ಖುಷಿಯಲ್ಲಿ ಸ್ನೇಹಿತರೊಡನೆ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್‌ ಸ್ಟಾರ್!

Darshan At Tirupathi: ಚಂದನವನದ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಸಕ್ಸನ್‌ನ ಬೆನ್ನೆಲೆ ತಮ್ಮ ಸ್ನೇಹಿತರೊಡನೆ ತಿರುಪತಿ ತೆರೆಳಿ ತಿಮ್ಮಪ್ಪನ ದರ್ಶನ ಮಾಡಿ, ಆರ್ಶೀವಾದವನ್ನು ಪಡೆದಿದ್ದಾರೆ. ಇಲ್ಲಿದೆ ಕಂಪ್ಲೀಟ್‌ ಮಾಹಿತಿ.‌  

Written by - Zee Kannada News Desk | Last Updated : Feb 9, 2024, 05:35 PM IST
  • ಕಾಟೇರ ಸಕ್ಸಸ್‌ ಸಂಭ್ರಮ ಇನ್ನೂ ಮುಗಿಯುವ ಮುನ್ನವೇ ದರ್ಶನ್ ಹೊಸ ಚಿತ್ರ ಘೋಷಣೆಯಾಗಿದ್ದು, ಈ ಸಿನಿಮಾವನ್ನು ಕನ್ನಡದ ಜನಪ್ರಿಯ ಡೈರೆಕ್ಟರ್ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ.
  • ಡೆವೆಲ್‌ ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೆ ಮುನ್ನ ನಟ ದರ್ಶನ್‌ ತಿರುಪತಿ ತಿಮ್ಮಪ್ಪನ ಆರ್ಶೀವಾದವನ್ನು ಪಡೆದುಕೊಂಡಿದ್ದಾರೆ.
  • ನಟ ದರ್ಶನ್‌ಗೆ ಕಾಟೇರ ಚಿತ್ರದ ಚಾರಿತ್ರಿಕ ಗೆಲುವು ವರ್ಚಸ್ಸನ್ನ ಇನ್ನೂ ಹೆಚ್ಚಿಸುವುದರ ಜೊತೆಗೆ ಜವಾಬ್ಧಾರಿಯನ್ನೂ ಕೂಡ ಹೆಚ್ಚಿಸಿದೆ.
Darshan:ಕಾಟೇರ ಸಕ್ಸಸ್ ಖುಷಿಯಲ್ಲಿ ಸ್ನೇಹಿತರೊಡನೆ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್‌ ಸ್ಟಾರ್! title=

Darshan Visited Tirupathi Temple with His Friends: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ರಾಜ್ಯದ ಕೆಲವು ಕಡೆ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಾಯಿದ್ದು, ಈ ಚಿತ್ರ ನಟ ದರ್ಶನ್​ ವೃತ್ತಿ ಜೀವನದಲ್ಲಿಯೇ  ಅತ್ಯುತ್ತಮ ಸಿನಿಮಾ ಎಂದು ಹೇಳಬಹುದು. ಕಾಟೇರ ಸಕ್ಸಸ್‌ ಸಂಭ್ರಮ ಇನ್ನೂ ಮುಗಿಯುವ ಮುನ್ನವೇ  ದರ್ಶನ್ ಹೊಸ ಚಿತ್ರ ಘೋಷಣೆಯಾಗಿದ್ದು, ಈ ಸಿನಿಮಾವನ್ನು ಕನ್ನಡದ ಜನಪ್ರಿಯ ಡೈರೆಕ್ಟರ್ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಕಾಟೇರ ಬಳಿಕ ದರ್ಶನ್‌ ಡೆವೆಲ್‌ ಚಿತ್ರದಲ್ಲಿ ನಟಿಸಲಿದ್ದಾರೆ.

ಸದ್ಯ ಡೆವೆಲ್‌ ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೆ ಮುನ್ನ ನಟ ದರ್ಶನ್‌ ತಿರುಪತಿ ತಿಮ್ಮಪ್ಪನ ಆರ್ಶೀವಾದವನ್ನು ಪಡೆದುಕೊಂಡಿದ್ದಾರೆ. ಈ ನಟ ತಮ್ಮ ಕೆಲವು ಆಪ್ತರೊಟ್ಟಿಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ನಟ ದರ್ಶನ್‌ ಶಾಸಕ ಸತೀಶ್ ರೆಡ್ಡಿ, ಸಚ್ಚಿದಾನಂದ ಇನ್ನೂ ಕೆಲವು ರ ಆಪ್ತರು ಒಟ್ಟಿಗೆ ತಿರುಪತಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಈ ನಟ ‘ರಾಬರ್ಟ್’ ಸಿನಿಮಾದ ರಿಲೀಸ್‌ ವೇಳೆಯಲ್ಲಿಯೂ ತಿರುಪತಿಗೆ ಭೇಟಿ ನೀಡಿದ್ದು, ಇದೀಗ ‘ಡೆವಿಲ್’ ಚಿತ್ರದ ಆರಂಭಕ್ಕೂ ಮುನ್ನ ತಿರುಪತಿಗೆ ತೆರಳಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಸಿನಿಮಾದಿಂದ ವಿಶೇಷ ಮನ್ನಣೆ..ಸ್ಟಾರ್ ಹೀರೋ ಜೊತೆ ಮದುವೆ..500 ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ನಟ ಈಕೆ!

ನಟ ದರ್ಶನ್‌ಗೆ ಕಾಟೇರ ಚಿತ್ರದ ಚಾರಿತ್ರಿಕ ಗೆಲುವು  ವರ್ಚಸ್ಸನ್ನ ಇನ್ನೂ ಹೆಚ್ಚಿಸುವುದರ ಜೊತೆಗೆ ಜವಾಬ್ಧಾರಿಯನ್ನೂ ಕೂಡ ಹೆಚ್ಚಿಸಿದೆ. ಇನ್ನೂ ದರ್ಶನ್ ಸದ್ಯಕ್ಕೆ ಡೆವಿಲ್ ಸಿನಿಮಾದ ಚಿತ್ರೀಕರಣವನ್ನ ಎದುರು ನೋಡ್ತಿದ್ದು, ಇನ್ನೊಂದು ಕಡೆ ಇದೇ ಫೆಬ್ರವರು ಹದಿನಾರಕ್ಕೆ ತಮ್ಮ ಹುಟ್ಟುಹಬ್ಬದ ಸಂಭ್ರಮವೂ ಹೌದು. ಆ ದಿನ ದರ್ಶನ್ ತಮ್ಮ ಅಸಂಖ್ಯಾತ ಅಭಿಮಾನಿಗಳ ಜೊತೆ ಬೆರೆಯುವ ಮೂಲಕ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ದರ್ಶನ್ ವಾರಕ್ಕೂ ಮೊದಲೇ ಗೋವಿಂದನ ದರ್ಶನವನ್ನ ಪಡೆದಿದ್ದಾರೆ.

ದರ್ಶನ್ ಹಾಗೂ ಮಿಲನಾ ಪ್ರಕಾಶ್ ಎರಡನೇ ಬಾರಿ ಮಾಡಲು ಹೊರಟಿರುವ ಚಿತ್ರ ಡೆವಿಲ್ ಕುರಿತು ದರ್ಶನ್ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಇದ್ದು, ಇದಕ್ಕೆ ತಕ್ಕಂತೆ ಇಲ್ಲಿಯವರೆಗೆ ಅನೇಕ ಅಂತೆ ಕಂತೆ ಸುದ್ದಿಯನ್ನ ತೇಲಿ ಬಿಡಲಾಗಿದೆ. ಆದರೆ ಅದ್ಯಾವದಕ್ಕೂ ಹೆಚ್ಚಿನ ಮಹತ್ವ ನೀಡಬೇಡಿ ಎಂಬ ಮನವಿಯನ್ನ ಅಭಿಮಾನಿಗಳಲ್ಲಿ ಚಿತ್ರಪ್ರೇಮಿಗಳಲ್ಲಿ ಮಾಡಿಕೊಂಡಿರುವ ನಿರ್ದೇಶಕ, ದರ್ಶನ್ ಜನ್ಮದಿನದ ಪ್ರಯುಕ್ತ ಫಸ್ಟ್ ಲುಕ್ ಜೊತೆ ಒಂದಷ್ಟು ಮಾಹಿತಿಯನ್ನ ಹಂಚಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News