Darshan : ʼಸಲಾರ್‌ʼಗೆ ಹೆದರುವ ಮಾತಿಲ್ಲ..! ಪ್ರಭಾಸ್‌ ಸಿನಿಮಾದ ವಿರುದ್ಧ ಗುಡುಗಿದ DBoss

Kaatera Vs Salaar : ಪ್ರಶಾಂತ್‌ ನೀಲ್‌ ನಿರ್ದೇಶನದ, ಪ್ಯಾನ್‌ ವರ್ಲ್ಡ್‌ ಸ್ಟಾರ್‌ ನಟ ಪ್ರಭಾಸ್‌ ಅಭಿನಯದ ʼಸಲಾರ್‌ʼ ವಿರುದ್ಧ ಸ್ಯಾಂಡಲ್‌ವುಡ್‌ ಸೂಪರ್‌ ಸ್ಟಾರ್‌ ನಟ ದರ್ಶನ್‌ ಗುಡುಗಿದ್ದಾರೆ. ಸಲಾರ್‌ ಪರ ಭಾಷೆ ಸಿನಿಮಾ, ಅದಕ್ಕೆ ಹೆದರುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Written by - Krishna N K | Last Updated : Dec 15, 2023, 02:29 PM IST
  • ಸಲಾರ್ ಅಥವಾ ಇತರ ಯಾವುದೇ ಸಿನಿಮಾಗಳಿಗೆ ಹೆದರುವುದಿಲ್ಲ.
  • ಕಾಟೇರ ಶುದ್ಧ ಕನ್ನಡ ಚಿತ್ರವಾಗಿದ್ದು, ನಮ್ಮನ್ನು ನೋಡಿ ಅವರು ಭಯಪಡಬೇಕು.
  • ʼಸಲಾರ್‌ʼ ವಿರುದ್ಧ ಗುಡುಗಿದ ಸ್ಯಾಂಡಲ್‌ವುಡ್‌ ಸೂಪರ್‌ ಸ್ಟಾರ್‌ ದರ್ಶನ್‌.
Darshan : ʼಸಲಾರ್‌ʼಗೆ ಹೆದರುವ ಮಾತಿಲ್ಲ..! ಪ್ರಭಾಸ್‌ ಸಿನಿಮಾದ ವಿರುದ್ಧ ಗುಡುಗಿದ DBoss title=

Darshan on Salaar : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼಕಾಟೇರʼ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯ ಶುರುಮಾಡಿದ್ದು, ಇದೇ ತಿಂಗಳು 16 ರಂದು ಹುಬ್ಬಳ್ಳಿಯಲ್ಲಿ ಕಾಟೇರ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ ತೆಲುಗು ನಟ ಪ್ರಭಾಸ್‌ ಅಭಿನಯದ ಸಲಾರ್‌ ಕುರಿತು ಡಿಬಾಸ್‌ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹೌದು.. ಕನ್ನಡದ ಸೂಪರ್‌ಸ್ಟಾರ್ ನಟ ದರ್ಶನ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ ʼಕಾಟೇರʼ. ಪ್ರಭಾಸ್‌ ನಟನೆಯ ಪ್ರಶಾಂತ್‌ ನೀಲ್‌ ನಿರ್ದೇಶನ ʼಸಲಾರ್‌ʼ ರಿಲೀಸ್‌ ಆದ ಒಂದು ವಾರದ ನಂತರ ತೆರೆಗೆ ಬರಲಿದ್ದು, ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಘರ್ಷಣೆಯಾಗಲಿದೆ. ಅಲ್ಲದೆ, ಈ ಎರಡು ಸಿನಿಮಾಗೆ ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ನಟನೆಯ ಡಂಕಿ ಸಿನಿಮಾ ಕೂಡ ಪೈಪೋಟಿ ನೀಡಲಿದೆ.

ಇದನ್ನೂ ಓದಿ: 2023 ರ ಅತ್ಯಂತ ಜನಪ್ರಿಯ ಭಾರತೀಯ ತಾರೆ ಇವರೇ.. ಟಾಪ್‌ 10 ಪಟ್ಟಿಯಲ್ಲಿ ಸೌತ್‌ ಸೆಲಿಬ್ರಿಟಿಗಳ ಹವಾ!

ಇನ್ನು ಇತ್ತೀಚಿಗೆ ಕಾಟೇರ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್‌, ನಾನು ಸಲಾರ್ ಅಥವಾ ಇತರ ಯಾವುದೇ ಸಿನಿಮಾಗಳಿಗೆ ಹೆದರುವುದಿಲ್ಲ. ನಮ್ಮನ್ನ ನೋಡಿ ಅವರು ಭಯಪಡಬೇಕು. ಕಾಟೇರ ಶುದ್ಧ ಕನ್ನಡ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಚಲನಚಿತ್ರಗಳಲ್ಲಿ ಒಂದಲ್ಲ. ಕನ್ನಡ ಸಿನಿ ಪ್ರೇಕ್ಷಕರು ನನ್ನ ಚಿತ್ರದ ಮೇಲೆ ಪ್ರೀತಿಯನ್ನು ತೋರಿಸುತ್ತಾರೆ ಎಂದು ಡಿಬಾಸ್‌ ವಿಶ್ವಾಸ ವ್ಯಕ್ತಪಡಿಸಿದರು.

ತರುಣ್ ಕಿಶೋರ್ ನಿರ್ದೇಶನದ ಕಾಟೇರ 70 ರ ದಶಕದ ಕಥಾ ಹಂದರ ಹೊಂದಿದೆ. ರೈತರನ್ನು ಒಳಗೊಂಡ ನಿಜ ಜೀವನದ ಘಟನೆಯ ಸುತ್ತ ಸಿನಿಮಾ ನಿರ್ಮಾಣವಾಗಿದೆ. ಅಲ್ಲದೆ, ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಈ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ. ಕಾಟೇರ ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News