Chetan Ahimsa : ಸಿನಿಪ್ರಿಯರ ಮನಗೆದ್ದಿರುವ ಕಾಂತಾರ ಬಾಕ್ಸ್‌ಆಫೀಸ್‌ನಲ್ಲಿಯೂ ಭರ್ಜರಿ ಕೊಳ್ಳೆ ಹೊಡೆಯುತ್ತಿದೆ. ಈ ಮಧ್ಯೆ ತುಳುನಾಡ ಸಂಸ್ಕೃತಿ ಭೂತಕೋಲದ ಬಗ್ಗೆ ನಟ ಚೇತನ್ ಅಹಿಂಸಾ ಹೇಳಿದ ಮಾತು ಎಲ್ಲೆಡೆ ಪರ ವಿರೋಧಕ್ಕೆ ಕಾರಣವಾಗಿದೆ. ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂಬ ಹೇಳಿಕೆ ಬಗ್ಗೆ ನಟ ಚೇತನ್ ಅಹಿಂಸಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಕಾಂತಾರ ಸಿನಿಮಾ ಬಗ್ಗೆ ಹೆಮ್ಮ ಇದೆ. ಕರ್ನಾಟಕ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ರಿಷಬ್ ಶೆಟ್ಟಿ ಅವ್ರು ಭೂತಕೋಲ ಹಿಂದೂ ಸಂಪ್ರದಾಯ ಅಂತ ಹೇಳಿದ್ದಾರೆ. ಅದ್ರೆ ಪಂಬದ ಅನ್ನೋ ಪುಸ್ತಕ ಓದಿದ್ದೀನಿ. ಈ ಪಂಬದ ಆದಿವಾಸಿ ಪರಂಪರೆ. ಮೂಲವಾಸಿ ಪರಂಪರೆಯಿಂದ ಅಲ್ಲಿಂದ ಬಂದಿರೋದು. ಪಂಜುರ್ಲಿ, ಪುಡಿಚಾಮುಂಡಿ ಈ ವಿಚಾರಗಳು ನಮ್ಮ ಮೂಲವಾಸಿ ಸಂಸ್ಕೃತಿ ಎಂದು ನಟ ಚೇತನ್ ಹೇಳಿದ್ದಾರೆ.
ಇದನ್ನೂ ಓದಿ : ಕಾಂತಾರದಲ್ಲಿ ಹೇಳಿದ್ದು ಸುಳ್ಳು, ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ : ಚೇತನ್ ಅಹಿಂಸಾ
ಇದು ಹಿಂದೂ ಸಂಪ್ರದಾಯ ಅನ್ನೋದು ತಪ್ಪು. ವೇದಗಳು, ಶಾಸ್ತ್ರಗಳು ಆಗಿರಬಹುದು ಅದೆಲ್ಲವೂ 3 ಸಾವಿರ ವರ್ಷದಿಂದ ವೈದಿಕ ಪರಂಪರೆ ಬಂದಿದೆ. ಹಿಂದೂ ಅನ್ನೋ ಪದ ಬರೋದು 6 ನೇ ಶತಮಾನದಲ್ಲಿ. ಹಿಂದೂತ್ವ ಅನ್ನೋದು ಕೋಮುವಾದದ ಕಲ್ಪನೆ ಎಂದಿದ್ದಾರೆ.
ಮೂಲನಿವಾಸಿ ಹಾಗು ಬುಡಕಟ್ಟನ್ನ ಒಳಗಡೆ ತಗೋಂಡು ಹಿಂದೂ ಧರ್ಮ ಅಂತ ಹೇಳೋದು ಹೇಗೆ? ಮಲೆ ಮಾದಪ್ಪ, ಜುಂಜಪ್ಪ ಇದು ಬಹುಜನ ಸಂಸ್ಕೃತಿ. ಜಾರ್ಖಾಂಡ್ ನಲ್ಲಿಆದಿವಾಸಿ ಜನ ಬೇರೆ ಧರ್ಮ ಬೇಕು ಪ್ರತ್ಯೇಕ ಕಾಲಮ್ ಕೊಡಿಅಂತ ಹೋರಾಟ ಮಾಡ್ತಿದ್ದಾರೆ. ಪ್ರತ್ಯೇಕ ಲಿಂಗಾಯಿತ ಧರ್ಮ ಕೊಡಿ ಅಂತ ಹೋರಾಟ ಮಾಡಿದ್ದಾರೆ. ಅವೈದಿಕ ಪರಂಪರೆಯನ್ನ ಅರ್ಥ ಮಾಡಿಕೊಳ್ಳಬೇಕು ವೈದಿಕ ಪರಂಪರೆಯಲ್ಲ ಎಂದು ಹೇಳಿದ್ದಾರೆ.
ಹೇಗೇ ಭಾರತ ದೇಶ ಹಿಂದಿ ಹೇರಿಕೆಯನ್ನ ಒಪ್ಪಿಕೊಳ್ಳೋಕೆ ಆಗಲ್ವೋ ಅದೇ ರೀತಿ ಹಿಂದೂತ್ವವನ್ನ ಒಪ್ಪಿ ಕೋಳ್ಳೋಕೆ ಆಗಲ್ಲ. ವರಾಹ ಅನ್ನೋದು ಸಂಸ್ಕೃತ ಪದ. ಅದು ವಿಷ್ಣುವಿನ ಅವತಾರ. ಅದು ಹಿಂದೂ ದೇವರು. ವರಾಹ ವಿಷ್ಣು ಅವತಾರ ಅಂತ ಹೇಳಿದ್ದಾರೆ ಎಂದು ಚೇತನ್ ಹೇಳಿದ್ದಾರೆ.
ಇದನ್ನೂ ಓದಿ : ʼಕಾಂತಾರʼದ ಮೂಲಕ ಬಿಗ್ ಬಜೆಟ್ ಸಿನಿಮಾದವರಿಗೆ ಪಾಠ ಕಲಿಸಿದ್ದಕ್ಕೆ ಥ್ಯಾಂಕ್ಸ್ ರಿಷಬ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.