ZEE Picchar: ಜೀ ಪಿಚ್ಚರ್ ಗೆ 3ನೇ ವಾರ್ಷಿಕೋತ್ಸವ ಸಂಭ್ರಮ

 ZEE Picchar: ಕಿರುತೆರೆಯ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದ ಭಾಗವಾಗಿರುವ ಜೀ ಪಿಚ್ಚರ್ 3ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ

Written by - Zee Kannada News Desk | Last Updated : Mar 1, 2023, 02:33 PM IST
  • ಜೀ ಪಿಚ್ಚರ್ ಪ್ರಪಂಚಕ್ಕೆ ಕಾಲಿಟ್ಟು ಇಂದಿಗೆ 3 ವರ್ಷ
  • ಕಿರುತೆರೆಯ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದ ಭಾಗವಾಗಿರುವ ಜೀ ಪಿಚ್ಚರ್
  • ಸಿನಿಮಾಗಷ್ಟೇ ಸೀಮಿತವಾಗಿರದೇ ಮಾಹಿತಿಯನ್ನು ನೀಡುತ್ತಿದೆ
ZEE Picchar: ಜೀ ಪಿಚ್ಚರ್ ಗೆ 3ನೇ ವಾರ್ಷಿಕೋತ್ಸವ ಸಂಭ್ರಮ  title=

 ZEE Picchar: ಜೀ ಪಿಚ್ಚರ್ ಕನ್ನಡ ಪಿಚ್ಚರ್ ಪ್ರಪಂಚಕ್ಕೆ 3 ವರ್ಷದ ಹಿಂದೆ ಕಾಲಿಟ್ಟು ಇಂದು ತನ್ನ ಯಶಸ್ಸಿನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ವಾಹಿನಿಯಾಗಿದೆ. ಕಿರುತೆರೆಯ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದ ಭಾಗವಾಗಿರುವ ಜೀ ಪಿಚ್ಚರ್ 3ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ . 

ಹಲವು ಪೈಪೋಟಿಗಳ ನಡುವೆ ಅತಿ ಕಡಿಮೆ ಅವಧಿಯಲ್ಲೇ ವೀಕ್ಷಕರಿಗೆ ಹತ್ತಿರವಾಗಿರುವ ವಾಹಿನಿ ವಿಭಿನ್ನ, ವಿಶಿಷ್ಟ ಸಿನಿಮಾಗಳ ಮೂಲಕ ಹಿಟ್ ದಿನದ ಫೀಲಿಂಗ್ ನೀಡುತ್ತಿದೆ ಎನ್ನುವುದು ಕನ್ನಡಿಗರ ಅಭಿಪ್ರಾಯವಾಗಿದೆ . ದಿನದಿಂದ ದಿನಕ್ಕೆ ಅತಿಹೆಚ್ಚು ಜಿಆರ್ ಪಿ ಗಳಿಸುತ್ತಿರುವ ಜೀ ಪಿಚ್ಚರ್ ನಂಬರ್ 1 ಸ್ಥಾನದತ್ತ ಹೆಜ್ಜೆ ಇಡುತ್ತಿದೆ. ಕೇವಲ ಸಿನಿಮಾಗಷ್ಟೇ ಸೀಮಿತವಾಗಿರದೇ ಮಾಹಿತಿಯನ್ನು ನೀಡುತ್ತಿದೆ. 

ಇದನ್ನೂ ಓದಿ: Virat Kohli-Anushka Sharma: ʼನನ್ನ ಪತ್ನಿಯೇ ನನಗೆ ಸ್ಫೂರ್ತಿʼ - ವಿರಾಟ್ ಕೊಹ್ಲಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್ ನೇರ ಪ್ರಸಾರ ಮಾಡುವುದರೊಂದಿಗೆ ಚಿತ್ರರಂಗದೊಂದಿಗೆ ತನಗಿರುವ ನಂಟನ್ನು ಗಟ್ಟಿಗೊಳಿಸಿಕೊಂಡಿದೆ . ಅಷ್ಟೇ ಅಲ್ಲದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮುಖಾಂತರ ಸಿನಿರಸಿಕರ ಗಮನ ಸೆಳೆಯುತ್ತಿದೆ ಮತ್ತು ಅತ್ಯುತ್ತಮ ಗುಣಮಟ್ಟದ  ಡಬ್ಬಿಂಗ್ ಸಿನಿಮಾಗಳನ್ನು ಪ್ರಸಾರ ಮಾಡುತ್ತಲೇ ನೋಡುಗರಿಗೆ ಹಿಟ್ ದಿನದ ಫೀಲಿಂಗ್ ನೀಡುವಲ್ಲಿ ಯಶಸ್ವಿಯಾಗಿದೆ. 

ಇದನ್ನೂ ಓದಿ: Kantara 2: ಮಾರ್ಚ್ ತಿಂಗಳು ಶುರು ರಿಷಬ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ್ರಾ..?

ಈ ಅಭೂತಪೂರ್ವ ಯಶಸ್ಸು ನೀಡಿರುವ ಕನ್ನಡಿಗರು  ಸಿನಿಮಾ ಪ್ರೇಮಿಗಳಿಗೆ ಈ ಮೂಲಕ ಧನ್ಯವಾದ ತಿಳಿಸುತ್ತಿದ್ದು ಇದೀಗ ವಾಹಿನಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು ಸನ್ ಡೈರೆಕ್ಟ್ ಎಲ್ ಸಿ ಎನ್ ನಂಬರ್ 280 ನಲ್ಲೂ ಲಭ್ಯವಿದೆ. ಇನ್ನು ಮುಂದೆ ಅದೇ ಪ್ರೀತಿ , ವಿಶ್ವಾಸದಿಂದ ಹಾರೈಸುತ್ತಾರೆ ಎಂದು ವಾಹಿನಿಯ ಆಶಯ ವ್ಯಕ್ತಪಡಿಸಿದೆ. ವೀಕ್ಷಕರ ಪರವಾಗಿ ಜೀ ಪಿಚ್ಚರ್ ಗೆ 3ನೇ ವಾರ್ಷಿಕೋತ್ಸವ ಶುಭಾಶಯಗಳು ತಿಳಿಸಲಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News