Vastu Shastraದ ನಿಯಮಗಳ ಅನುಸಾರ Kitchen ನಿರ್ಮಿಸಿ, ಕೌಟುಂಬಿಕ ಆರೋಗ್ಯ ಸೌಖ್ಯ ನಿಮ್ಮದಾಗಿಸಿಕೊಳ್ಳಿ

Vastu Shastraಗ ನಿಯಮಗಳ ಅನುಸಾರ ಒಂದು ವೇಳೆ ನೀವು ನಿಮ್ಮ ಮನೆಯ ಅಡುಗೆಮನೆಯನ್ನು ನಿರ್ಮಿಸದೇ ಹೋದಲ್ಲಿಮನೆಯಲ್ಲಿ ಧನಹಾನಿ , ಕಾಯಿಲೆ ಹಾಗೂ ನಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಗುತ್ತದೆ.

Last Updated : Sep 21, 2020, 08:59 PM IST
  • ಮನೆಯಲ್ಲಿ ಅಡುಗೆ ಮನೆ ಒಂದು ಮಹತ್ವದ ಭಾಗವಾಗಿದೆ.
  • ಅಡುಗೆ ಮನೆ ನಿರ್ಮಿಸುವಾಗ ವಾಸ್ತುಶಾಸ್ತ್ರದ ನಿಯಮಗಳ ಅನುಸಾರ ನಿರ್ಮಿಸಿ.
  • ಸರಿಯಾದ ದಿಕ್ಕಿನಲ್ಲಿ ನಿರ್ಮಾಣಗೊಂಡ ಅಡುಗೆ ಮನೆಯಿಂದ ಮನೆಯಲ್ಲಿ ಕುಟುಂಬ ಆರೋಗ್ಯ ಹಾಗೂ ಸುಖ ನೆಲೆಸಲಿದೆ.
Vastu Shastraದ ನಿಯಮಗಳ ಅನುಸಾರ Kitchen ನಿರ್ಮಿಸಿ, ಕೌಟುಂಬಿಕ ಆರೋಗ್ಯ ಸೌಖ್ಯ ನಿಮ್ಮದಾಗಿಸಿಕೊಳ್ಳಿ title=

ನವದೆಹಲಿ: ಮನೆಯಲ್ಲಿ ಅಡುಗೆ ಮನೆ ಬಹಳ ಮುಖ್ಯ. ವಾಸ್ತುಶಾಸ್ತ್ರದ (Vastu Shastra) ನಿಯಮಗಳ ಪ್ರಕಾರ ಮನೆಯ ಅಡುಗೆಮನೆ (Kitchen) ನಿರ್ಮಾಣ ಮಾಡುವುದು ತುಂಬಾ ಅವಶ್ಯಕ. ವಾಸ್ತು ನಿಯಮಗಳ ಪ್ರಕಾರ ಅನುಗೆ ಮನೆ ನಿರ್ಮಿಸದಿದ್ದರೆ, ಅದು ಮನೆಯಲ್ಲಿ ರೋಗ, ಹಣದ ನಷ್ಟ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಡಿಗೆ ಬಗ್ಗೆ ವಾಸ್ತು ನಿಯಮಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಇದನ್ನು ಓದಿ- ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲು ಈ Vastu ಟಿಪ್ಸ್ ಗಳನ್ನು ನೆನಪಿಡಿ

  • ಅಡುಗೆ ಮನೆಯನ್ನು ದಕ್ಷಿಣ-ಪೂರ್ವ ಅಥವಾ ಆಗ್ನೇಯ ಕೋನದಲ್ಲಿರುವಂತೆ ನಿರ್ಮಿಸಿದರೆ ಶುಭ ಎನ್ನಲಾಗುತ್ತದೆ.
  • ಒಂದು ವೇಳೆ ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಅಡುಗೆಮನೆ ಇಲ್ಲದೆ ಇದ್ದರೆ ವಾಸ್ತು ದೋಷ ನಿವಾರಣೆಗಾಗಿ ಅಡುಗೆಮನೆಯ ಈಶಾನ್ಯ ದಿಕ್ಕಿನಲ್ಲಿ ಸಿಂಧೂರೀ ಗಣೇಶನ ಭಾವಚಿತ್ರ ಅಂಟಿಸಿ.
  • ಒಂದು ವೇಳೆ ನಿಮ್ಮ ಮನೆಯಲ್ಲಿ ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇರದೇ ಹೋದಲ್ಲಿ, ಅಡುಗೆಮನೆಯಲ್ಲಿ ಯಜ್ಞ ನಡೆಸುತ್ತಿರುವ ಋಷಿಗಳ ಭಾವಚಿತ್ರ ಅಂಟಿಸಿ.
  • ಅಡುಗೆ ತಯಾರಿಸುವಾಗ ಅಡುಗೆ ತಯಾರಿಸುವವರ ಮುಖ ಪೂರ್ವದಿಕ್ಕಿನಲ್ಲಿರಬೇಕು. ಅಡುಗೆ ತಯಾರಿರುವವರ ಮುಖ ಉತ್ತರ ಹಾಗೂ ದಕ್ಷಿಣ ದಿಕ್ಕಿನೆಡೆ ಇರದಂತೆ ಕಾಳಜಿ ವಹಿಸಿ.

ಇದನ್ನು ಓದಿ- ಜೀವನದಲ್ಲಿ ಶಾಂತಿಯ ಜೊತೆಗೆ ಸೌಭಾಗ್ಯ ನಿಮ್ಮದಾಗಿಸಲು ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ಪೇಂಟ್ ಮಾಡಿ

  • ಅಡುಗೆಮನೆಯಲ್ಲಿ ಕುಡಿಯುವ ನೀರನ್ನು ಈಶಾನ್ಯ ದಿಕ್ಕಿನಲ್ಲಿ ಮತ್ತು ಅಡುಗೆ ಅನಿಲ ಸಿಲಿಂಡರ್ ಆಗ್ನೇಯ ದಿಕ್ಕಿನಲ್ಲಿ ಇಡಬೇಕು.
  • ಅಡುಗೆ ಮನೆಯಲ್ಲಿ ಪೊರಕೆ, ಸ್ವಚ್ಚತೆಯ ಸಾಮಾನುಗಳನ್ನು ಇರಿಸಲು ನೀವು ಬಯಸುತ್ತಿದ್ದರೆ, ಅವುಗಳನ್ನು ನೈಋತ್ಯ ದಿಕ್ಕಿನಲ್ಲಿಡಿ. ಆದರೆ, ಡಸ್ಟ್ ಬಿನ್ ಮಾತ್ರ ಅಡುಗೆಮನೆಯ ಹೊರಗಡೆಯೇ ಇರಲಿ.
  • ಮೈಕ್ರೊವೇವ್, ಮಿಕ್ಸರ್ ಅಥವಾ ಇತರ ಲೋಹದ ಉಪಕರಣಗಳನ್ನು ಆಗ್ನೇಯ ಮತ್ತು ರೆಫ್ರಿಜರೇಟರ್ ಅನ್ನು ವಾಯುವ್ಯದಲ್ಲಿ ಇಡಬೇಕು.
  • ಅಡುಗೆಮನೆ ಮುಕ್ತ ಮತ್ತು ಚೊಕಾಕಾರವಾಗಿರಬೇಕು. ಅಡುಗೆ ಮನೆಯ ಪೂರ್ವದಲ್ಲಿ ಕಿಟಕಿಗಳು ಮತ್ತು ಬೆಳಕು ನೀಡುವ ವಸ್ತುಗಳಿರಲಿ.

Trending News