ಈ ಬಾರಿಯ ಧನತ್ರಯೋದಶಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಖರೀದಿ ಮಾಡಿ, ಸಿಗಲಿದೆ ಶುಭ ಲಾಭ

ಧನತ್ರಯೋದಶಿಯ ದಿನ ಧನ್ವಂತರಿಯನ್ನು ಪೂಜಿಸಲಾಗುತ್ತದೆ ಮತ್ತು ಕೆಲವು ವಿಶೇಷ ವಸ್ತುಗಳ ಶಾಪಿಂಗ್ ಅನ್ನು ಈ ದಿನ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದೇ ವೇಳೆ, ಜನರು ಧನತ್ರಯೋದಶಿಯ ದಿನದಂದು ಹೊಸ ವಾಹನ ಮತ್ತು ಮನೆ ಇತ್ಯಾದಿಗಳನ್ನು ಖರೀದಿಸಲು ಪರಿಗಣಿಸುತ್ತಾರೆ.

Last Updated : Nov 8, 2020, 04:13 PM IST
  • ಈ ಬಾರಿ ನವೆಂಬರ್ 13 ರಂದು ಧನತ್ರಯೋದಶಿ ಪರ್ವವನ್ನು ಆಚರಿಸಲಾಗುತ್ತಿದೆ.
  • ಈ ದಿನ ನೀವು ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಶಾಪಿಂಗ್ ಮಾಡಿದರೆ, ನಂತರ ಶುಭ ಫಲಿತಾಂಶಗಳನ್ನು ನೀವು ಪಡೆಯಬಹುದು.
  • ಈ ವಿಶೇಷ ದಿನದಂದು ಐದು ದಿನಗಳ ದೀಪೋತ್ಸವ ಪ್ರಾರಂಭವಾಗುತ್ತದೆ. ಧನತ್ರಯೋದಶಿಯ ದಿನ ಧನ್ವಂತರಿಯನ್ನು ಪೂಜಿಸಲಾಗುತ್ತದೆ
ಈ ಬಾರಿಯ ಧನತ್ರಯೋದಶಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಖರೀದಿ ಮಾಡಿ, ಸಿಗಲಿದೆ ಶುಭ ಲಾಭ title=

ನವದೆಹಲಿ: ಈ ಬಾರಿ ನವೆಂಬರ್ 13 ರಂದು ಧನತ್ರಯೋದಶಿ (Dhanteras) ಪರ್ವವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಐದು ದಿನಗಳ ದೀಪೋತ್ಸವ ಪ್ರಾರಂಭವಾಗುತ್ತದೆ. ಧನತ್ರಯೋದಶಿಯ ದಿನ ಧನ್ವಂತರಿಯನ್ನು ಪೂಜಿಸಲಾಗುತ್ತದೆ ಮತ್ತು ಈ ದಿನದಂದು ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದೇ ವೇಳೆ ಜನರು ಧನತ್ರಯೋದಶಿಯ ದಿನದಂದು ಹೊಸ ವಾಹನ ಮತ್ತು ಮನೆ ಇತ್ಯಾದಿಗಳನ್ನು ಖರೀದಿಸಲು ಪರಿಗಣಿಸುತ್ತಾರೆ. ಇದಲ್ಲದೆ, ಜನರು ಈ ದಿನದಂದು ಸಾಕಷ್ಟು ಅಲಂಕಾರ ವಸ್ತುಗಳನ್ನು ಸಹ ಖರೀದಿಸುತ್ತಾರೆ. ಆದರೆ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಶಾಪಿಂಗ್ ಮಾಡಿದರೆ, ನಂತರ ಶುಭ ಫಲಿತಾಂಶಗಳನ್ನು ನೀವು  ಪಡೆಯಬಹುದು.

ಇದನ್ನು ಓದಿ- Dhanteras 2020: ಧನತ್ರಯೋದಶಿಯಂದು ಚಿನ್ನ-ಬೆಳ್ಳಿ ಖರೀದಿಸಲು ಸಾಧ್ಯವಾಗದಿದ್ದರೆ ಈ 5 ವಸ್ತುಗಳನ್ನು ಮನೆಗೆ ತಂದು ಲಕ್ಷ್ಮಿ ಕೃಪೆಗೆ ಪಾತ್ರರಾಗಿ

ವಿವಿಧ ರಾಶಿಗಳಿಗೆ ಅನುಗುಣವಾಗಿ ಧನತ್ರಯೋದಶಿಯ ಖರೀದಿ
ಮೇಷ:
ನೀವು ಚಿನ್ನ, ತಾಮ್ರ ಅಥವಾ ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ಧನತ್ರಯೋದಶಿಯ ದಿನ ಖರೀದಿಸಿದರೆ, ನಿಮ್ಮ ಆರ್ಥಿಕ ಪ್ರಗತಿಯ ಸಾಧ್ಯತೆಗಳು ಇನ್ನಷ್ಟು ಹೆಚ್ಚಾಗುತ್ತದೆ.

ವೃಷಭ: ಈ ದಿನ ನೀವು ಬೆಳ್ಳಿ ವಸ್ತುವನ್ನು ಖರೀದಿಸಬಹುದು. ಉದಾ- ಬೆಳ್ಳಿ ಲಕ್ಷ್ಮಿ ಗಣೇಶ್, ನಾಣ್ಯಗಳು ಅಥವಾ ಯಾವುದೇ ಆಭರಣಗಳನ್ನು ಈ ದಿನ ಖರೀದಿಸಬಹುದು.

ಮಿಥುನ: ನೀವು ತಾಮ್ರದ ವಸ್ತುವನ್ನು ಖರೀದಿಸಿ ಮನೆಗೆ ತಂದರೆ ಧನ್ವಂತರಿಯ ಕೃಪಾಕಟಾಕ್ಷಕ್ಕೆ ನೀವು ಪಾತ್ರರಾಗಬಹುದು.

ಇದನ್ನು ಓದಿ- Diwali 2020: ಆರ್ಥಿಕ ಸಮಸ್ಯೆ, ಸಾಲದಿಂದ ಮುಕ್ತಿ ಪಡೆಯಲು ದೀಪಾವಳಿಯಂದು ಈ 4 ಉಪಾಯಗಳನ್ನು ಮಾಡಿ

ಕರ್ಕ: ಈ ರಾಶಿಚಕ್ರದ ಜನರು ಈ ದಿನ ಉಕ್ಕಿನ ಪಾತ್ರೆಗಳನ್ನು ಖರೀದಿಸಬೇಕು, ಇದರಿಂದ ಮಹಾಲಕ್ಷ್ಮಿಯ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಉಳಿಯಲಿದೆ.

ಸಿಂಹ: ಈ ದಿನ ಚಿನ್ನದಿಂದ ತಯಾರಿಸಲಾಗಿರುವ ನಾಣ್ಯ ಅಥವಾ ಆಭರಣವನ್ನು ಖರೀದಿಸುವುದು ನಿಮಗೆ ಶುಭಕರ.

ಕನ್ಯಾ: ಈ ದಿನ ಕನ್ಯಾ ರಾಶಿಯ ಜನರು ವಾಹನವನ್ನು ಖರೀದಿಸಬಹುದು. ಇದಲ್ಲದೆ ಬೆಳ್ಳಿಯ ನಾಣ್ಯ ಖರೀದಿಸುವುದರಿಂದ ಕೂಡ ಶುಭ ಫಲ ಪ್ರಾಪ್ತಿಯಾಗುತ್ತದೆ.

ತುಲಾ: ಈ ಬಾರಿ ತುಲಾ ರಾಶಿಯ ಜನರು ಧನತ್ರಯೋದಶಿಯ ದಿನದಂದು ಬೆಳ್ಳಿಯ ಪಾತ್ರೆಗಳನ್ನು ಖರೀದಿಸಿದರೆ ಅವರಿಗೆ ಅತ್ಯಂತ ಶುಭ ಫಲ ಲಭಿಸಲಿದೆ. ಆದರೆ, ಒಂದು ವೇಳೆ ಹೊಸ ಪಾತ್ರೆಗಳ ಆವಶ್ಯಕತೆ ಇಲ್ಲದೆ ಇದ್ದರೆ ನೀವು ಹೊಸ ಬಟ್ಟೆಗಳನ್ನು ಸಹ ಖರೀದಿಸಬಹುದು.

ಇದನ್ನು ಓದಿ-Diwali 2020 ಶುಭ ದಿನದಂದು ಹೊಸ ಬೈಕ್ ಖರೀದಿಸಬೇಕೆ, 55,000 ಕ್ಕೂ ಕಮ್ಮಿ ಬೆಲೆಗೆ ಈ ಆಪ್ಶನ್ ಟ್ರೈ ಮಾಡಿ

ವೃಶ್ಚಿಕ: ದೀಪಾವಳಿಯ ಪೂಜಾ ಸಾಮಗ್ರಿಗಳನ್ನು ಇದೆ ದಿನ ಖರೀದಿಸಿದರೆ ಅತ್ಯಂತ ಉತ್ತಮ. ಈ ದಿನ ನೀವು ಚಿನ್ನದ ಆಭರಣಗಳನ್ನು ಕೂಡ ಖರೀದಿಸಬಹುದು. 

ಧನು: ಈ ರಾಶಿಚಕ್ರದ ಜನರು ಧನತ್ರಯೋದಶಿಯ ದಿನದಂದು ವಾಹನ ಹಾಗೂ ಬೆಳ್ಳಿಯ ಪಾತ್ರೆಗಳನ್ನು ಖರೀದಿಸಬಹುದು. ಇದರಿಂದ ಶುಭ ಫಲ ಪ್ರಾಪ್ತಿಯಾಗಲಿದೆ.

ಮಕರ: ಈ ದಿನ ಮಕರ ರಾಶಿಯ ಜನರು ದೀಪಾವಳಿ ಹಬ್ಬಕ್ಕಾಗಿ ಅಲಂಕಾರದ ವಸ್ತುಗಳನ್ನು ಖರೀದಿಸುವುದು ಉತ್ತಮ. ಇದರಿಂದ ನಿಮಗೆ ಶುಭಫಲ ಪ್ರಾಪ್ತಿಯಾಗಲಿದೆ.

ಕುಂಭ: ಶನಿದೇವ ಈ ರಾಶಿಯ ಅಧಿಪತಿ. ಹೀಗಾಗಿ ಈ ದಿನ ಸ್ಟೀಲ್ ಹಾಗೂ ಬೆಳ್ಳಿ ಪಾತ್ರೆ ಅಥವಾ ಆಭರಣಗಳನ್ನು ನೀವು ಖರೀದಿಸುವುದು ಉತ್ತಮ.

ಮೀನ: ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ಒಂದು ವೇಳೆ ಈ ರಾಶಿಯ ಜನರು ಖರೀದಿಸಿದರೆ ಅವರಿಗೆ ಉತ್ತಮ ಫಲ ಪ್ರಾಪ್ತಿಯಾಗಲಿದೆ. ಇದಲ್ಲದೆ ನೂತನ ಒಡಂಬಡಿಕೆ ಮಾಡಿಕೊಳ್ಳುವುದು ಕೂಡ ನಿಮಗೆ ಶುಭಕರ.

Trending News