ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಮಹಿಳೆಯರೇ ಎಚ್ಚರ: ಹಗ್, ಕಿಸ್ ಮಾಡಿ ಎಸ್ಕೇಪ್ ಆಗ್ತಾರೆ ಕಾಮುಕರು..!

Bangalore Crime News: ಮುಂಜಾನೆ ವಾಕಿಂಗ್ ಮಾಡುವ ಮಹಿಳೆಯರನ್ನು ಕಾಮುಕರು ಬಿಡುತ್ತಿಲ್ಲ. ಈ ವಿಡಿಯೋ ನೋಡಿದರೆ ಹೊರಗಡೆ ಓಡಾಡುವ ಮಹಿಳೆಯರು ಬೆಚ್ಚಿ ಬೀಳೋದು 

Written by - VISHWANATH HARIHARA | Last Updated : Aug 5, 2024, 08:46 AM IST
    • ಬೆಂಗಳೂರಿನಲ್ಲಿ ಮಹಿಳೆಯರಿಗೆ ಇಲ್ವಾ ಭದ್ರತೆ
    • ಈ ವಿಡಿಯೋ ನೋಡಿದರೆ ಮಹಿಳೆಯರು ಬೆಚ್ಚಿ ಬೀಳ್ತಾರೆ
    • ರಸ್ತೆ ಮೇಲೆ ಓಡಾಡುವ ಮಹಿಳೆ ಮೇಲೆ ಕಾಮುಕ ಅಟ್ಟಹಾಸ
ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಮಹಿಳೆಯರೇ ಎಚ್ಚರ: ಹಗ್, ಕಿಸ್ ಮಾಡಿ ಎಸ್ಕೇಪ್ ಆಗ್ತಾರೆ ಕಾಮುಕರು..! title=

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ಇಲ್ವಾ ಭದ್ರತೆ ಇಲ್ವಾ ಎಂಬ ಅನುಮಾನ ಈ ಸಿಸಿಟಿವಿ ದೃಶ್ಯಾವಳಿ ನೋಡಿದ್ರೆ ಮೂಡುತ್ತೆ. ಹೆಣ್ಣು ಯಾವಾದ ಮಧ್ಯರಾತ್ರಿ ಧೈರ್ಯವಾಗಿ ಓಡಾಡುತ್ತಾಳೋ ಅಂದೇ ದೇಶಕ್ಕೆ ಸ್ವಾತಂತ್ರ್ಯ ಬಂದಹಾಗೇ ಎಂಬ ಮಾತಿದೆ. ಆದರೆ ಇದೇ ಶುಕ್ರವಾರ ನಡೆದಿರುವ ಘಟನೆ ಎಂತವರನ್ನು ಬೆಚ್ಚಿಬೀಳಿಸುತ್ತೆ.‌ 

ಸಿಲಿಕಾನ್ ಸಿಟಿಯಲ್ಲಿ ಮುಂಜಾನೆ ವಾಕಿಂಗ್ ಮಾಡುವ ಮಹಿಳೆಯರನ್ನು ಕಾಮುಕರು ಬಿಡುತ್ತಿಲ್ಲ. ಈ ವಿಡಿಯೋ ನೋಡಿದರೆ ಹೊರಗಡೆ ಓಡಾಡುವ ಮಹಿಳೆಯರು ಬೆಚ್ಚಿ ಬೀಳೋದು ಪಕ್ಕಾ. ಮುಂಜಾನೆ ವಾಕಿಂಗ್ ಹೋಗಲು ತನ್ನ ಗೆಳತಿಯರಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಹಿಂದಿನಿಂದ ಮಹಿಳೆಯನ್ನು ಬಲವಂತವಾಗಿ ತಬ್ಬಿಕೊಂಡು  ಮುತ್ತಿಕ್ಕಿ ವಿಕೃತಿ ತೋರಿದ್ದಾನೆ.

ಇದನ್ನೂ ಓದಿ: 'ಶೀಘ್ರದಲ್ಲೇ ಲವ್ ಜಿಹಾದ್' ಪ್ರಕರಣಗಳಿಗೆ ಅಸ್ಸಾಂನಲ್ಲಿ ಜೀವಾವಧಿ ಶಿಕ್ಷೆ-ಅಸ್ಸಾಂ ಸಿಎಂ ಘೋಷಣೆ  

ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ಘಟನೆ ನಡೆದಿದ್ದ ಎನ್ನಲಾಗಿದ್ದು, ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಉತ್ತರ ಭಾರತ ಮೂಲದ ಮಹಿಳೆಯನ್ನು ಬೀದಿ ಕಾಮಣ್ಣ  ಹಿಂಬದಿಯಿಂದ ಬಂದು  ಹಿಡಿದುಕೊಂಡು ಒಂದು ಕೈ ನಿಂದ ಬಾಯಿ ಮುಚ್ಚಿದ್ದಾನೆ. 

ಮಹಿಳೆ ತಪ್ಪಿಸಿಕೊಂಡು ಹೋದರು ಸಹ ಮತ್ತೆ ಓಡಿಹೋಗಿ ಮಹಿಳೆಯನ್ನ ಹಿಡಿದು ಹಿಂಸಿದ್ದಾನೆ. ಮಹಿಳಾ ಕಿರುಚಿಕೊಂಡ ತಕ್ಷಣ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಕೋಣನಕುಂಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ‌. ಸದ್ಯ ಪ್ರಕರಣ ದಾಖಲಿಸಿಕೊಂಡು  ಕಾಮುಕನಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: "ಎಲ್ಲಾ ಇಲಾಖೆಗಳಲ್ಲಿ ಸಾಧಕ ಕ್ರೀಡಾಪಟುಗಳಿಗೆ ಶೇ.2ರಷ್ಟು ಹುದ್ದೆಗಳಿಗೆ ಮೀಸಲು"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News