Road Accident:ಮದುವೆಯಾಗಿ ಕೇವಲ ಒಂದುವರೆ ತಿಂಗಳಾಗಿತ್ತು. ನವ ದಂಪತಿ ಎಂದ ಮೇಲೆ ಹುಮಸ್ಸು ಹುರುಪು ಸಾಮಾನ್ಯ.ಇನ್ನು ವಿವಾಹ ಹುರುಪು ಮಾಸಿರಲಿಲ್ಲ. ತಮ್ಮ ಮುಂದಿನ ಜೀವನದ ಬಗ್ಗೆ ಅದೇಷ್ಟು ಕನಸು ಕಟ್ಟಿದ್ದರೋ ಕಾಣೆ .ಆದರೆ ಈ ದಂಪತಿಗಳ ವಿಧಿಯಾಟನೇ ಬೇರೆ ಇತ್ತು.
ರಘು ಹಾಗೂ ಅನುಷಾ ಎಂಬ ಇಬ್ಬರು ದಂಪತಿಗಳು ತಿಗಳನಹಳ್ಳಿಯಿಂದ ಬಳ್ಳಾರಿಗೆ ಸಂಬಂಧಿಕರ ಮದುವೆಗೆಂದು ಕಾರಿನಲ್ಲಿ ಮದುವೆಗೆ ತೆರಳುತ್ತಿದ್ದರು.. ಈ ವೇಳೆ ಏಕಾಏಕಿ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ನವ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನೊಪ್ಪಿದ್ದಾರೆ.
ಇದನ್ನೂ ಓದಿ:ಬೈಕ್ ಕಳ್ಳತನದ ದೂರು ದಾಖಲಿಸಿಕೊಳ್ಳು ಪೊಲೀಸರ ಹಿಂದೇಟು : ಕಮಿಷನರ್ ಎಚ್ಚರಿಕೆ
ಹಾಸನ ಜಿಲ್ಲೆ ಅರಸಿಕೆರೆ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆಂದು ಮೂಲಗಳು ತಿಳಿಸಿವೆ. ತುಮಕೂರು ಜಿಲ್ಲೆ, ಚಿಕ್ಕನಾಯಕನಳ್ಳಿ ತಾಲೂಕಿನ, ಹುಳಿಯಾರ್ ಗೇಟ್ ಬಳಿ ಘಟನೆ ಸಂಭವಿಸಿದೆ.
ಇದನ್ನೂ ಓದಿ:R Ashok : ಸಿಎಂ ಆಯ್ಕೆ ಹೈ ಕಮಾಂಡ್ ನಿರ್ಧಾರ : ಸಚಿವ ಆರ್ ಅಶೋಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.