ಯಾದಗಿರಿ: ಗಿರಿನಾಡು ಯಾದಗಿರಿಯಲ್ಲಿ ಗಾಂಜಾ ಘಾಟಿನ ಹಾವಳಿ ಹೆಚ್ಚಾಗಿದೆ. ಪಾನ್-ಬೀಡಾ ಅಂಗಡಿಗಳಲ್ಲಿ ಗಾಂಜಾ ಜಾಕಲೇಟ್ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಾದಕ ವ್ಯಸನಿಗಳ ಹಾಟ್ ಸ್ಪಾಟ್ ಆಯಿತಾ ಕರುನಾಡು ಅನ್ನೋ ಪ್ರಶ್ನೆ ಮೂಡಿದೆ.
ವಿದ್ಯಾರ್ಥಿಗಳು ಹಾಗೂ ಮಧ್ಯ ವಯಸ್ಕರೇ ಗಾಂಜಾ ಆರೋಪಿಗಳ ಟಾರ್ಗೆಟ್ ಆಗಿದ್ದು, ಉತ್ತರ ಪ್ರದೇಶದ ಗಾಂಜಾ ನಶೆಯ ಜಾಕಲೇಟ್ ಯಾದಗಿರಿ ಜಿಲ್ಲೆಯಲ್ಲಿ ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಮೂಲದವರಿಂದ ರಾಜಾರೋಷವಾಗಿ ಗಾಂಜಾ ಚಾಕಲೇಟ್ ಮಾರಾಟ ನಡೆಯುತ್ತಿದೆ. ‘ಉಡ್ತಾ ಪಂಜಾಬ್’ ಆಗುತ್ತಿದೇಯಾ ಯಾದಗಿರಿ ಅನ್ನೋ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: N Cheluvarayaswamy : ಬಿಜೆಪಿಯವರು ರಾಜಕೀಯವಾಗಿ ತೀಟೆ ಮಾಡ್ತಾರೆ : ಚಲುವರಾಯಸ್ವಾಮಿ
ಶಹಾಪೂರ ನಗರದಲ್ಲಿ ಪಾನ್ಶಾಪ್ ಇಟ್ಟುಕೊಂಡು ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದವರು ಆರೋಪಿಗಳು ಅಂದರ್ ಆಗಿದ್ದಾರೆ. 3 ಪಾನ್ಶಾಪ್ಗಳ ಮೇಲೆ ಅಬಕಾರಿ ಪೋಲಿಸರ ಮಿಂಚಿನ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಜೀತೆಂದ್ರ ಹಾಗೂ ಮೋಹಿತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಶಹಾಪೂರ ಅಬಕಾರಿ ಉಪ ಅಧೀಕ್ಷಕ ಮಲ್ಲಿಕಾರ್ಜುನ್ ರಡ್ಡಿ, ಕೇದಾರನಾಥ್ ಮತ್ತು ದನರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Khadi Flags : ಪಾಲಿಸ್ಟರ್ ಧ್ವಜಗಳ ಮಧ್ಯೆ, ಮಾರುಕಟ್ಟೆಯಲ್ಲಿ ಖಾದಿ ಧ್ವಜಗಳಿಗೆ ಭಾರಿ ಬೇಡಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.