ಸಿಎಂ ಮನೆ ಪಕ್ಕದಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದ ಕಳ್ಳ

Theft in Bengaluru: ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ರಾಜಸ್ಥಾನ ಮೂಲದ ಮಂಜುಳಾ ದೇವಿ ಎಂಬುವರ ಮನೆಯಲ್ಲಿ ಕಳೆದ‌ 4ನೇ ತಾರೀಖು ಕಳ್ಳ ತನ್ನ ಕೈಚಳಕ ಮೆರೆದಿದ್ದಾನೆ. 

Written by - VISHWANATH HARIHARA | Last Updated : Feb 8, 2024, 04:05 PM IST
  • ಸಿಎಂ ಮನೆ ಹಿಂಭಾಗದ ಮನೆಯಲ್ಲಿ ಕಳ್ಳತನ
  • ಹಾಡುಹಗಲೇ ಕಳ್ಳತನ ಮಾಡಿ ಪರಾರಿ
  • ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲು
ಸಿಎಂ ಮನೆ ಪಕ್ಕದಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದ ಕಳ್ಳ  title=

ಬೆಂಗಳೂರು: ಖತರ್ನಾಕ್ ಕಳ್ಳನೊಬ್ಬ ಸಿಎಂ ಮನೆ ಹಿಂಭಾಗದ ಮನೆಯಲ್ಲಿ ಹಾಡುಹಗಲೇ ಪೊಲೀಸರಿಗೇ ಚಾಲೆಂಜ್ ಹಾಕೋ ರೀತಿ ಕಳ್ಳತನ ಮಾಡಿದ್ದಾನೆ. ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ರಾಜಸ್ಥಾನ ಮೂಲದ ಮಂಜುಳಾ ದೇವಿ ಎಂಬುವರ ಮನೆಯಲ್ಲಿ ಕಳೆದ‌ 4ನೇ ತಾರೀಖು ಕಳ್ಳ ತನ್ನ ಕೈಚಳಕ ಮೆರೆದಿದ್ದಾನೆ. 

ಮನೆಗೆ ಡಿಜಿಟಲ್ ಲಾಕರ್ ಇದ್ದು, ಹತ್ತೋಕು ಸಹ ಮೆಟ್ಟಿಲಿಲ್ಲ. ಮನೆ ಬಾಗಿಲು ಸಹ ಸರಿಯಾಗಿ ಕಾಣೋದೆ ಇಲ್ಲ.. ಇಷ್ಟಾದ್ರು ಬಂಗಲೆಯಲ್ಲಿ ಚಾಲಾಕಿ ಕಳ್ಳ ಮಟ ಮಧ್ಯಾಹ್ನವೇ ಚಿನ್ನಾಭರಣ ಕದ್ದಿದ್ದಾನೆ. ಪಕ್ಕದ ಮನೆ ಹತ್ತಿ ಜಂಪ್‌ ಮಾಡಿ ಎಂಟ್ರಿ ಕೊಟ್ಟು ಗ್ರಿಲ್ ಕಟ್ ಮಾಡಿ ಸಿಕ್ಕ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾನೆ. ನಾಲ್ಕನೇ ತಾರೀಖು ಹುಟ್ಟೂರು ರಾಜಸ್ಥಾನಕ್ಕೆ ಹೋಗಿದ್ದ ಮಂಜುಳಾ ಕುಟುಂಬದ ಬೃಹತ್ ಬಂಗಲೆಯಲ್ಲಿ ಯಾರೂ ಇರಲಿಲ್ಲ. 

ಇದನ್ನೂ ಓದಿ: ಅನುದಾನ ಬರ್ತಿಲ್ಲ, ನಂ ಸಂಬಳ ಮುಂದಕ್ಕೇನೋ ಆಗತ್ತೋ: ಯಳಂದೂರು ತಹಶಿಲ್ದಾರ್ ಅಳಲು 

ಎರಡು ಮೂರು ದಿನ ಸತತವಾಗಿ ಬಂಗಲೆ ವಾಚ್ ಮಾಡಿದ್ದ ಕಳ್ಳ, ಮನೇಲಿ ಯಾರೂ ಇಲ್ಲ ಅಂತಾ ಕನ್ಫರ್ಮ್ ಮಾಡಿಕೊಂಡು ಪಕ್ಕದ ಬಿಲ್ಡಿಂಗ್ ನಿಂದ ಜಂಪ್‌ ಮಾಡಿ ಕಳ್ಳತನ ಮಾಡಿದ್ದಾನೆ. ಮನೆಯಲ್ಲಿದ್ದ 2.250ಗ್ರಾಂ ಚಿನ್ನ, ಬೆಳ್ಳಿ ವಸ್ತುಗಳು, ಚಿನ್ನದ ಬಿಸ್ಕತ್, ಬೆಳ್ಳಿಯ ಲೋಟಗಳು, ಬೆಳ್ಳಿಯ ಹಸು ಮೂರ್ತಿಯನ್ನು ಸಹ ಕದ್ದಿದ್ದಾನೆ. 

ಇನ್ನೂ ರಾಜಸ್ಥಾನದಿಂದ ಕುಟುಂಬಸ್ಥರು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಸದ್ಯ ಘಟನೆ ಸಂಬಂಧ ಶೇಷಾದ್ರಿಪುರಂ ಠಾಣೆಗೆ ದೂರು ನೀಡಲಾಗಿದೆ. ಸಿಎಂ ಮನೆ, ಪೊಲೀಸ್ ಔಟ್ ಪೊಲೀಸ್ ಠಾಣೆ ಪಕ್ಕದಲ್ಲೇ ಇದ್ರೂ ಸಹ ಕಳ್ಳತನ ನಡೆದಿದ್ದು, ಕಳ್ಳನ ಕರಾಮತ್ತಿಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಸಮಾನತೆ ನಿವಾರಣೆಗೆ ಗ್ಯಾರಂಟಿ ಕಾರ್ಯಕ್ರಮ: ಸಿಎಂ ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News