ಕೆಲಸ ಕೊಡಿಸ್ತಿನಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಸ್ಕೆಚ್‌ ಹಾಕ್ತಿದ್ದ ಪಂಟರ್‌.!

ಕೆಲಸ ಕೊಡಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಗಾಳ ಓಯೋ ರೂಮಿಗೆ ಕರೆಸಿ ಸರಸ..! 

Written by - VISHWANATH HARIHARA | Last Updated : Feb 3, 2023, 04:14 PM IST
  • ನಕಲಿ‌ ಇನ್ ಸ್ಟ್ರಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಕಾಮುಕ
  • ಮಹಿಳೆಯ ಪೋಟೊಗಳನ್ನ ಡಿಪಿಗೆ ಹಾಕಿಕೊಂಡು ಆಂಧ್ರ ಮೂಲದ‌ ಯುವತಿಯರು ಹಾಗೂ ಮಹಿಳೆಯರನ್ನು‌ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ‌
  • ಇದೇ ರೀತಿ ಸುಮಾರು 10 ಕ್ಕಿಂತ ಹೆಚ್ಚು ಯುವತಿಯರನ್ನ ಕೆಲಸ‌ ಕೊಡಿಸುವುದಾಗಿ ನಂಬಿಸಿ ದುರ್ಬಳಕೆ ಮಾಡಿಕೊಂಡಿದ್ದ. ಎಂದು ನಗರ ಪೊಲೀಸ್ ಆರೋಪಿಯನ್ನ ಬಂಧಿಸಿದ್ದಾರೆ.
ಕೆಲಸ ಕೊಡಿಸ್ತಿನಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಸ್ಕೆಚ್‌ ಹಾಕ್ತಿದ್ದ ಪಂಟರ್‌.!  title=
Crime

ಬೆಂಗಳೂರು : ಕೆಲಸ ಕೊಡಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಗಾಳ ಓಯೋ ರೂಮಿಗೆ ಕರೆಸಿ ಸರಸ..! 
ಬೆಂಗಳೂರು: ಆತ‌ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್..ಕೈ ತುಂಬಾ ಸಂಬಳ‌ ಸಹ ಬರುತ್ತಿತ್ತು. ಸುಲಭವಾಗಿ ಲೈಫ್ ಸೆಟಲ್ ಮಾಡಿಕೊಳ್ಳುವ ದಾರಿ ಆತನ ಮುಂದಿತ್ತು.‌ ಹಣದ ಹಿಂದೆ ಬಿದ್ದ ಟೆಕ್ಕಿ ಮಹಿಳೆ ಹೆಸರಿನಲ್ಲಿ  ನಕಲಿ‌ ಇನ್ ಸ್ಟ್ರಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. 

ಆಂಧ್ರಪ್ರದೇಶ ಮೂಲದ ದಿಲ್ಲಿ‌ಪ್ರಸಾದ್ ಬಂಧಿತನಾಗಿದ್ದು ಕೋರಮಂಗಲದಲ್ಲಿ ಈ ಕಿಲಾಡಿ ವಾಸವಾಗಿದ್ದ. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ಇನ್ ಸ್ಟ್ರಾಗ್ರಾಮ್ ನಲ್ಲಿ ಮೋನಿಕಾ, ಮ್ಯಾನೇಜರ್ ಸೇರಿದಂತೆ ಐದಕ್ಕಿಂತ ಹೆಚ್ಚು ನಕಲಿ ಖಾತೆಗಳನ್ನು ಸೃಷ್ಟಿಸಿ ಯುವತಿ ಹಾಗೂ ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದ. ತಾನು ಎಂಎನ್ ಸಿ‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ನನಗೆ ಗೊತ್ತಿರುವ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ.‌ ಈ ಮಾತನ್ನ ನಂಬಿ ಆರೋಪಿ ಹೇಳಿದ ಜಾಗಕ್ಕೆ ಮಹಿಳೆಯರು ಬರುತ್ತಿದ್ದರು. ಮಡಿವಾಳದ ಓಯೋ ರೂಮ್ ನ್ನ ಬುಕ್‌ ಮಾಡುತ್ತಿದ್ದ ಆರೋಪಿ ರೂಮ್ ನಲ್ಲಿ ಸಂದರ್ಶನ ನಡೆಯಲಿದೆ‌ ಎಂದು ಒಳಗೆ ಕರೆಯಿಸಿಕೊಳ್ಳುತ್ತಿದ್ದ. ಆದರೆ ಸಂದರ್ಶನ ನಡೆಸುವ ಬದಲು ಸರಸವಾಡಿ ಸಹಕರಿಸಿದರೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ಪುಸಲಾಯಿಸುತ್ತಿದ್ದ. ಲೈಂಗಿಕ ಕ್ರಿಯೆ ನಡೆದಸುವಾಗ  ರಹಸ್ಯವಾಗಿ ವಿಡಿಯೋ ಸೆರೆಹಿಡಿದುಕೊಳ್ಳುತ್ತಿದ್ದ.‌ ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ. ಇದೇ ರೀತಿ ಸುಮಾರು 10 ಕ್ಕಿಂತ ಹೆಚ್ಚು ಯುವತಿಯರನ್ನ ಕೆಲಸ‌ ಕೊಡಿಸುವುದಾಗಿ ನಂಬಿಸಿ ದುರ್ಬಳಕೆ ಮಾಡಿಕೊಂಡಿದ್ದ. ಎಂದು ನಗರ ಪೊಲೀಸ್ ಆರೋಪಿಯನ್ನ ಬಂಧಿಸಿದ್ದಾರೆ. 

ಇದನ್ನೂ ಓದಿ : 

ನಕಲಿ ಖಾತೆ ಸೃಷ್ಟಿಸಿ ಮಹಿಳೆಯ ಪೋಟೊಗಳನ್ನ ಡಿಪಿಗೆ ಹಾಕಿಕೊಂಡು ಆಂಧ್ರ ಮೂಲದ‌ ಯುವತಿಯರು ಹಾಗೂ ಮಹಿಳೆಯರನ್ನು‌ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ‌. ಉದ್ಯೋಗದ ಅನಿವಾರ್ಯತೆ ಇದ್ದವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದ. ಇಂತಹ ದಿನದಂದು ಸೂಚಿಸಿದ ಸ್ಥಳಕ್ಕೆ ಬಂದರೆ ಕಂಪನಿಯವರ ಸಂದರ್ಶನ ನಡೆಸಲಿದ್ದಾರೆ ಎಂದು ಸುಳ್ಳು ಹೇಳಿ ‌ನಗರಕ್ಕೆ‌ ಕರೆಯಿಸಿಕೊಂಡು ವಂಚಿಸುತ್ತಿದ್ದ. ಈ ಸಂಬಂಧ ದೂರು ಬಂಧ ಆಧಾರದ‌ ಮೇರೆಗೆ ಐಟಿ ಆ್ಯಕ್ಟ್ ನಡಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತನ ಮೊಬೈಲ್ ಪರಿಶೀಲಿಸಿದಾಗ ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ‌ನಿರಂತರವಾಗಿ ಈ ರೀತಿ ಮೋಸ ಮಾಡುತ್ತಿದ್ದ  ಎಂಬುದು ಗೊತ್ತಾಗಿದೆ. ಇನ್ನೂ ಇಂತಹ ಜಾಲಕ್ಕೆ ಬೀಳುವ ಮುನ್ನ ಸಾರ್ವಜನಿಕರು ಎಚ್ಚರವಾಗಿರಿ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News