ಭೀಕರ ಅಪಘಾತ: ಸ್ಥಳದಲ್ಲೇ 7 ಮಂದಿ ದುರ್ಮರಣ

ಘಟನೆಯಲ್ಲಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

Written by - Bhavishya Shetty | Last Updated : Apr 23, 2022, 05:31 PM IST
  • ಕ್ರೂಸರ್‌-ಟ್ರಕ್‌ ನಡುವೆ ಭೀಕರ ಅಪಘಾತ
  • ಸ್ಥಳದಲ್ಲೇ 7 ಮಂದಿ ಸಾವು
  • ಮಹಾರಾಷ್ಟ್ರದಲ್ಲಿ ನಡೆದ ದಾರುಣ ಘಟನೆ
ಭೀಕರ ಅಪಘಾತ: ಸ್ಥಳದಲ್ಲೇ 7 ಮಂದಿ ದುರ್ಮರಣ title=
Maharashtra

ಮಹಾರಾಷ್ಟ್ರ: ಕ್ರೂಸರ್​​ ವಾಹನ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಲಾತೂರ್​​ನಿಂದ ಅಂಬಾಜೋಗೈ ಕಡೆಗೆ ತೆರಳುತ್ತಿದ್ದ ಕ್ರೂಸರ್​​ ವಾಹನ ಟ್ರಕ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಅನೇಕರ ಮೃತದೇಹಗಳು ಛಿದ್ರ ಛಿದ್ರವಾಗಿದೆ. 

ಇದನ್ನು ಓದಿ: ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ: ಪಶ್ಚಿಮ ರಾಷ್ಟ್ರದಿಂದ ಬಂದಿರೋ ಇ-ಮೇಲ್..!

ಇನ್ನು ಘಟನೆಯಲ್ಲಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಘಟನಾ ಸ್ಥಳದಲ್ಲಿ ಜಮಾಯಿಸಿದ ಜನರು ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಇತ್ತೀಚೆಗೆ ಮೈಸೂರಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಬೊಲೆರೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್​ಬೆಟ್ಟ ರಸ್ತೆಯಲ್ಲಿ ನಡೆದಿತ್ತು. ​

ಇದನ್ನು ಓದಿ: ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆ : ಮಹಾತ್ಕಾರ್ಯಕ್ಕೆ ಮುಂದಾದ ಅಶ್ವಿನಿ

ಮದುವೆ ಕಾರ್ಯ ಮುಗಿಸಿಕೊಂಡು ಆಗಮಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಇನ್ನು ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಹುಣಸೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊಡಗು ಜಿಲ್ಲೆಯ ಪಾಲಿಬೆಟ್ಟ ಮೂಲದ ಅನಿಲ್, ಸಂತೋಷ್, ವಿನುತ್, ರಾಜೇಶ್, ದಯಾನಂದ್, ಬಾಬು ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. 

Trending News