Rasagulla Crime: ರಸಗುಲ್ಲಕ್ಕಾಗಿ ಬಿತ್ತು ಹೆಣ: ರಣರಂಗವಾಯ್ತು ಮದುವೆ ಮನೆ!!

ಇದೀಗ ಮತ್ತೆ ಅಂತಹದ್ದೇ ವಿಷಯ ಮುನ್ನೆಲೆಗೆ ಬಂದಿದ್ದು, ಇಲ್ಲಿ ಗಲಾಟೆಯ ಜೊತೆಗೆ ಹೆಣವೇ ಬಿದ್ದಿದೆ. ಉತ್ತರಪ್ರದೇಶದ ಅಗ್ರಾದ ಎತ್ಮಾದಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿನಾಯಕ ಭವನದಲ್ಲಿ ನಡೆದ ವಿವಾಹದಲ್ಲಿ ರಸಗುಲ್ಲಾ ಮಾಡಿಲ್ಲವೆಂದು ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಂಭ್ರಮದಲ್ಲಿರಬೇಕಾದ ಮದುವೆ ಮನೆ ಮಣಸವಾಗಿದೆ.

Written by - Bhavishya Shetty | Last Updated : Oct 29, 2022, 12:45 PM IST
    • ಸಂಭ್ರಮದ ಮನೆಯಲ್ಲಿ ಸಣ್ಣ ಪುಟ್ಟ ಗದ್ದಲಗಳು ಇರುವುದು ಸಾಮಾನ್ಯ
    • ರಸಗುಲ್ಲಾ ಮಾಡಿಲ್ಲವೆಂದು ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
    • ಉತ್ತರಪ್ರದೇಶದ ಅಗ್ರಾದ ಎತ್ಮಾದಪುರದಲ್ಲಿ ಈ ಘಟನೆ ನಡೆದಿದೆ
Rasagulla Crime: ರಸಗುಲ್ಲಕ್ಕಾಗಿ ಬಿತ್ತು ಹೆಣ: ರಣರಂಗವಾಯ್ತು ಮದುವೆ ಮನೆ!! title=
Rasgulla

ಭಾರತೀಯ ಮದುವೆಗಳಲ್ಲಿ ವಿವಿಧ ರೀತಿಯ ಸಂಭ್ರಮಗಳು ಕಾಣಬಹುದು. ದೇಶದ ಪ್ರತೀ 20 ಕಿ.ಮೀಗೆ ಸಂಪ್ರದಾಯ ಪದ್ಧತಿಗಳು ಬದಲಾಗುವಂತೆ ಒಂದೊಂದು ಧರ್ಮ, ಒಂದೊಂದು ಜಾತಿಗಳಲ್ಲಿ ವಿವಾಹ ಸಂಪ್ರದಾಯಗಳು ಭಿನ್ನವಾಗಿರುತ್ತದೆ. ಇಂತಹ ಸಂಭ್ರಮದ ಮನೆಯಲ್ಲಿ ಸಣ್ಣ ಪುಟ್ಟ ಗದ್ದಲಗಳು ಇರುವುದು ಸಾಮಾನ್ಯ. ಇನ್ನು ಮದುವೆ ಮನೆಯಲ್ಲಿ ಊಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಒಂದು ವೇಳೆ ಯಾರಾದರು ಕುಟುಂಬದ ಮುಖ್ಯಸ್ಥರು ಹೇಳಿದ ಅಡುಗೆ ಮಾಡಿಲ್ಲವೆಂದರೆ ಅಲ್ಲಿ ಕೋಲಾಹಲವೇ ನಡೆಯಬಹುದು. ಇಂತಹ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದೆ.

ಇದನ್ನೂ ಓದಿ: Medical Miracle: ಏಳು ತಿಂಗಳು ಕೋಮಾದಲ್ಲಿದ್ದೇ ಮಗುವಿಗೆ ಜನ್ಮ ನೀಡಿದ ‘ಮಹಾತಾಯಿ’

ಇದೀಗ ಮತ್ತೆ ಅಂತಹದ್ದೇ ವಿಷಯ ಮುನ್ನೆಲೆಗೆ ಬಂದಿದ್ದು, ಇಲ್ಲಿ ಗಲಾಟೆಯ ಜೊತೆಗೆ ಹೆಣವೇ ಬಿದ್ದಿದೆ. ಉತ್ತರಪ್ರದೇಶದ ಅಗ್ರಾದ ಎತ್ಮಾದಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿನಾಯಕ ಭವನದಲ್ಲಿ ನಡೆದ ವಿವಾಹದಲ್ಲಿ ರಸಗುಲ್ಲಾ ಮಾಡಿಲ್ಲವೆಂದು ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಂಭ್ರಮದಲ್ಲಿರಬೇಕಾದ ಮದುವೆ ಮನೆ ಮಣಸವಾಗಿದೆ.

ಇನ್ನು ಈ ಘಟನೆ ಬಗ್ಗೆ ಮಾತನಾಡಿದ ಎತ್ಮಾದಪುರದ ಪೊಲೀಸ್‌ ಠಾಣೆಯ ಮುಖ್ಯಸ್ಥ ಸರ್ವೇಶ್‌ ಕುಮಾರ್ “ಇಸ್ಮಾನ್ ಅಹ್ಮದ್ ಎಂಬವರ ಇಬ್ಬರು ಹೆಣ್ಣು ಮಕ್ಕಳಿಗೆ ವಾಕರ್ ಅಹ್ಮದ್ ಎಂಬವರ ಇಬ್ಬರು ಗಂಡು ಮಕ್ಕಳೊಂದಿಗೆ ವಿವಾಹ ನಿಶ್ಚಯವಾಗಿತ್ತು. ಈ ಮದುವೆಯಲ್ಲಿ ಎರಡು ಕುಟುಂಬದ ನೆಂಟರಿಷ್ಟರ ಮಧ್ಯೆ ರಸಗುಲ್ಲಾ ನೀಡಿಲ್ಲ ಎಂಬ ಕಾರಣಕ್ಕೆ ಜಗಳ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಗ್ಲಾಸು, ತಟ್ಟೆ, ಚೇರುಗಳಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಾಕು ಇರಿತಕೊಳಗಾಗಿ ಓರ್ವ ಸಾವನ್ನಪ್ಪಿದ್ದಾನೆ” ಎಂದಿದ್ದಾರೆ.

ಗಲಾಟೆ ನಡೆಯುತ್ತಿದ್ದ ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಎರಡೂ ಕಡೆಯವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಈ ಬಳಿಕ ಸಾಕ್ಷಿ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಎಲಾನ್ ಮಸ್ಕ್ ತೆಕ್ಕೆಗೆ ಟ್ವಿಟರ್: CEO ಪರಾಗ್ ಅಗ್ರವಾಲ್ ಗೆ ಸಿಗಲಿದೆ 345 ಕೋಟಿ!

ಮದುವೆ ಮನೆಯಲ್ಲಿ ರಸಗುಲ್ಲಾ ಮುಗಿದಿದ್ದರಿಂದ ಕೋಪಗೊಂಡ ಜನ ಚಾಕುವಿಂದ ಹಲ್ಲೆ ಮಾಡಿದ್ದಾರೆ. ಈ ಅವಘಡದಲ್ಲಿ ಗಂಭೀರ ಗಾಯಗೊಂಡ 22 ವರ್ಷದ ಸನ್ನಿ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಅಷ್ಟೇ ಅಲ್ಲದೆ, ಈ ಜಗಳದಲ್ಲಿ ಒಟ್ಟು ಐವರು ಗಾಯಗೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News