ಹನಿ ಅಂತಾ ಹೋದ ವ್ಯಕ್ತಿ: ಸರಸಕ್ಕೆ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್

Crime News : ಟೆಲಿಗ್ರಾಮ್ ಮೂಲಕ ಯುವಕರನ್ನ ಪರಿಚಯ ಮಾಡಿಕೊಂಡು ಸರಸಕ್ಕೆ ಕರೆದು ಸುಲಿಗೆ ಮಾಡಿದ್ದ ಹನಿಟ್ರ್ಯಾಪ್ ಗ್ಯಾಂಗ್ನ ಮೂವರನ್ನ‌ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.‌  

Written by - VISHWANATH HARIHARA | Edited by - Savita M B | Last Updated : Aug 1, 2023, 12:23 PM IST
  • ಸುಂದರಿಯೊಬ್ಬಳು ತನ್ನ ಗ್ಯಾಂಗ್ ನವರನ್ನು ಕರೆಸಿ ಬೆದರಿಸಿ 50 ಸಾವಿರ ಸುಲಿಗೆ ಮಾಡಿದ್ದರು.
  • ಮನೆ ಡೋರ್ ಬೆಲ್ ಮಾಡುತ್ತಿದ್ದಂತೆ ಅರೆಬರೆ ಬಟ್ಟೆಯಲ್ಲಿ ಯುವತಿ ಸ್ವಾಗತಿಸುತ್ತಿದ್ದಳು.
  • ಕೆಲ ಕ್ಷಣಗಳ ಬಳಿಕ ಮನೆಗೆ ನುಗ್ಗಿ ಆತನ ಮೊಬೈಲ್ ಕಸಿದು ನಾಲ್ವರ ಗ್ಯಾಂಗ್ ಪ್ರಶ್ನಿಸುತ್ತಿತ್ತು.
ಹನಿ ಅಂತಾ ಹೋದ ವ್ಯಕ್ತಿ: ಸರಸಕ್ಕೆ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್ ಅಂದರ್  title=

ಬೆಂಗಳೂರು: ಕಳೆದ ಎರಡು ತಿಂಗಳ ಹಿಂದೆ ಯುವಕನನ್ನ ಜೆ.ಪಿ.ನಗರದ ವಿನಾಯಕ್ ನಗರಕ್ಕೆ ಕರೆಯಿಸಿಕೊಂಡಿದ್ದ ಸುಂದರಿಯೊಬ್ಬಳು ತನ್ನ ಗ್ಯಾಂಗ್ ನವರನ್ನು ಕರೆಸಿ ಬೆದರಿಸಿ 50 ಸಾವಿರ ಸುಲಿಗೆ ಮಾಡಿದ್ದರು. ಈ ಹಿನ್ನೆಲೆ ನೊಂದ ಸಂತ್ರಸ್ತ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳಾದ ಶರಣಪ್ರಕಾಶ್ ಬಳಿಗೇರ, ಅಬ್ದುಲ್‌ ಖಾದರ್, ಯಾಸಿನ್ ಎಂಬುವರನ್ನ ಬಂಧಿಸಲಾಗಿದೆ. ಯುವತಿ ನೇಹಾ ಅಲಿಯಾಸ್ ಮೇಹರ್, ನದೀಮ್  ತಲೆಮರೆಸಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮುಖಾಂತರ ಸುಂದರಿ ಯುವಕರನ್ನ ಪರಿಚಯಿಸಿಕೊಂಡು ಅವರ ಬಲಹೀನತೆ ಅರಿತು ಮಂಚದ ಆಸೆ ತೋರಿಸಿ ಜೆ.ಪಿ.ನಗರದ ಐದನೇ ಹಂತದಲ್ಲಿರುವ ವಿನಾಯಕ್ ನಗರದ ಮನೆಯೊಂದಕ್ಕೆ‌ ಕರೆಯಿಸಿಕೊಳ್ಳುತ್ತಿದ್ದಳು. ಈಕೆ ಹಿಂದೆ ಆರೋಪಿಗಳ ಗ್ಯಾಂಗ್ ಕೆಲಸ ಮಾಡುತಿತ್ತು. ಮನೆ ಡೋರ್ ಬೆಲ್ ಮಾಡುತ್ತಿದ್ದಂತೆ ಅರೆಬರೆ ಬಟ್ಟೆಯಲ್ಲಿ ಯುವತಿ ಸ್ವಾಗತಿಸುತ್ತಿದ್ದಳು. ಕೆಲ ಕ್ಷಣಗಳ ಬಳಿಕ ಮನೆಗೆ ನುಗ್ಗಿ ಆತನ ಮೊಬೈಲ್ ಕಸಿದು ನಾಲ್ವರ ಗ್ಯಾಂಗ್ ಪ್ರಶ್ನಿಸುತ್ತಿತ್ತು. 

ಇದನ್ನೂ ಓದಿ-Nandini milk price: ನಾಳೆಯಿಂದ ನಂದಿನ ಹಾಲಿನ ದರ ಹೆಚ್ಚಳ, ಯಾವುದರ ಬೆಲೆ ಎಷ್ಟು ತಿಳಿಯಿರಿ

ಅನ್ಯ ಧರ್ಮದ ಯುವತಿಯಾಗಿದ್ದು, ಆಕೆಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತಪ್ಪು ಎಂದು ಹೇಳುತ್ತಲೇ ಕ್ಷಣಾರ್ಧದಲ್ಲಿ ಮೊಬೈಲ್ ನಲ್ಲಿ ಪೋಟೊ-ವಿಡಿಯೊ ಸೆರೆ ಹಿಡಿಯುತ್ತಿತ್ತು‌. ದೂರುದಾರರನ ಕಸಿದಿದ್ದ ಮೊಬೈಲ್ ನ ಕಾಂಟಾಕ್ಟ್ ಲಿಸ್ಟ್ ಪಟ್ಟಿ ಮಾಡಿಕೊಂಡು ಕೇಳಿದಷ್ಟು ಹಣ ಕೊಡದಿದ್ದರೆ ಕುಟುಂಬಸ್ಥರಿಗೆ ವಿಡಿಯೋ ಕಳುಹಿಸಿ ಮಾನ- ಮಾರ್ಯಾದೆ ಹರಾಜು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು.

ಮುಸಲ್ಮಾನ ಸಮುದಾಯ ಯುವತಿಯಾಗಿದ್ದು ಆಕೆಯೊಂದಿಗೆ ಮದುವೆಯಾಗಬೇಕಾದರೆ ಸಂಪ್ರದಾಯದಂತೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕುತ್ತಿದ್ದರು. ಮಾರ್ಯಾದೆಗೆ ಅಂಜಿ ನೊಂದ ಯುವಕ ಹಣ ಕಳುಹಿಸಿದ್ದ.‌ ಹಣ‌ ಜಮಾ ಆಗುತ್ತಿದ್ದಂತೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ಹೀಗೆಯೇ 13 ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಗ್ಯಾಂಗ್ ಸುಮಾರು 30 ಲಕ್ಷ ಹಣದವರೆಗೆ‌ ಸುಲಿಗೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸದ್ಯ ನಾಪತ್ತೆಯಾಗಿರುವ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದು, ಆದಷ್ಟು ಬೇಗನೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-ತಿರುಪತಿ ಲಾಡುಗೆ ನಂದಿನಿ ತುಪ್ಪ ಪೂರೈಕೆ ಬಂದ್: ಕಾಂಗ್ರೆಸ್‍ನದ್ದು ಕೆಟ್ಟ ಅಜೆಂಡಾವೆಂದ ಸಿಟಿ ರವಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News