ಬೆಂಗಳೂರು: ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಈ ಸಂದರ್ಭ ಕ್ಲಬ್ ಹೌಸ್ ನಲ್ಲಿ ಗ್ರೂಪ್ ಗಳನ್ನ ಮಾಡಿಕೊಂಡು ಪಾಕ್ ಧ್ವಜದ ಡಿಪಿ ಹಾಕಿ ಶತ್ರು ರಾಷ್ಟ್ರದ ಪರವಾಗಿ ಮಾತನಾಡಿದ್ದ ಇಬ್ಬರನ್ನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಭಾರತಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಲ್ಲದೇ ಪಾಕಿಸ್ತಾನದ ರಾಷ್ಟ್ರಗೀತೆ ಹಾಕಿದ್ದರು. ಅಷ್ಟಲ್ಲದೆ ಆ್ಯಪ್ ನಲ್ಲಿ ಇದ್ದ ಹತ್ತೂ ಜನರು ಕೂಡ ತಮ್ಮ ಡಿಪಿಗಳಲ್ಲಿ ಪಾಕಿಸ್ತಾನದ ಫ್ಲಾಗ್ ಹಾಕಿದ್ರು . ಇದನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ರು. ಸದ್ಯ ಸೌರಭ್ ಹಾಗೂ ರಾಹುಲ್ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಾಷೆ ಮಾಡಲು ಹೋಗಿ ಈ ರೀತಿಯ ಘಟನೆ ನಡೆದಿದೆ ಎಂದು ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ- Bomb Threat Call : ಮುಂಬೈನ ಸುಪ್ರಸಿದ್ಧ ಹೋಟೆಲ್‌ಗೆ ಬಂತು ಬಾಂಬ್ ಬೆದರಿಕೆ ಕರೆ
ಬಳ್ಳಾರಿ ಮೂಲದ ಸೌರಭ್ ಹಾಗೂ ರಾಹುಲ್ ಮಾನ್ಯತಾ ಟೆಕ್ ಪಾರ್ಕ್ ನ ಕರ್ಲೆ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡಿಕೊಂಡಿದ್ರು. ಇನ್ನೂ ಕ್ಲಬ್ ಹೌಸ್ ಗ್ರೂಪ್ ನಲ್ಲಿ ಮಾತನಾಡುವ ವೇಳೆ ನಿಮಗೆ ತಾಖತ್ ಇದ್ರೆ ಪಾಕ್ ಪರವಾಗಿ ಘೋಷಣೆ ಮಾಡಿ ಎಂದಿದ್ದರು ಉಳಿದ ಆರೋಪಿಗಳು. ಈ ವೇಳೆ ನಮ್ಮ ತಾಖತ್ ಬಗ್ಗೆ ಮಾತನಾಡುತ್ತೀರಾ ಎಂದು ಆ ಗ್ರೂಪ್ ನಲ್ಲಿದ್ದವರು ಹೇಳಿದಂತೆ ನಡೆದುಕೊಂಡಿದ್ದರು ಸೌರಭ್ ಆ್ಯಂಡ್ ಟೀಂ.
ಇದನ್ನೂ ಓದಿ- Crime News : ಗಂಡನ ಮನೆಗೆ ಕನ್ನ ಕಾಕಿದ ಹೆಂಡತಿ.. ನಗದು, ಚಿನ್ನ ದೋಚಿ ಎಸ್ಕೇಪ್!
ಸದ್ಯ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಸೌರಭ್ ಹಾಗೂ ರಾಹುಲ್ ನನ್ನ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಉಳಿದ ಆರೋಪಿಗಳು ಸಿಕ್ಕಿದ ಬಳಿಕ ಮತ್ತೆ ಇಬ್ಬರನ್ನ ಕರೆಸಿ ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.