ವ್ಹೀಲಿಂಗ್ ಪುಂಡರ ಬೈಕ್ ಪೀಸ್- ಪೀಸ್ ಮಾಡಿದ್ರು ಜನ..! ಹೊಡಿರಿ ಚಪ್ಪಾಳೆ.. ಇಂತ ಜನ ಎಲ್ಲಿ ಸಿಗ್ತಾರೆ

ವ್ಹೀಲಿಂಗ್ ಮಾಡುವ ಪುಂಡರ ವರ್ತನೆಯಿಂದ ರೊಚ್ಚಿಗೆದ್ದ ಜನ ಪುಂಡರ ಎರಡು ಸ್ಕೂಟರ್​ಗಳನ್ನು ಫ್ಲೈಓವರ್​ನಿಂದ ಕೆಳಗೆ ಎಸೆದು ಪೀಸ್ ಪೀಸ್ ಮಾಡಿ ಬುದ್ದಿ ಕಲಿಸಿದ್ದಾರೆ.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - VISHWANATH HARIHARA | Edited by - Krishna N K | Last Updated : Aug 17, 2024, 10:40 PM IST
    • ವ್ಹೀಲಿಂಗ್ ಮಾಡುವ ಪುಂಡರ ವರ್ತನೆಯಿಂದ ರೊಚ್ಚಿಗೆದ್ದ ಜನ
    • ಎರಡು ಸ್ಕೂಟರ್​ಗಳನ್ನು ಫ್ಲೈಓವರ್​ನಿಂದ ಕೆಳಗೆ ಎಸೆದು ಪೀಸ್ ಪೀಸ್
    • ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
ವ್ಹೀಲಿಂಗ್ ಪುಂಡರ ಬೈಕ್ ಪೀಸ್- ಪೀಸ್ ಮಾಡಿದ್ರು ಜನ..! ಹೊಡಿರಿ ಚಪ್ಪಾಳೆ.. ಇಂತ ಜನ ಎಲ್ಲಿ ಸಿಗ್ತಾರೆ title=

ಬೆಂಗಳೂರು: ಪೊಲೀಸರು ಎಷ್ಟೇ ವಾರ್ನಿಂಗ್ ಮಾಡಿದ್ರು ಶೋಕಿಗೆ ಅಂತಾ ವ್ಹೀಲಿಂಗ್​ ಮಾಡಿ ಸಾರ್ವಜನಿಕ ಕಿರಿಕಿರಿ ಉಂಟು ಮಾಡೋದಷ್ಟೇ ಅಲ್ಲದೇ ಹಲವರ ಪ್ರಾಣಕ್ಕೆ ಸಂಚಕರ ತರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಇಂತವರನ್ನು ಹಿಡಿದು ಜನರೇ ತಕ್ಕ ಶಾಸ್ತಿ ಮಾಡಿರುವ ಘಟನೆ ನಡೆದಿದೆ. 

ಹೌದು.. ವ್ಹೀಲಿಂಗ್ ಮಾಡುವ ಪುಂಡರ ವರ್ತನೆಯಿಂದ ರೊಚ್ಚಿಗೆದ್ದ ಜನ ಪುಂಡರ ಎರಡು ಸ್ಕೂಟರ್​ಗಳನ್ನು ಫ್ಲೈಓವರ್​ನಿಂದ ಕೆಳಗೆ ಎಸೆದು ಪೀಸ್ ಪೀಸ್ ಮಾಡಿ ಬುದ್ದಿ ಕಲಿಸಿದ್ದಾರೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಅಡಕಮಾರನಹಳ್ಳಿಯ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. 

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದ ಕೆ.ಎಸ್.ಈಶ್ವರಪ್ಪ

ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಜನ ಆತ ಮತ್ತು ಆತನ ಸ್ನೇಹಿತನನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ಮುಂದೆ ವ್ಹೀಲಿಂಗ್ ಮಾಡಬಾರದು ತಕ್ಕ ಶಾಸ್ತಿ ಮಾಡಬೇಕು ಎಂಬ ಕಾರಣಕ್ಕೆ ಸ್ಕೂಟರ್​ಅನ್ನು ಫ್ಲೈಓವರ್ ನಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ವ್ಹೀಲಿಂಗ್ ಮಾಡುವ ಕಿಡಿಗೇಡಿಗಳಿಗೆ ಇದೇ ರೀತಿ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ವ್ಹೀಲಿಂಗ್‌ ಮಾಡಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಪುಂಡರಿಗೆ ಒಳ್ಳೆ ಪಾಠ ಕಲಿಸಿದ್ದಾರೆ ಜನ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News