Shocking News: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗು ಸ್ಮಶಾನದಲ್ಲಿ ಜೀವಂತ!

ತುರ್ವಿಹಾಳ ಪಟ್ಟಣದ ಈರಪ್ಪ ಮತ್ತು ಅಮರಮ್ಮ ದಂಪತಿಯ ಮಗು ವೈದ್ಯರ ನಿರ್ಲಕ್ಷ್ಯಕ್ಕೆ ತುತ್ತಾಗಿ ಮಣ್ಣುಪಾಲಾಗುತ್ತಿತ್ತು. ಇದೀಗ ಈ ಕಂದಮ್ಮನಿಗೆ ಸಿಂಧನೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Written by - Bhavishya Shetty | Last Updated : May 16, 2022, 10:23 AM IST
  • ಅಂತ್ಯಸಂಸ್ಕಾರದ ವೇಳೆ ಮಗು ಜೀವಂತ
  • ರಾಯಚೂರಿನ ಸಿಂಧನೂರಿನಲ್ಲಿ ಘಟನೆ
  • ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
 Shocking News: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗು ಸ್ಮಶಾನದಲ್ಲಿ ಜೀವಂತ! title=
New born baby

ರಾಯಚೂರು: ಕೆಲವೊಂದು ಬಾರಿ ಮನುಷ್ಯ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದ ಬಳಿಕವೂ ಬದುಕಿಬಂದಿರುವ ಘಟನೆಗಳು ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳದಲ್ಲಿ ನಡೆದಿದೆ. ಮಗುವೊಂದು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದರು. ಆದರೆ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನದಲ್ಲಿ ಸಿದ್ಧತೆ ನಡೆಸುವಾಗ ಜೀವಂತವಾಗಿರುವುದು ಕಂಡುಬಂದಿದೆ. 

ಇದನ್ನು ಓದಿ: Chandra Grahan 2022: 80 ವರ್ಷಗಳ ಬಳಿಕ ಚಂದ್ರಗ್ರಹಣದ ದಿನ ಅಪರೂಪದ ಸಂಯೋಗ

ತುರ್ವಿಹಾಳ ಪಟ್ಟಣದ ಈರಪ್ಪ ಮತ್ತು ಅಮರಮ್ಮ ದಂಪತಿಯ ಮಗು ವೈದ್ಯರ ನಿರ್ಲಕ್ಷ್ಯಕ್ಕೆ ತುತ್ತಾಗಿ ಮಣ್ಣುಪಾಲಾಗುತ್ತಿತ್ತು. ಇದೀಗ ಈ ಕಂದಮ್ಮನಿಗೆ ಸಿಂಧನೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಏನಿದು ಘಟನೆ: 
ತುರ್ವಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಅಮರಮ್ಮ ಅವರಿಗೆ ಹೆರಿಗೆಯಾಗಿತ್ತು. ಈ ಸಂದರ್ಭದಲ್ಲಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೌಲಭ್ಯಗಳು ಕಡಿಮೆ ಇರುತ್ತವೆ ಎಂದು ಭಾವಿಸಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಮಂಗಳವಾರದಿಂದ ಶನಿವಾರದವರೆಗೆ ಚಿಕಿತ್ಸೆ ನೀಡಿದ ವೈದ್ಯರು ಬಳಿಕ ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಇದೇ ದುಃಖದಲ್ಲಿ ಅಂತ್ಯ ಸಂಸ್ಕಾರ ನಡೆಸಲೆಂದು ಮುಂದಾದಾಗ ಸ್ಮಶಾನದಲ್ಲಿ ಮಗು ಜೀವಂತವಾಗಿರುವುದು ಸ್ಪಷ್ಟವಾಗಿದೆ. ತಕ್ಷಣವೇ ಕಂದನನ್ನು ಬೇರೊಂದು ಆಸ್ಪತ್ರೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನು ಓದಿ: Chandra Grahan 2022 : ಬ್ಲಡ್ ಮೂನ್‌ನ LIVE ರೋಮಾಂಚಕಾರಿ ನೋಟವನ್ನು ಇಲ್ಲಿ ವೀಕ್ಷಿಸಿ ..!

ಇನ್ನು ಘಟನೆಯಿಂದ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ. ಈ ಕುರಿತು  ತುರ್ವಿಹಾಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಂಜುನಾಥ ಅಣಗೌಡರ್ ಮಾತನಾಡಿದ್ದು, "ನಮ್ಮ ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಬಳಿಕ ನಾವು ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದೆವು. ಕಾರಣಾಂತರದಿಂದ ಅವರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮತ್ತೆ ಶನಿವಾರ ತುರ್ವಿಹಾಳ ಆಸ್ಪತ್ರೆಗೆ ಕರೆತಂದಾಗ ಮಗು ಉಸಿರಾಡುತ್ತಿತ್ತು. ಸ್ವಲ್ಪ ಹೊತ್ತು ಆಮ್ಲಜನಕ ನೀಡಿ ಪುನಃ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದೆವು. ಆದರೆ ಮಗುವಿನ ಪೋಷಕರು ಇದೀಗ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆಂದು ತಿಳಿದು ಬಂದಿದೆ" ಎಂದು ಹೇಳಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News