ತರಕಾರಿ ಮಾರಿದಂತೆ ಹಸುಗೂಸುಗಳ ಮಾರಾಟ: ಸಿಲಿಕಾನ್ ಸಿಟಿಯ ರಸ್ತೆಯಲ್ಲೇ ನಡೆಯುತ್ತಿದೆ ದಂಧೆ!

New Born Baby: ರಾಜರಾಜೇಶ್ವರಿ ದೇವಸ್ಥಾನದ ಬಳಿ 20 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದಾಗ ಸಿಸಿಬಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತ್ತು. ಈ ಪಾಪದ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ ಮತ್ತು ಶರಣ್ಯ ಬಲೆಗೆ ಬಿದ್ದಿದ್ದಾರೆ.

Written by - VISHWANATH HARIHARA | Edited by - Puttaraj K Alur | Last Updated : Nov 27, 2023, 04:25 PM IST
  • ಬೆಂಗಳೂರಿನಲ್ಲಿ ಹಸುಗೂಸುಗಳನ್ನು ಮಾರಾಟ ಮಾಡುತ್ತಿರುವ ದಂಧೆ ಬೆಳಕಿಗೆ ಬಂದಿದೆ
  • ಸಿಲಿಕಾನ್ ಸಿಟಿಯ ರಸ್ತೆಯಲ್ಲಿಯೇ ಲಕ್ಷ ಲಕ್ಷಕ್ಕೆ ಸೇಲ್ ಆಗ್ತಿವೆ ಹಸುಗೂಸುಗಳು!
  • 20 ದಿನದ ಗಂಡು ಮಗು ಮಾರಾಟಕ್ಕೆ ಯತ್ನಿಸಿದ ನಾಲ್ವರನ್ನು ಬಂಧಿಸಿದ ಸಿಸಿಬಿ ಪೊಲೀಸರು
ತರಕಾರಿ ಮಾರಿದಂತೆ ಹಸುಗೂಸುಗಳ ಮಾರಾಟ: ಸಿಲಿಕಾನ್ ಸಿಟಿಯ ರಸ್ತೆಯಲ್ಲೇ ನಡೆಯುತ್ತಿದೆ ದಂಧೆ! title=
ಲಕ್ಷ ಲಕ್ಷಕ್ಕೆ ಸೇಲ್ ಆಗ್ತಿವೆ ಹಸುಗೂಸುಗಳು!

ಬೆಂಗಳೂರು: ಮೊನ್ನೆ ಮೊನ್ನೆ ತಾನೇ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದು ಸಖತ್ ಸುದ್ದಿಯಾಗಿತ್ತು. ಈ ಅಮಾನವೀಯ ಪ್ರಕರಣ ಮಾಸುವ ಮುನ್ನವೇ ಹಣ್ಣು-ತರಕಾರಿಯ ರೀತಿ ಮಕ್ಕಳನ್ನು ಮಾರಾಟ ಮಾಡುವ ಜಾಲ ಬೆಂಗಳೂರಲ್ಲಿ ತಲೆ ಎತ್ತಿದೆ ಎಂಬುದು ಬಯಲಾಗಿದೆ. ಹಸುಗೂಸುಗಳ‌ನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಸಿಸಿಬಿ ಅಧಿಕಾರಿಗಲಕು ಭೇದಿಸಿದ್ದಾರೆ.

15-20 ದಿನದ‌ ಕಂದಮ್ಮಗಳನ್ನು ತಂದು ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಸಿಸಿಬಿ ಬಲೆಗೆ ಬಿದ್ದಿದೆ. ಕಾನೂನಿನ ಪ್ರಕಾರ ಮಕ್ಕಳಾಗದವರು ಬಾಡಿಗೆ ತಾಯಿ ಅಥವಾ ಕೃತಕ ಗರ್ಭಧಾರಣೆ ಮೂಲಕ ಮಕ್ಕಳನ್ನು ಬಯಸುವವರು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮಕ್ಕಳನ್ನು ಪಡೆಯಬಹುದಾಗಿದೆ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಯಾರದ್ದೋ ಮಗವನ್ನು ಮತ್ತೊಬ್ಬರ ಮಡಿಲಿಗೆ ಸೇರಿಸಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದರು ಎಂಬ ಘೋರ ಸತ್ಯ ಬಯಲಾಗಿದೆ.

ಇದನ್ನೂ ಓದಿ: ಬೆಂಗಳೂರು ಸಿಎಂ ಗೃಹ ಕಚೇರಿಯಲ್ಲಿ ಜನಸ್ಪಂದನ

ಈ ಪಾಪದ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ ಮತ್ತು ಶರಣ್ಯ ಬಲೆಗೆ ಬಿದ್ದಿದ್ದಾರೆ. ರಾಜರಾಜೇಶ್ವರಿ ದೇವಸ್ಥಾನದ ಬಳಿ 20 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸಿದಾಗ ಸಿಸಿಬಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತ್ತು. ಇನ್ನೂ ಮಹಾಲಕ್ಚ್ಮೀ ಎಂಬಾಕೆ ಮಗು ಮಾರಾಟ ಮಾಡಲು ತಮ್ಮನ್ನು ಕರೆಸಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಇನ್ನೂ ಆರೋಪಿಗಳು ಈ ಹಿಂದೆ ಸಹ ಹಲವು ಮಕ್ಕಳನ್ನು ಹಣಕ್ಕೆ ಮಾರಾಟ  ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ. ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಏರ್ಪೋಟ್‌ ನಿರ್ಮಾಣಕ್ಕೆ ದಂಡು ಗ್ರಾಮ ಎತ್ತಂಗಡಿ ಪ್ಲಾನ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News