Belagavi: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ..!

ಮೊದಲು ಇಬ್ಬರು ಮಕ್ಕಳನ್ನು ನೀರಿಗೆ ಎಸೆದಿದ್ದ ತಾಯಿ ತನುಜಾ, ಬಳಿಕ ತಾನೂ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

Written by - Zee Kannada News Desk | Last Updated : Nov 19, 2022, 10:02 AM IST
  • ಇಬ್ಬರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ
  • ಬೆಳಗಾವಿಯ ನವಿಲುತೀರ್ಥ ಡ್ಯಾಂ ಹಿನ್ನೀರಿಗೆ ಇಬ್ಬರು ಮಕ್ಕಳನ್ನು ಎಸೆದು ತಾಯಿ ಆತ್ಮಹತ್ಯೆ
  • ಮೊದಲು ಇಬ್ಬರು ಮಕ್ಕಳನ್ನು ನೀರಿಗೆ ಎಸೆದು ಬಳಿಕ ಜಲಾಶಯದ ಹಿನ್ನೀರಿಗೆ ಹಾರಿ ತಾಯಿಯೂ ಆತ್ಮಹತ್ಯೆ
Belagavi: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ..! title=
ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!

ಬೆಳಗಾವಿ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ನವಿಲುತೀರ್ಥ ಡ್ಯಾಂ ಹಿನ್ನೀರಿಗೆ ಇಬ್ಬರು ಮಕ್ಕಳನ್ನು ಎಸೆದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಸವದತ್ತಿ ಠಾಣಾ ವ್ಯಾಪ್ತಿಯ ವಟ್ನಾಳ ಗ್ರಾಮದ ಬಳಿಯ ನವಿಲುತೀರ್ಥ ಜಲಾಶಯ ಹಿನ್ನೀರಿನಲ್ಲಿ ಮೂವರ ಶವಗಳು ಪತ್ತೆಯಾಗಿವೆ. ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ತನುಜಾ ಗೋಡಿ(32), ಅವರ ಪುತ್ರ ಸುದೀಪ್(4) ಮತ್ತು ಪುತ್ರಿ ರಾಧಿಕಾ(3) ಮೃತದೇಹಗಳು ಪತ್ತೆಯಾಗಿವೆ.

ಇದನ್ನೂ ಓದಿ: Bangalore Police : ಚಿಲುಮೆ ಕಚೇರಿ ಮೇಲೆ‌ ಪೊಲೀಸರ ದಾಳಿ: ನಾಲ್ವರು ವಶಕ್ಕೆ

ಮೊದಲು ಇಬ್ಬರು ಮಕ್ಕಳನ್ನು ನೀರಿಗೆ ಎಸೆದಿದ್ದ ತಾಯಿ ತನುಜಾ ಬಳಿಕ ತಾನೂ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತಗೆದಿದ್ದಾರೆ. ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಕಾಲೇಜು ವಿದ್ಯಾರ್ಥಿಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News