Massive Fraud: ವಿದೇಶಿ ಮಹಿಳೆಯ ಖಾತೆಯಿಂದ 13 ಕೋಟಿ ರೂ ಮಾಯಾ..! ಬ್ಯಾಂಕ್ ಮ್ಯಾನೇಜರ್ ವಂಚನೆ

Bank Manager Fraud: ಜನರ ಹಣ ಸುರಕ್ಷಿತವಾಗಿಡಬೇಕಿದ್ದ ಬ್ಯಾಂಕ್ ನೌಕರನೇ ಕಳ್ಳನಾಗಿದ್ದಾನೆ. ವಿದೇಶದಲ್ಲಿರುವ ಮಹಿಳೆಯ ಖಾತೆಯಿಂದ ಹಣ ಕದ್ದ ಬ್ಯಾಂಕ್ ಮ್ಯಾನೇಜರ್ ಜೈಲು ಪಾಲಾಗಿದ್ದಾರೆ.

Written by - Zee Kannada News Desk | Last Updated : Feb 27, 2024, 06:11 PM IST
  • ಬ್ಯಾಂಕ್‌ನಲ್ಲಿದ್ದ 16 ಕೋಟಿ ರೂ. ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆ ನೀಡಿದ್ದ ದೂರಿನಿಂದಾಗಿ ಬ್ಯಾಂಕ್ ಮ್ಯಾನೇಜರ್ ವಂಚನೆ ಬಯಲಾಗಿದೆ.
  • ಬ್ಯಾಂಕ್ ಅಧಿಕಾರಿಗಳ ಸಲಹೆ ಮೇರೆಗೆ ಶ್ವೇತಾ ಶರ್ಮಾ ಅವರು ಅನಿವಾಸಿ ಭಾರತೀಯರಿಗಾಗಿ ಎನ್‌ಆರ್‌ಇ ಖಾತೆಯನ್ನು ತೆರೆಯಲಾಯಿತು.
  • ಬ್ಯಾಂಕ್ ಮ್ಯಾನೇಜರ್ ನಕಲಿ ಇಮೇಲ್ ಐಡಿ ಸೃಷ್ಟಿಸಿ ಬ್ಯಾಂಕ್ ದಾಖಲೆಗಳಲ್ಲಿ ಫೋನ್ ನಂಬರ್ ಬದಲಿಸಿ ವಂಚನೆ ಮಾಡಿರುವುದು ಪತ್ತೆಯಾಗಿದೆ.
Massive Fraud: ವಿದೇಶಿ ಮಹಿಳೆಯ ಖಾತೆಯಿಂದ 13 ಕೋಟಿ ರೂ ಮಾಯಾ..! ಬ್ಯಾಂಕ್ ಮ್ಯಾನೇಜರ್ ವಂಚನೆ title=

NRI Woman: ವಿದೇಶದಲ್ಲಿ ದುಡಿದ ಹಣವನ್ನೆಲ್ಲ ಬ್ಯಾಂಕ್ ಗೆ ಹಾಕಿದರೆ ಬ್ಯಾಂಕ್ ಉದ್ಯೋಗಿ ವಂಚನೆ ಮಾಡುತ್ತಾನೆ. ಬ್ಯಾಂಕ್‌ನಲ್ಲಿದ್ದ 16 ಕೋಟಿ ರೂ. ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆ ನೀಡಿದ್ದ ದೂರಿನಿಂದಾಗಿ ಬ್ಯಾಂಕ್ ಮ್ಯಾನೇಜರ್ ವಂಚನೆ ಬಯಲಾಗಿದೆ.
 
ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ವೇತಾ ಶರ್ಮಾ ಎಂಬ ಮಹಿಳೆ 2016 ರಲ್ಲಿ ಭಾರತಕ್ಕೆ ಮರಳಿದರು. ಅಮೇರಿಕಾದಲ್ಲಿ ಕಡಿಮೆ ಬಡ್ಡಿದರದೊಂದಿಗೆ, ಅವರು ತಮ್ಮ ಗಳಿಕೆಯನ್ನು ಭಾರತದಲ್ಲಿ ಠೇವಣಿ ಮಾಡಲು ನಿರ್ಧರಿಸಿ ಗುರುಗ್ರಾಮ್‌ನಲ್ಲಿರುವ ಐಸಿಐಸಿಐ ಬ್ಯಾಂಕ್‌ಗೆ ತೆರಳಿ ಠೇವಣಿ ಇಟ್ಟಿದ್ದರು.

ಇದನ್ನೂ ಓದಿ: ಕ್ರಿಕೆಟ್ ಟೂರ್ನಿಗಳಲ್ಲಿ ಅವಕಾಶ ಕೊಡಿಸುವುದಾಗಿ ಮೋಸ: ಅಂಡರ್ 19 ಮಾಜಿ ಆಟಗಾರನ ವಿರುದ್ಧ ಎಫ್ಐಆರ್

ಅಲ್ಲಿನ ಬ್ಯಾಂಕ್ ಅಧಿಕಾರಿಗಳ ಸಲಹೆ ಮೇರೆಗೆ ಶ್ವೇತಾ ಶರ್ಮಾ ಅವರು ಅನಿವಾಸಿ ಭಾರತೀಯರಿಗಾಗಿ ಎನ್‌ಆರ್‌ಇ ಖಾತೆಯನ್ನು ತೆರೆಯಲಾಯಿತು. ಅವರು ಸೆಪ್ಟೆಂಬರ್ 2019 ರಲ್ಲಿ ಖಾತೆಯನ್ನು ತೆರೆದರು ಅಲ್ಲದೇ, ಡಿಸೆಂಬರ್ 2023 ರ ನಡುವೆ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 13.5 ಕೋಟಿ ರೂ.ವನ್ನು ಇಟ್ಟಿದ್ದರು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಇಷ್ಟು ಮೊತ್ತವನ್ನು ಠೇವಣಿ ಇಡುವುದರಿಂದ ಅದು ದೊಡ್ಡದಾಗುತ್ತದೆ ಎಂದು ಭಾವಿಸಿದ್ದರು. ಈ ಬ್ಯಾಂಕ್‌ನಲ್ಲಿ 5.5 ರಿಂದ 6 ರಷ್ಟು ಬಡ್ಡಿ ಇದ್ದಿದರಿಂದ ಅಸಲು ಮತ್ತು ಬಡ್ಡಿ ಸೇರಿ 16 ಕೋಟಿ ರೂ ಆಗಿತ್ತು. ಆದರೆ ಶರ್ಮಾ ಅವರನ್ನು ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಭೇಟಿಯಾಗಿ, ಹೆಚ್ಚಿನ ಬಡ್ಡಿ ನೀಡುವುದಾಗಿ ಹೇಳಿ ಆಕೆ ತನ್ನ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲು ಪ್ರಯತ್ನಿಸಿದಾಗ, ಖಾತೆಯಲ್ಲಿ ನಗದು ಬಾಕಿ ಇಲ್ಲದಿರುವುದು ಕಂಡುಬಂದಿದೆ.

ಬ್ಯಾಂಕ್ ಮ್ಯಾನೇಜರ್ ನಕಲಿ ಇಮೇಲ್ ಐಡಿ ಸೃಷ್ಟಿಸಿ ಬ್ಯಾಂಕ್ ದಾಖಲೆಗಳಲ್ಲಿ ಫೋನ್ ನಂಬರ್ ಬದಲಿಸಿ ವಂಚನೆ ಮಾಡಿರುವುದು ಪತ್ತೆಯಾಗಿದೆ. ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ನಕಲಿ ಸಹಿ ಮಾಡಿ ಡೆಬಿಟ್ ಕಾರ್ಡ್ ಮತ್ತು ಚೆಕ್ ತೆಗೆದುಕೊಂಡಿದ್ದಾರೆ ಎಂದು ಶ್ವೇತಾ ಶರ್ಮಾ ಆರೋಪಿಸಿದ್ದಾರೆ. 

ಇದನ್ನೂ ಓದಿ: Chitradurga: ಪತಿ ಮತ್ತೊಂದು ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಆತ್ಮಹತ್ಯೆ!

ಈ ಕುರಿತು ಆರು ವಾರಗಳಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ವ್ಯವಸ್ಥಾಪಕರ ವಂಚನೆಗೆ ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಆಕೆಯ ಖಾತೆಗೆ ತಾತ್ಕಾಲಿಕವಾಗಿ ರೂ.9.27 ಕೋಟಿ ಜಮಾ ಆಗಿರುವುದು ಬಹಿರಂಗವಾಗಿದೆ. ಎರಡು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದರೂ ಇದುವರೆಗೂ ಪರಿಹಾರವಾಗಿಲ್ಲ ಎಂದು ಸಂತ್ರಸ್ತ ಶ್ವೇತಾ ಶರ್ಮಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಸ್ಟೋರಿ ನೋಡಿದರೆ, "ಬೇಲಿಯೇ ಎದ್ದು ಹೋಲ ಮೈದಂತೆ" ಎಂಬ ಗಾದ ನೆನಪಿಗೆ ಬರುತ್ತದೆ. ಕಾಯಬೇಕಿತ್ತ ಕಾಯಕರೇ ಈ ರೀತಿಯ ವಂಚನೆ ಮಾಡಿದರೆ. ನಮ್ಮಂತವರ ಬೇವರು ಹನಿಯ ಹಣದ ಕಥೆಯೇನು..? ರಕ್ಷಕರೇ ರಾಕ್ಷಸಗಳಾದರೆ ಎಲ್ಲಿಯೂ ಸೇಫ್‌ ಇರುವುದಿಲ್ಲ. ಇನ್ನಾದರು ಬ್ಯಾಂಕಿನಲ್ಲಿ ಹಣವನ್ನು ಇಡುವಾಗ ಒಂದು ಹೆಜ್ಜೆ ಮುಂದೆ ಯೋಚಿಸಿ ನಿರ್ದಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News