ʼಲಕ್ಷ್ಮೀ.. ನಾನೇ ನಿನ್ನ ಕೊಲೆ ಮಾಡ್ಬಿಟ್ಟೆ..ʼ ಮಹಿಳೆ ಕೊಂದು ಶವದ ಜೊತೆ ʼಫೇಸ್ ಬುಕ್ ಲೈವ್ʼ...! 

ಮಹಿಳೆಯೊಬ್ಬಳನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ವ್ಯಕ್ತಿಯೋರ್ವ ತಾನು ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ತಾನೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಫೇಸ್‌ಬುಕ್‌ ಲೈವ್‌ ಬಂದು ಗೋಳಾಡಿದ್ದಾನೆ. ಈ ಭಯಾನಕ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Feb 22, 2023, 03:46 PM IST
  • ಮಹಿಳೆಯೊಬ್ಬಳನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ವ್ಯಕ್ತಿ.
  • ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆಯಲ್ಲಿ ನಡೆದ ಘಟನೆ.
  • ಮಹಿಳೆಯ ಶವದ ಜೊತೆ ಫೇಸ್‌ಬುಕ್‌ ಲೈವ್‌ ಮಾಡಿ ಗೋಳಾಡಿದ ವ್ಯಕ್ತಿ.
 ʼಲಕ್ಷ್ಮೀ.. ನಾನೇ ನಿನ್ನ ಕೊಲೆ ಮಾಡ್ಬಿಟ್ಟೆ..ʼ ಮಹಿಳೆ ಕೊಂದು ಶವದ ಜೊತೆ ʼಫೇಸ್ ಬುಕ್ ಲೈವ್ʼ...!  title=

ಚಾಮರಾಜನಗರ : ಮಹಿಳೆಯೊಬ್ಬಳನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ವ್ಯಕ್ತಿಯೋರ್ವ ತಾನು ಕೂಡ ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ನಾಗಮಲೆ ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ತಾನೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಫೇಸ್‌ಬುಕ್‌ ಲೈವ್‌ ಬಂದು ಗೋಳಾಡಿದ್ದಾನೆ. ಈ ಭಯಾನಕ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹನೂರು ತಾಲೂಕಿನ ನಾಗಮಲೆ ಗ್ರಾಮದ ಲಕ್ಷ್ಮೀ( 35) ಮೃತ ದುರ್ದೈವಿ. ತಮಿಳುನಾಡಿನ‌ ಧರ್ಮಪುರಿ ಜಿಲ್ಲೆಯ ಮುನಿರಾಜ್ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಲಕ್ಷ್ಮೀ ಮೂಲತಃ ತಮಿಳುನಾಡಿನ ಪೆನ್ನಾಗರಂ ನಿವಾಸಿ. ಲಕ್ಷ್ಮೀಯನ್ನು ಕಳೆದ 7 ತಿಂಗಳ ಹಿಂದೆ ನಾಗಮಲೆ ಗ್ರಾಮದ ರಮೇಶ್ ಎಂಬಾತ ವಿವಾಹವಾಗಿದ್ದ, ನಂತರ ಲಕ್ಷ್ಮಿ ಜೊತೆ ನಾಗಮಲೆಯಲ್ಲಿ ವಾಸವಾಗಿದ್ದನು.

ಇದನ್ನೂ ಓದಿ: ಮತ್ತಷ್ಟು ಜನಸ್ನೇಹಿಯಾದ್ರು ಆಗ್ನೇಯ ಪೊಲೀಸ್ : ಕ್ಯೂಆರ್ ಕೋಡ್ ಮೂಲಕ ನೇರವಾಗಿ ಅಧಿಕಾರಿಗಳ ಸಂಪರ್ಕ

ಮಂಗಳವಾರ ರಮೇಶ್ ಬೇರೆ ಊರಿಗೆ ಹೋಗಿದ್ದ. ಈ ವೇಳೆ ಎಂಟ್ರಿ ಕೊಟ್ಟ ಮುನಿರಾಜು ಲಕ್ಷ್ಮಿಯನ್ನು ಕೊಂದು ತಾನೂ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು, ಲಕ್ಷ್ಮೀಯನ್ನು ಕೊಲೆ ಮಾಡಿ ಫೇಸ್ ಬುಕ್ ಲೈವ್ ಮಾಡಿರುವ ಪಾಗಲ್ ಪ್ರಿಯಕರ ತನ್ನನ್ನು ಕೊಲೆಗಾರನನ್ನಾಗಿಸಿದೆಯಲ್ಲಾ ಲಕ್ಷ್ಮೀ, ತಾನೇ ನಿನ್ನನ್ನು ಕೊಲೆ ಮಾಡಿದೆನ್ನಲ್ಲಾ, ನಿನ್ನ ರಕ್ತವನ್ನು ಕಾಣಲು ನನ್ನಲ್ಲಾಗುತ್ತಿಲ್ಲ ಎಂದು ಅಳುತ್ತಾ ವೀಡಿಯೋ ಮಾಡಿದ್ದಾನೆ.  ಮೇಲ್ನೋಟಕ್ಕೆ ವಿವಾಹೇತರ ಸಂಬಂಧವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಮಲೆಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News