ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟ ಭೂಪ: ಕೇಳಿದ್ರೆ ಮದುವೆಯಲ್ಲ ಶಾರ್ಟ್ ಮೂವಿ ಶೂಟ್ ಅಂತಾನಂತೆ..!

ಪ್ರೀತಿಸಿ ಮದುವೆಯಾಗಿ ಮೂರೇ ದಿನಗಳಲ್ಲಿ ಪತ್ನಿಯನ್ನು ಬಿಟ್ಟು ಪರಾರಿಯಾಗಿರುವ ಭೂಪನೊಬ್ಬ ಮದುವೆ ಫೋಟೋ ತೋರಿಸಿದರೆ ನಾನು ಆಕೆಯನ್ನು ಮದುವೆಯೇ ಆಗಿಲ್ಲ. ಅದು ಶಾರ್ಟ್ ಮೂವಿ ತೆಗೆಯಲು ತೆಗೆದಿದ್ದ ಫೋಟೋ ಎನ್ನುತ್ತಿದ್ದಾನೆ.

Written by - VISHWANATH HARIHARA | Last Updated : Mar 17, 2023, 12:16 PM IST
  • ಮದುವೆಯಾಗಿ ಮೂರೇ ದಿನಕ್ಕೆ ಪತ್ನಿ ಬಿಟ್ಟು ಪತಿ ಪರಾರಿ
  • ಕೇಳಿದ್ರೆ ನಾನು ಮದುವೆನೇ ಆಗಿಲ್ಲ ಎನ್ನುತ್ತಿರುವ ಭೂಪ
  • ಮದುವೆ ಫೋಟೊ ತೋರಿಸಿದ್ರೆ ಇದು ಕಿರುಚಿತ್ರದ ಫೋಟೊ ಎನ್ನುತ್ತಿದ್ದಾನೆ
ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟ ಭೂಪ: ಕೇಳಿದ್ರೆ ಮದುವೆಯಲ್ಲ ಶಾರ್ಟ್ ಮೂವಿ ಶೂಟ್ ಅಂತಾನಂತೆ..!  title=

ಬೆಂಗಳೂರು: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಪತಿ ತನ್ನಿಂದ ದೂರವಾಗಿದ್ದಾನೆ ಎಂದು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪತಿ ಸುರೇಶ್ ವಿರುದ್ಧ ಧರಣಿ ಎಂಬಾಕೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

ಕೆಲ ವರ್ಷಗಳಿಂದ ಸುರೇಶನನ್ನು ಧರಣಿ ಪ್ರೀತಿಸುತ್ತಿದ್ದಳು. ಕಳೆದ ಫೆಬ್ರುವರಿ 13 ರಂದು ದೇವಸ್ಥಾನವೊಂದರಲ್ಲಿ ಇಬ್ಬರಿಗೂ ಮದುವೆಯಾಗಿತ್ತು. ಆದರೆ ಸುರೇಶ್ ವಿವಾಹವಾದ ಮೂರೇ ದಿನಕ್ಕೆ ನನ್ನ ಬಿಟ್ಟು ದೂರವಾಗಿದ್ದಾನೆ.  ಫೆಬ್ರವರಿ 18 ರಂದು ಮನೆಗೆ ಬಂದು ಕರೆದುಕೊಂಡು ಹೋಗಿರುವುದಾಗಿ ಭರವಸೆ ನೀಡಿದ್ದ  ಸುರೇಶ್, ಇದುವರೆಗೂ ಪತ್ತೆಯಾಗಿಲ್ಲ ಎಂದು ಧರಣಿ ದೂರಿದ್ದಾಳೆ.

ಇದನ್ನೂ ಓದಿ- Surya Mukundaraj : 'ಡಿಕೆ ರವಿ ಲವ್ ಕೇಸ್ ಬೆಳಕಿಗೆ ಬರಲಿಲ್ಲ, ರೋಹಿಣಿ ವಿರುದ್ಧ ದೂರು ದಾಖಲಾಗಲಿಲ್ಲ'

ಮದುವೆಯಾದದ  ಆದರೆ ಮದುವೆ ಪೋಟೊಗಳ ಬಗ್ಗೆ ಸುರೇಶನಿಗೆ ಕೇಳಿದ್ರೆ, ಆ ಫೋಟೋಗಳು ಶಾರ್ಟ್ ಮೂವಿ ಚಿತ್ರೀಕರಿಸಬೇಕಾದಾಗ ತೆಗೆದ ಫೋಟೋಗಳು. ಧರಣಿ ಜೊತೆ ನಾನು ವಿವಾಹವಾಗಲಿಲ್ಲ. ಕೇವಲ ಸ್ನೇಹಿತನಾಗಿ ಇದ್ದೇ ಅಷ್ಟೇ ಎಂದು ವರಸೆ ಬದಲಾಯಿಸಿದ್ದಾನಂತೆ‌. 

ಧರಣಿಗೆ 2016 ರಲ್ಲಿ ಮದುವೆಯಾಗಿತ್ತು. ಕೌಟುಂಬಿಕ ಕಾರಣಕ್ಕಾಗಿ ಪತಿಯಿಂದ ದೂರವಾಗಿದ್ದಳು. ಈ ಎಲ್ಲಾ ವಿಚಾರಗಳು ಸುರೇಶ್ ಗೂ ತಿಳಿಸಿದ್ದ ಧರಣಿ ಬಳಿಕ ಆತನನ್ನು ಪ್ರೀತಿಸಿ ಮದುವೆಯಾಗಿದ್ದಳು. 

ಇದನ್ನೂ ಓದಿ- ಗಂಡನ ಜೊತೆ ಅಕ್ರಮವಾಗಿ ನೆಲೆಸಿದ್ದ ಪಾಕ್ ಯುವತಿ ಗಡಿಪಾರು : ಪಾಕ್'ಗೆ ಹೋಗಲ್ಲ ಎಂದು ಹೈಡ್ರಾಮ!

ಫೆಬ್ರವರಿ 13ರಂದು ನಾವಿಬ್ಬರೂ ಮದುವೆಯಾಗಿದ್ದೆವು.  ಫೆ. 13ರಿಂದ 17ರವರೆಗೆ ಪತಿ-ಪತ್ನಿ ಇಬ್ಬರೂ ಜೊತೆಗೇ ಇದ್ದೆವು. ಆದರೆ, ಫೆಬ್ರವರಿ 18 ಮನೆಗೆ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ವಿವಾಹವಾಗಿ ಮೂರೇ ದಿನಗಳ ಅಂತರದಲ್ಲಿ ಪತಿ ನನ್ನಿಂದ ದೂರವಾಗಿದ್ದಾನೆ ಎಂದು ಧರಣಿ ಕಣ್ಣೀರು ಹಾಕುತ್ತಿದ್ದಾರೆ. ಸದ್ಯ ಮೋಸ ಮಾಡಿದ ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರಣಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರೆದಿದೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News