Love Jihad: ಇನ್ಸ್ಟಾಗ್ರಾಂ ಮೂಲಕ ‘ಲವ್ ಜಿಹಾದ್’? ಮುಸ್ಲಿಂ ಸಂಪ್ರದಾಯದಂತೆ ಮದುವೆಯಾದ ಹಿಂದೂ ಯುವತಿ!

Love Jihad: ಬಲವಂತದ ಮತಾಂತರದ ಕುರಿತು ಖಾಕಿಪಡೆ ತನಿಖೆ ನಡೆಸಿದೆ. ತಾನು ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ‌ ನೀಡಿದ್ದಾಳೆ.

Written by - Puttaraj K Alur | Last Updated : Dec 24, 2022, 06:07 PM IST
  • ಇನ್ಸ್ಟಾಗ್ರಾಂನಲ್ಲಿ ಅಂಕುರಿಸಿದ ಪ್ರೀತಿ, ಒಂದಾದ ಹಿಂದೂ ಯುವತಿ- ಮುಸ್ಲಿಂ ಯುವಕ
  • ಕೊಪ್ಪಳ ಜಿಲ್ಲೆಯ ಕುಷ್ಟಗಿಯಯಲ್ಲಿ ಇನ್ಸ್ಟಾಗ್ರಾಂ ಲವ್ ಪ್ರಕರಣ ಬೆಳಕಿಗೆ ಬಂದಿದೆ
  • ಇನ್ಸ್ಟಾಗ್ರಾಂ ಮೂಲಕ‌ ನಡೆಯಿತಾ ‘ಲವ್ ಜಿಹಾದ್’..? ಅನ್ನೋ ಶಂಕೆ ವ್ಯಕ್ತವಾಗಿದೆ
Love Jihad: ಇನ್ಸ್ಟಾಗ್ರಾಂ ಮೂಲಕ ‘ಲವ್ ಜಿಹಾದ್’? ಮುಸ್ಲಿಂ ಸಂಪ್ರದಾಯದಂತೆ ಮದುವೆಯಾದ ಹಿಂದೂ ಯುವತಿ! title=
ಕೊಪ್ಪಳ ಜಿಲ್ಲೆಯಲ್ಲಿ ‘ಲವ್ ಜಿಹಾದ್’!

ಕೊಪ್ಪಳ: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ‌ ನಡೆಯಿತಾ ಲವ್ ಜಿಹಾದ್? ಅನ್ನೋ ಶಂಕೆ ವ್ಯಕ್ತವಾಗಿದೆ. ಇನ್ಸ್ಟಾಗ್ರಾಂನಲ್ಲಿ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕ ನಡುವೆ ಪ್ರೀತಿ ಅಂಕುರಿಸಿದೆ. ಬಳಿಕ ಈ ಜೋಡಿ ಒಂದಾಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಇನ್ಸ್ಟಾಗ್ರಾಂ ಲವ್ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹಿಂದು-ಮುಸ್ಲಿಂ ಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಇನ್ಸ್ಟಾಗ್ರಾಂ ಯಶಸ್ವಿಯಾಗಿದೆ. ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಇಂದಿರಾನಗರದ ಯುವತಿ ಮದುವೆಯಾಗಿದ್ದಾರೆ. ಕಳೆದ 4 ವರ್ಷಗಳ ಹಿಂದೆಯೇ ಇನ್ಸ್ಟಾಗ್ರಾಂನಲ್ಲಿ ಈ ಜೋಡಿ ಪರಸ್ಪರ ಪರಿಚಯವಾಗಿದ್ದರು. ಮೊದಲು ಸ್ನೇಹ ಬೆಳೆದು ಬಳಿಕ‌ ಪ್ರೀತಿಗೆ ತಿರುಗಿತ್ತು.

ಇದನ್ನೂ ಓದಿ: ಪೆನ್ ಡ್ರೈವ್ ನಲ್ಲಿ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಳ್ಳುತ್ತೀರಾ: ಹಾಗಾದ್ರೆ ಜೋಕೆ..! 

ಸದ್ಯ ಮುಸ್ಲಿಂ ಸಾಂಪ್ರದಾಯದಂತೆ ಈ ಜೋಡಿ ಪ್ರೇಮ ವಿವಾಹವಾಗಿದೆ. ಡಿ.16ರಂದು ಯುವತಿ ಮನೆಯವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಮನೆ ಬಿಟ್ಟು ಹೋಗಿ ಯುವತಿ ಮದುವೆಯಾಗಿದ್ದಾಳೆ. ಹೀಗಾಗಿ ಕುಷ್ಟಗಿ ಪಟ್ಟಣದಲ್ಲಿ ;ಲವ್ ಜಿಹಾದ್; ಪ್ರಕರಣ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

ಮನೆಬಿಟ್ಟು ಹೋಗಿ ಮದುವೆಯಾಗಿದ್ದ ಇಬ್ಬರೂ ಪ್ರೇಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಲವಂತದ ಮತಾಂತರದ ಕುರಿತು ಖಾಕಿಪಡೆ ತನಿಖೆ ನಡೆಸಿದೆ. ತಾನು ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ‌ ನೀಡಿದ್ದಾಳೆ.

ಇದನ್ನೂ ಓದಿRamesh Jarkiholi : 'ಸಚಿವ ಸ್ಥಾನ ಸಿಗಲಿ ಬಿಡಲಿ, ನನಗೆ ಪಕ್ಷ ಸಂಘಟನೆ ಮುಖ್ಯ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News