ತಾಸಿನ ಹಿಂದೆ ಹೊಟ್ಟೆ ತಣಿಸಿದ್ದ ತಾಯಿ..ಕೊನೆಗೆ ಮಗನಿಗೆ ಸಿಕ್ಕಿದ್ದು ತಾಯಿಯ ತುಂಡು ಸೀರೆ..

Shirur landslide: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ದೋ ಎಂದು ಹರಿಯುತ್ತಿರುವ ಮಳೆ ಭಾರಿ ಅನಾಹುತವನ್ನೆ ಸೃಷ್ಟಿಸಿಬಿಟ್ಟಿದೆ. ಗುಡ್ಡ ಕುಸಿತಕ್ಕೆ ಸಿಲುಕಿ ಹಲವರು ಪ್ರಾಣ ಕಳೆದುಕೊಂಡಿದ್ದರೆ. ಇನ್ನೂ ಕೆಲವರು ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 

Written by - Zee Kannada News Desk | Last Updated : Jul 28, 2024, 08:18 AM IST
  • ಒಂದೆಡೆ ಕೇರಳ ಲಾರಿ ಡ್ರೈವರ್‌ ಅನ್ನು ಪತ್ತೆ ಹಚ್ಚುವ ಕಾರ್ಯ 11 ದಿನಗಳಿಂದ ನಿಲ್ಲದೆ ನಡೆಯುತ್ತಿದೆ.
  • ತಾಯಿಯ ಹುಡುಕಾಡುತ್ತಾ ಮಗ ಒಬ್ಬ, ತಾಯಿಯ ಸೆರಗನ್ನು ಹಿಡಿದುಕೊಂಡು ತಾಯಿಯ ಹುಡುಕಾಟದಲ್ಲಿದ್ದಾನೆ.
  • ಮರಳಿ ಬಂದು ನೋಡುವಷ್ಟರಲ್ಲಿ ತುಸು ಹೊತ್ತಿನ ಮುಂಚೆ ತನಗೆ ಊಟ ನೀಡಿದ್ದ ತಾಯಿ ನೀರಲ್ಲಿ ಕೊಚ್ಚಿ ಹೋಗಿದ್ದಳು.
ತಾಸಿನ ಹಿಂದೆ ಹೊಟ್ಟೆ ತಣಿಸಿದ್ದ ತಾಯಿ..ಕೊನೆಗೆ ಮಗನಿಗೆ ಸಿಕ್ಕಿದ್ದು ತಾಯಿಯ ತುಂಡು ಸೀರೆ.. title=

Shirur landslide: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ದೋ ಎಂದು ಹರಿಯುತ್ತಿರುವ ಮಳೆ ಭಾರಿ ಅನಾಹುತವನ್ನೆ ಸೃಷ್ಟಿಸಿಬಿಟ್ಟಿದೆ. ಗುಡ್ಡ ಕುಸಿತಕ್ಕೆ ಸಿಲುಕಿ ಹಲವರು ಪ್ರಾಣ ಕಳೆದುಕೊಂಡಿದ್ದರೆ. ಇನ್ನೂ ಕೆಲವರು ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 

ಒಂದಲ್ಲ ಎರಡಲ್ಲ ಹಲವಾರು ಕುಟುಂಬಗಳು ಈ ಘಟನೆಯಿಂದ ಬೀದಿಗೆ ಬಿದ್ದಿವೆ, ಒಂದೆಡೆ ಕೇರಳಾ ಲಾರಿ ಡ್ರೈವರ್‌ ಅನ್ನು ಪತ್ತೆ ಹಚ್ಚುವ ಕಾರ್ಯ 11 ದಿನಗಳಿಂದ ನಿಲ್ಲದೆ ನಡೆಯುತ್ತಿದೆ. ಇದರ ಮಧ್ಯೆ ಈ ಘಟನೆಯಲ್ಲಿ ನಡೆದ ಅನಾಹುತದಿಂದ ಮಹೀಲೆ ಒಬ್ಬರು ಪ್ರಾಣ ಕಳೆದುಕಂಡಿದ್ದು ಅವರ ಮಗ ತನ್ನ ತಾಯಿಯ ನೆನಪಲ್ಲಿ ಕಾಲ ಕಳೆಯುತ್ತಿದ್ದಾನೆ. 

ಊಹಿಸಲಾಗದಷ್ಟು ಮಟ್ಟಕ್ಕೆ ಶಿರೂರು ಗುಡ್ಡ ಕುಸಿತ ಅನಾಹುತವನ್ನು ಏಪರ್ಡಿಸಿದೆ. ಶಿರೂರು ಗುಡ್ಡ ಕುಸಿತಕ್ಕೆ ಸಿಳುಕಿ ಬಡ ಕುಟುಂಬ ಬೀದಿಗೆ ಬಿದ್ದಿದ್ದು ಅಷ್ಟೆ ಅಲ್ಲದೆ, ತಾಯಿಯ ಹುಡುಕಾಡುತ್ತಾ ಮಗ ಒಬ್ಬ ತಾಯಿಯ ಸೆರಗನ್ನು ಹಿಡಿದುಕೊಂಡು ತಾಯಿಯ ಹುಡುಕಾಟದಲ್ಲಿದ್ದಾನೆ.

ಅಷ್ಟಕ್ಕೂ ಈ ಗುಡ್ಡ ಕುಸಿತಕ್ಕೂ ಮುಂಚೆ ಆತಾಯಿ ಮಗನಿಗೆ ತನ್ನ ಕೈಯ್ಯಾರೆ ಊಟ ಬಡಿಸಿದ್ದಳು, ತಾಯಿ ಕೊಟ್ಟ ಊಟ ಸವಿದ ಮಗ ಅಂಗಡಿಗೆ ಹೋಗಿದ್ದ, ಮರಳಿ ಬಂದು ನೋಡುವಷ್ಟರಲ್ಲಿ ತುಸು ಹೊತ್ತಿನ ಮುಂಚೆ ತನಗೆ ಊಟ ನೀಡಿದ್ದ ತಾಯಿ ನೀರಲ್ಲಿ ಕೊಚ್ಚಿ ಹೋಗಿದ್ದಳು. ಸೂರು ನೀರಿನ ರಭಸಕ್ಕೆ ಹರಿದು ಹೋಗಿತ್ತು. ತಾಯಿ ನಿರೀಕ್ಷೆಯಲ್ಲಿ ಮನೆಗೆ ಮರಳಿ ಬಂದ ಮಗನಿಗೆ ಸಿಕ್ಕಿದ್ದು ಬೇಲಿಗೆ ಸಿಲುಕಿದ್ದ ತಾಯಿಯ ತುಂಡಾದ ಸೀರೆ ಮಾತ್ರ. 

ಸ್ವಲ್ಪ ಹೊತ್ತಿನ ಮುಂಚೆ ಹೊಟ್ಟೆ ತಣಿಸಿದ ತಾಯಿ ಇಲ್ಲ, ಆದರೆ ಅವಳ ಸೀರೆಯ ತುಂಡು ಅಲ್ಲಿ ಬೇಲಿಗೆ ಸಿಕ್ಕಿಕೊಂಡಿದ್ದು, ತಾಯಿ ಕೊನೆಯಲ್ಲಿ ತನ್ನ ನೆನಪಿಗೆ ಆ ಸೀರೆ ತುಂಡು ಬಿಟ್ಟು ಹೋಗಿದ್ದಾಳೆ. ಆತ ಆ ಸೀರೆ ತುಂಡನ್ನು ಹಿಡಿದು ನಿಂತಿರುವ ದ್ರಶ್ಯ ಮನಕಲಕುವಂತಿದೆ. ಈ ದೃಶ್ಯ ಎಂತಃವರ ಕಣ್ಣಲ್ಲೂ ನೀರು ತರಿಸುತ್ತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News