ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲಿ ಬಡಿದಾಡಿಕೊಂಡು ಬಿದ್ದು ಒದ್ದಾಡಿದ ಯುವಕರು..!

ಕುಡಿದು ಪಬ್ ನಿಂದ ಹೊರಬಂದ ನಾಲ್ಕೈದು ಯುವಕರ ಗುಂಪು ರಸ್ತೆಯಲ್ಲಿ ಹೊಡೆದಾಡಿಕೊಂಡು ಬಿದ್ದು ಒದ್ದಾಡಿದ್ದಾರೆ. ಯುವಕರ ಜಗಳ ಬಿಡಿಸಲು ಪಬ್ ಬೌನ್ಸರ್​​ಗಳು, ಸಾರ್ವಜನಿಕರು ಹರಸಾಹಸಪಟ್ಟಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Aug 14, 2023, 11:26 AM IST
  • ಮದ್ಯ ಮತ್ತಿನಲ್ಲಿ ಯುವಕರ ಗಲಾಟೆ.
  • ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿ ಘಟನೆ.
  • ರಸ್ತೆಯಲ್ಲಿ ಹೊಡೆದಾಡಿಕೊಂಡ ಯವಕರು.
ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲಿ ಬಡಿದಾಡಿಕೊಂಡು ಬಿದ್ದು ಒದ್ದಾಡಿದ ಯುವಕರು..! title=

ಬೆಂಗಳೂರು : ವೀಕೆಂಡ್ ಬಂತು ಅಂದ್ರೆ ಸಾಕು ಎಣ್ಣೆ ಏಟಲ್ಲಿ ಪುಂಡಾಟವಾಡೋರ ಸಂಖ್ಯೆ ಮಿತಿಮೀರಿದೆ. ಎಣ್ಣೆ ನಶೆಯಲ್ಲಿದ್ದ ಯುವಕರ ಗುಂಪೊಂದು ನಡು ರಸ್ತೆಯಲ್ಲಿ ಬಡಿದಾಡಿಕೊಂಡ ಘಟನೆ ತಡರಾತ್ರಿ 11 ಗಂಟೆ ಸುಮಾರಿಗೆ ಕ್ವೀನ್ಸ್ ರಸ್ತೆಯಲ್ಲಿ ನಡೆದಿದೆ.

ಕಂಠಪೂರ್ತಿ ಕುಡಿದು ಪಬ್ ನಿಂದ ಹೊರಬಂದ ನಾಲ್ಕೈದು ಯುವಕರ ಗುಂಪು ರಸ್ತೆಯಲ್ಲಿ ಹೊಡೆದಾಡಿಕೊಂಡು ಬಿದ್ದು ಒದ್ದಾಡಿದ್ದಾರೆ. ಯುವಕರ ಜಗಳ ಬಿಡಿಸಲು ಪಬ್ ಬೌನ್ಸರ್​​ಗಳು, ಸಾರ್ವಜನಿಕರು ಹರಸಾಹಸಪಟ್ಟಿದ್ದಾರೆ. ಯುವಕರ ವರ್ತನೆಯಿಂದ ವಾಹನ ಸವಾರರು ಸಾರ್ವಜನಿಕರಿಗೆ ಕಿರಿಕಿಯುಂಟಾಗಿದ್ದು, ಆಕ್ರೋಶ ಹೊರಹಾಕಿದ್ದಾರೆ. ಯುವಕರ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಧಾನಸೌಧ ಠಾಣಾ ಪೊಲೀಸರು ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ದೇಶದ ಹಣ ಲೂಟಿ ಹೊಡೆಯುವ ಚಿಂತೆ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ!

ಮದ್ಯದ ಮತ್ತಿನಲ್ಲಿದ್ದ ಯುವತಿಯೊಬ್ಬಳು ತೂರಾಡುತ್ತ ಸಾರ್ವಜನಿಕರಿಗೆ ತಲೆನೋವಾದ ಘಟನೆ ಕಳೆದ ಶನಿವಾರ ರಾತ್ರಿ ಚರ್ಚ್ ಸ್ಟ್ರೀಟ್ ನಲ್ಲಿ ನಡೆದಿತ್ತು. ಬುದ್ದಿ ಹೇಳಲು ಹೋದವರ ಮೇಲೆಯೇ ಮುಗಿ ಬಿಳುತ್ತಿದ್ದ, ಯುವತಿಯನ್ನ ಸುಧಾರಿಸಲು ಪೊಲೀಸರೇ ಹೈರಾಣಾಗಿದ್ದರು. ಕೊನೆಗೆ ಸ್ಥಳದಲ್ಲಿದ್ದ ಇತರೆ ಯುವತಿಯರ ನೆರವಿನಿಂದ ಆಕೆಯನ್ನ ಮನೆಗೆ ತಲುಪಿಸಲಾಗಿತ್ತು. ಕಳೆದ ತಿಂಗಳೂ ಸಹ ಕೇಂದ್ರ ವಿಭಾಗದ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲ ವಿದೇಶಿ ಪ್ರಜೆಗಳು ಭಾರಿ ಹೈಡ್ರಾಮಾ ನಡೆಸಿದ್ದರು. 

ವಶಕ್ಕೆ ಪಡೆಯುವ ಯತ್ನದಲ್ಲಿದ್ದ ಪೊಲೀಸರಿಂದ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡಿದ್ದರು. ಇನ್ನೂ ಕೆಲವರು ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ ಘಟನೆ ನಡೆದಿತ್ತು. ಪದೇ ಪದೇ ಇಂತಹ  ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಸಾರ್ವಜನಿಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಇಂತವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News