ಕೌಟುಂಬಿಕ ಕಲಹ ಪತ್ನಿ, ಇಬ್ಬರು ಮಕ್ಕಳ ಶವ ಪತ್ತೆ: ಪತಿ ಕೊಂದಿರುವ ಶಂಕೆ

ಚಾಮರಾಜನಗರ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದ್ದು ಪತಿ ಕೊಂದಿರುವ ಆರೋಪ ಕೇಳಿಬರುತ್ತಿದೆ. 

Written by - Yashaswini V | Last Updated : Sep 15, 2023, 09:27 AM IST
  • ತಂದೆ ತಾಯಿ ಜೊತೆಗೂಡಿ ಪತಿಯೇ ಪತ್ನಿ-ಮಕ್ಕಳ ಹತ್ಯೆಗೈದಿರುವ ಆರೋಪ
  • ಆಗಾಗ್ಗೆ ನಡೆಯುತ್ತಿದ್ದ ಕೌಟುಂಬಿಕ ಕಲಹವೇ ಕಾರಣ ಎಂದು ಆರೋಪ
ಕೌಟುಂಬಿಕ ಕಲಹ ಪತ್ನಿ, ಇಬ್ಬರು ಮಕ್ಕಳ ಶವ ಪತ್ತೆ: ಪತಿ ಕೊಂದಿರುವ ಶಂಕೆ  title=

ಚಾಮರಾಜನಗರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಜಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೃತ ದುರ್ದೈವಿಗಳನ್ನು ಮೇಘ (24), ಪುನ್ವಿತಾ (06), ಮನ್ವಿತಾ( 03) ಎಂದು ಗುರುತಿಸಲಾಗಿದ್ದು ಆಗಾಗ್ಗೆ ನಡೆಯುತ್ತಿದ್ದ ಕೌಟಂಬಿಕ ಕಲಹವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಮಾನಸಿಕ ಕಿರುಕುಳಕ್ಕೆ ಮನನೊಂದು ಮೈಸೂರು ವಿವಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಪತಿ ಹಾಗೂ ಅತ್ತೆ-ಮಾವ ಕೊಂದಿರುವ ಆರೋಪ: 
ಮೇಘಾ ಪತಿ ಅಭಿ ಉರ್ಫ್ ಧನಂಜಯ, ಈತನ  ತಾಯಿ ನಿರ್ಮಲಮ್ಮ, ತಂದೆ ಮಲ್ಲಿಕಾರ್ಜುನ ಮತ್ತು ತಮ್ಮ ಪುಟ್ಟು ಜೊತೆಗೆ ಸೇರಿ ತನ್ನ ಹೆಂಡತಿ ಮೇಘ ಮತ್ತು ಇಬ್ಬರೂ ಹೆಣ್ಣು ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತ ಮೇಘಳ ತಂದೆ ಆರೋಪಿಸಿದ್ದಾರೆ.

ಇದನ್ನೂ ಓದಿ- OMG: 45ಕ್ಕೂ ಹೆಚ್ಚು ಮಹಿಳೆಯರ ರೇಪ್ ಮಾಡಿದ್ದ ಕಾಮುಕ ಪ್ರಿನ್ಸಿಪಾಲ್ ಬಂಧನ!

ಇಂದು ಬೆಳಿಗ್ಗೆಯಿಂದಲೂ ಮನೆಯಲ್ಲಿ ಗಲಾಟೆ ನಡೆದಿತ್ತು ಗಂಡ ಹಾಗೂ ಆತನ ಮನೆಯವರು ನೇಣು ಬಿಗಿದಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ, ಮೃತ ಮೇಘ ಅವರ ಪತಿ ಅಭಿ ಹಾಗೂ ಅತ್ತೆ-ಮಾವರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News