ಭಾರತದಲ್ಲಿ ಡ್ರೈವರ್‌‌ಲೆಸ್ ಕಾರುಗಳಿಗೆ ಅನುಮತಿ ನೀಡಲ್ಲ: ನಿತಿನ್ ಗಡ್ಕರಿ

Driverless Cars in India: ಚಾಲಕರಹಿತ ಕಾರುಗಳು ಭಾರತಕ್ಕೆ ಬರಲು ನಾನು ಎಂದಿಗೂ ಅನುಮತಿಸುವುದಿಲ್ಲ. ಏಕೆಂದರೆ ಇದು ಹಲವಾರು ಚಾಲಕರ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ. ಹೀಗಾಗಿ ನಾನು ಹಾಗೆ ಮಾಡಲು ಬಿಡುವುದಿಲ್ಲವೆಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.  

Written by - Puttaraj K Alur | Last Updated : Dec 17, 2023, 07:50 PM IST
  • ರಸ್ತೆ ಸುರಕ್ಷತೆಯ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ
  • ಭಾರತದ ರಸ್ತೆಗಳಿಗೆ ಚಾಲಕರಹಿತ ಕಾರುಗಳು ಎಂದಿಗೂ ಇಳಿಯಲು ಸಾಧ್ಯವಿಲ್ಲ
  • ಚಾಲಕರ ಉದ್ಯೋಗ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಭಾರತದಲ್ಲಿ ಡ್ರೈವರ್‌‌ಲೆಸ್ ಕಾರುಗಳಿಗೆ ಅನುಮತಿ ನೀಡಲ್ಲ: ನಿತಿನ್ ಗಡ್ಕರಿ title=
ಚಾಲಕರಹಿತ ಕಾರುಗಳಿಗೆ ನೋ ಎಂಟ್ರಿ!

ನವದೆಹಲಿ: ರಸ್ತೆ ಸುರಕ್ಷತೆಯ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಅಂತಾ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಐಐಎಂ ನಾಗ್ಪುರ್ ಆಯೋಜಿಸಿದ್ದ ‘ಝೀರೋ ಮೈಲ್ ಸಂವಾದ’(Zero Mile Samvad) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಸ್ತೆ ಅಪಘಾತಗಳನ್ನು ತಗ್ಗಿಸಲು ಕೇಂದ್ರವು ತೆಗೆದುಕೊಂಡ ಹಲವಾರು ಕ್ರಮಗಳನ್ನು ವಿವರಿಸಿದ್ದಾರೆ.

‘ಭಾರತದ ರಸ್ತೆಗಳಿಗೆ ಚಾಲಕರಹಿತ ಕಾರುಗಳು ಎಂದಿಗೂ ಇಳಿಯಲು ಸಾಧ್ಯವಿಲ್ಲ’ವೆಂದು ಇದೇ ವೇಳೆ ಸ್ಪಷ್ಟಪಡಿಸಿದ ಗಡ್ಕರಿ, ದೇಶದಲ್ಲಿನ ರಸ್ತೆ ಸುರಕ್ಷತೆಯ ಕಾಳಜಿ ಬಗ್ಗೆ ಮಾಹಿತಿ ನೀಡಿದರು. ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸುವುದು, ರಸ್ತೆಗಳಲ್ಲಿನ ಬ್ಲಾಕ್ ಸ್ಪಾಟ್‌ಗಳನ್ನು ಕಡಿಮೆ ಮಾಡುವುದು ಮತ್ತು ಎಲೆಕ್ಟ್ರಿಕ್ ಮೋಟಾರ್ಸ್ ಆಕ್ಟ್ ಮೂಲಕ ದಂಡ ಹೆಚ್ಚಿಸುವ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಬದಲಾವಣೆಗಳ ಕುರಿತ ಮಾಹಿತಿ ನೀಡಿದರು.  

ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲಿನಲ್ಲಿಯೇ ಮದುವೆಯಾದ ಜೋಡಿ..!

‘ನಾವು ಎಲೆಕ್ಟ್ರಿಕ್ ಮೋಟಾರ್ಸ್ ಆಕ್ಟ್ ಮೂಲಕ ದಂಡವನ್ನು ಹೆಚ್ಚಿಸಿದ್ದೇವೆ. ಆಂಬ್ಯುಲೆನ್ಸ್ ಮತ್ತು ಕ್ರೇನ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿರುತ್ತವೆ. ಇದರಿಂದ ಎಲ್ಲವೂ ಸುಗಮವಾಗಿ ಹೋಗುತ್ತದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದೆಂತೆ ನಾವು ಪ್ರತಿವರ್ಷವೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಗಡ್ಕರಿ ಹೇಳಿದ್ದಾರೆ.

‘ಭಾರತದಲ್ಲಿ ಡ್ರೈವರ್‌ಲೆಸ್ ಕಾರುಗಳ ಪರಿಚಯಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದ ಅವರು, ಚಾಲಕರ ಉದ್ಯೋಗ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ‘ಚಾಲಕರಹಿತ ಕಾರುಗಳು ಭಾರತಕ್ಕೆ ಬರಲು ನಾನು ಎಂದಿಗೂ ಅನುಮತಿಸುವುದಿಲ್ಲ. ಏಕೆಂದರೆ ಇದು ಹಲವಾರು ಚಾಲಕರ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ. ಹೀಗಾಗಿ ನಾನು ಹಾಗೆ ಮಾಡಲು ಬಿಡುವುದಿಲ್ಲ’ವೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಕೋರೋನಾ ಸಬ್ ವೇರಿಯಂಟ್ JN.1 ಪತ್ತೆ ಖಚಿತ, ಹೆಚ್ಚಾಗಲಿದೆಯಾ ಟೆನ್ಷನ್?  

‘ನಾವು ಭಾರತಕ್ಕೆ ಟೆಸ್ಲಾ ಕಂಪನಿ ಬರಲು ಅವಕಾಶ ನೀಡುತ್ತೇವೆ. ಆದರೆ ಅವರು ಚೀನಾದಲ್ಲಿ ಉತ್ಪಾದಿಸಲು, ಭಾರತದಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದಿಲ್ಲ. ಆ ರೀತಿ ನಡೆಯುವುದು ಅಸಾಧ್ಯ ಸಂಗತಿಯಾಗಿದೆ. ಹೈಡ್ರೋಜನ್ ಭವಿಷ್ಯದ ಇಂಧನವಾಗಿದೆ ಮತ್ತು ಸಾರ್ವಜನಿಕ ಮೂಲಸೌಕರ್ಯ ಹೆಚ್ಚಿಸಲು ಸಹಾಯ ಮಾಡಲು ನಾವು ಅತ್ಯುತ್ತಮ ತಂತ್ರಜ್ಞಾನವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News