ಹೆಂಡತಿ ಟಾರ್ಚರ್ ತಾಳಲಾರದೆ ಚೈನ್ ಸ್ನಾಚ್.. ಕೊನೆಗೂ ಸಿಕ್ಕಿಬಿದ್ದ ಪತಿರಾಯ!

ಚೈನ್‌ ಸ್ನಾಚರ್‌ ನಾಗರಾಜ್ ಎಂಬಾತನನ್ನು ಕೆಂಗೇರಿ ಪೊಲೀಸರು ಸೆರೆ ಹಿಡಿದಿದ್ದಾರೆ. ಕಳ್ಳನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಈ ವೃತ್ತಿಗೆ ಇಳಿದಿರುವ ಕಾರಣ ಬಯಲಾಗಿದೆ. ಇದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.  

Written by - VISHWANATH HARIHARA | Edited by - Chetana Devarmani | Last Updated : Apr 18, 2022, 11:52 AM IST
  • ವಾಕಿಂಗ್ ಹೋಗ್ತಿದ್ದ ಮಹಿಳೆಯರೇ ಈತನ ಟಾರ್ಗೆಟ್‌
  • ಮಹಿಳೆಯ ಮಾಂಗಲ್ಯ ಸರ ಕಿತ್ತು ಎಸ್ಕೇಪ್ ಆಗಿದ್ದ ಆರೋಪಿ
  • ಹೆಂಡತಿ ಟಾರ್ಚರ್ ತಾಳಲಾರದೆ ಚೈನ್ ಸ್ನಾಚ್
  • ಆರೋಪಿ ನಾಗರಾಜ್ ಎಂಬಾತನನ್ನು ಸೆರೆ ಹಿಡಿದ ಕೆಂಗೇರಿ ಪೊಲೀಸರು
ಹೆಂಡತಿ ಟಾರ್ಚರ್ ತಾಳಲಾರದೆ  ಚೈನ್ ಸ್ನಾಚ್.. ಕೊನೆಗೂ ಸಿಕ್ಕಿಬಿದ್ದ ಪತಿರಾಯ! title=
ಕಳ್ಳತನ

ಬೆಂಗಳೂರು: ಕಳ್ಳತನ ಎಂಬುದು ಕಾನೂನಿನ ಪ್ರಕಾರ ಒಂದು ಅಪರಾಧ. ಆದರೂ ಬೇರೆ ಬೇರೆ ಕಾರಣಗಳಿಗೆ ಓರ್ವ ವ್ಯಕ್ತಿ ಕಳ್ಳತನಕ್ಕೆ ಇಳಿಯುತ್ತಾನೆ. ಕೆಲವರು ಕಳ್ಳತನವನ್ನೇ ಹವ್ಯಾಸ ಮಾಡಿಕೊಂಡಿದ್ದರೆ, ಇನ್ನೂ ಒಂದಷ್ಟು ಜನ ಜೀವನ ನಿರ್ವಹಣೆಗೆ ಕೆಲಸ ಸಿಗದೇ ಹಣಕ್ಕಾಗಿ ಕದಿಯುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಹೆಂಡತಿಯ ಕಾಟ ತಾಳಲಾರದೇ ಕಳ್ಳತನಕ್ಕೆ ಇಳಿದಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 

ಇದನ್ನೂ ಓದಿ:"ಕತ್ತಲೆ ಮುಖವಾಡ - ಪರ್ಸಂಟೇಜ್ ಪಲ್ಲಕ್ಕಿಯಲ್ಲಿ ಪವಡಿಸಿದ ನಿಮ್ಮ ನಿಜಬಣ್ಣ ಕಳಚಿ ಬೀಳಲಿದೆ"

ವಾಕಿಂಗ್ ಹೋಗ್ತಿದ್ದ ಮಹಿಳೆಯರೇ ಈತನ ಟಾರ್ಗೆಟ್‌. ವಾಕಿಂಗ್ ಹೋಗ್ತಿದ್ದ ಮಹಿಳೆಯರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕ್ಷಣಾರ್ಧದಲ್ಲಿ ಕಿತ್ತು ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಚೈನ್‌ ಸ್ನಾಚರ್‌ ನಾಗರಾಜ್ ಎಂಬಾತನನ್ನು ಕೆಂಗೇರಿ ಪೊಲೀಸರು ಸೆರೆ ಹಿಡಿದಿದ್ದಾರೆ. ಕಳ್ಳನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಈ ವೃತ್ತಿಗೆ ಇಳಿದಿರುವ ಕಾರಣ ಬಯಲಾಗಿದೆ. ಇದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ. 

ಹೆಂಡತಿ ಕಾಟಕ್ಕೆ ಚೈನ್ ಸ್ನಾಚ್ ಮಾಡಿದ್ದ ಗಂಡ:

ಈತನ ಪತ್ನಿ ಹಣಕ್ಕಾಗಿ ಪದೆ ಪದೇ ಪೀಡಿಸುತ್ತಿದ್ದಳಂತೆ. ಹೆಂಡತಿಯ ಆಸೆ ಈಡೇರಿಸಲು ದುಡ್ಡಿಗಾಗಿ ಈ ಪತಿರಾಯ ಕಳ್ಳತನಕ್ಕೆ ಇಳಿದಿರುವ ವಿಚಾರ ವಿಚಾರಣೆ ವೇಳೆ ಬಯಲಾಗಿದೆ. ಹೆಂಡತಿ ಟಾರ್ಚರ್ ತಾಳಲಾರದೆ ಚೈನ್ ಸ್ನಾಚ್ ಮಾಡುತ್ತಿರುವುದಾಗಿ ಆರೋಪಿ ಹೇಳಿದ್ದಾನಂತೆ. 

ಇದನ್ನೂ ಓದಿ:ಶಿಕ್ಷಕರಿಗಾಗಿ ಖಾಸಗಿ ಶಾಲೆಗಳು ಪರದಾಟ! ಹೊರರಾಜ್ಯಗಳ‌ ಶಿಕ್ಷಕರ ಮೊರೆ ಹೋದ ಆಡಳಿತ ಮಂಡಳಿ?

ಹೆಂಡತಿಗೆ ಹಣವನ್ನು ನೀಡಲು ವಾಕಿಂಗ್ ಹೋಗ್ತಿದ್ದ ಮಹಿಳೆಯ ತಾಳಿಯನ್ನು ಕಿತ್ತು ಈತ ಎಸ್ಕೇಪ್ ಆಗಿದ್ದ. ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಕಳ್ಳನನ್ನು ಸೆರೆ ಹಿಡಿದಿದ್ದು, ಬಧಿತನಿಂದ 3 ಲಕ್ಷ ಮೌಲ್ಯದ ಮಾಂಗಲ್ಯ‌ ಸರ ವಶಕ್ಕೆ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News