Cashback Fraud: 'ಸರಕು ಖರೀದಿಸಿ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ' ಅಂತಾ ಯಾರಾದರೂ ಹೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ!

Cashback Fraud: ಕ್ಯಾಶ್ ಬ್ಯಾಕ್ ಹಗರಣವೊಂದು ಪ್ರಸ್ತುತ ಜನರ ಭಾರಿ ನಿದ್ದೆಗೆಡಿಸಿದೆ. ಮಾಡಲು ಅವರು ಜನರಿಗೆ ಕ್ಯಾಶ್ ಬ್ಯಾಕ್ ನೀಡುವುದಾಗಿ ಹೇಳುತ್ತಾರೆ ಮತ್ತು ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ಈ ಸ್ಕ್ಯಾಮ್ ನಲ್ಲಿ ನಿರತರಾದವರು ತುಂಬಾ ಚಾಣಾಕ್ಷತನದಿಂದ ಮಾತನಾಡುತ್ತಾರೆ, ಹಲವು ವಿಧದಲ್ಲಿ ಜನರನ್ನು ವಂಚಿಸುತ್ತಿದ್ದಾರೆ. (Crime News In Kannada)  

Written by - Nitin Tabib | Last Updated : Mar 12, 2024, 07:26 PM IST
  • ಯಾವುದೇ ಕ್ಯಾಶ್‌ಬ್ಯಾಕ್ ಪ್ರೋಗ್ರಾಂಗೆ ಸೇರುವ ಮೊದಲು, ಕಂಪನಿ ಅಥವಾ ಪ್ಲಾಟ್‌ಫಾರ್ಮ್
  • ನೀಡುವ ಮಾಹಿತಿಯ ಕುರಿತು ನಿಮ್ಮದೇ ಆದ ರೀತಿಯಲ್ಲಿ ಸಂಶೋಧನೆ ನಡೆಸಿ.
  • ಇತರರು ಯಾವ ಅನುಭವಗಳನ್ನು ಹೊಂದಿದ್ದಾರೆ ಮತ್ತು ಅವರ ವೆಬ್‌ಸೈಟ್ ನಿಜವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಿ.
Cashback Fraud: 'ಸರಕು ಖರೀದಿಸಿ ಶೇ.100 ರಷ್ಟು ಕ್ಯಾಶ್ ಬ್ಯಾಕ್ ಪಡೆಯಿರಿ' ಅಂತಾ ಯಾರಾದರೂ ಹೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಿ, ಕಾರಣ ಇಲ್ಲಿದೆ! title=

Cashback Fraud: ಇತ್ತೀಚಿನ ದಿನಗಳಲ್ಲಿ ಕ್ಯಾಶ್ ಬ್ಯಾಕ್ ಹಗರಣವೊಂದು (Cashback Scam) ಮುನ್ನೆಲೆಗೆ ಬಂದಿದ್ದು, ಈ ಹಗರನಾಡಲಿ ವಂಚಕರು ನೀವು ಖರೀದಿಸಿದ ಸರಕುಗಳ ಮೇಲೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ (100 percent cashback scam) ಸಿಗಲಿದೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಈ ಹಗರಣದ ಮೂಲಕ ಅವರು ಹಣ ಹಾಗೂ ವೈಯಕ್ತಿಕ ಮಾಹಿತಿ ಎರಡನ್ನೂ ಕೂಡ ಕದಿಯುತ್ತಿದ್ದಾರೆ. ತುಂಬಾ ಚಾಕಚಕ್ಯತೆಯಿಂದ (hundred pc cashback offer alert)ಮಾತನಾಡುವ ಈ ಜನರು ವಿವಿಧ ರೀತಿಯಲ್ಲಿ ಜನರನ್ನು ತಮ್ಮ ಬಲೆಗೆ ಬೀಳಿಸುತ್ತಿದ್ದಾರೆ. ಅವರ ಬಲೆಗೆ ನೀವು ಗುರಿಯಾಗಬಾರದು ಎಂದರೆ ನೀವು ಕೆಲ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ಬನ್ನಿ ಏನಿದು ಕ್ಯಾಶ್ಬ್ಯಾಕ್ ವಂಚನೆ (Cashback Fraud), ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ, (Crime News In Kannada)

ಈ ಹಗರಣ ಹೇಗೆ ಕಾರ್ಯನಿರ್ವಹಿಸುತ್ತದೆ?
ಸುಳ್ಳು ಭರವಸೆ ಮತ್ತು ಕೊಡುಗೆಗಳ ಆಮೀಷ: ನಿಮ್ಮನ್ನು ಬಲೆಗೆ ಬೀಳಿಸಲು ವಂಚಕರು ನಿಮಗೆ ಹಲವು ರೀತಿಯ ಸಂದೇಶಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಅಥವಾ ನಕಲಿ ಇಮೇಲ್‌ಗಳನ್ನು ಕಳುಹಿಸುತ್ತಾರೆ. ಈ ಜನರು ವಾಸ್ತವದಲ್ಲಿ ಸಾಧ್ಯವೇ ಇಲ್ಲ ಎಂಬಂತಹ ಭಾರಿ ಕ್ಯಾಶ್‌ಬ್ಯಾಕ್ ನೀಡುವುದಾಗಿ ನಂಬಿಸುತ್ತಾರೆ,  ಖಾತರಿ ಹಣ ಮತ್ತು ಹೆಚ್ಚಿನ ಲಾಭದ ಭರವಸೆಯನ್ನೂ ಕೂಡ ನೀಡುತ್ತಾರೆ.

ಆತುರಾತುರತೆಯಿಂದ ವರ್ತಿಸುತ್ತಾರೆ ಮತ್ತು ನಿಮ್ಮನ್ನು ಅದಕ್ಕೆ ಆಣಿಮಾಡುತ್ತಾರೆ : ಇಲ್ಲಿ ವಿಶೇಷ ಸಂಗತಿ ಎಂದರೆ ಅವರು ನಿಮ್ಮೊಂದಿಗೆ ಆತುರತೆಯಿಂದ ವರ್ತಿಸುತ್ತಾರೆ. ಅಷ್ಟೇ ಅಲ್ಲ ತ್ವರಿತ ನಿರ್ಧಾರ ತೆಗೆದುಕೊಳ್ಳುವಂತೆ ವಂಚಕರು ನಿಮ್ಮ ಮೇಲೆ ಒತ್ತಡ ಹೇರುತ್ತಾರೆ. ಈ ಆಫರ್ ಸ್ವಲ್ಪ ಸಮಯದವರೆಗೆ ಮಾತ್ರ ಅಥವಾ ಕೆಲವರಿಗೆ ಮಾತ್ರ ಲಭ್ಯವಿದೆ ಹೇಳುತ್ತಾರೆ.

ವೈಯಕ್ತಿಕ ಮಾಹಿತಿ ಕದಿಯುತ್ತಾರೆ: ಒಂದೊಮ್ಮೆ ನೀವು ಅವರಿಗೆ ಅಟೆನ್ಶನ್ ನೀಡಿದರೆ, ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಯತ್ನಿಸುತ್ತಾರೆ. ಇದರಲ್ಲಿ, ಅವರು ದುರುದ್ದೇಶ ಪೂರಿತ ಲಿಂಕ್ ಗಳನ್ನು ಕಳುಹಿಸುವ ಮೂಲಕ ಮತ್ತು ಕ್ಲಿಕ್ ಮಾಡುವಂತೆ ಹೇಳಿ, ತನ್ಮೂಲಕ ಮೂಲಕ ನಿಮ್ಮನ್ನು ವಂಚನೆಯ ಬಲೆಗೆ ಬೀಳಿಸುತ್ತಾರೆ. ಇದರಿಂದ ದುರುದ್ದೇಶದಿಂದ ಕೂಡಿದ ಸಾಫ್ಟ್‌ವೇರ್ ಡೌನ್‌ಲೋಡ್ ಆಗಬಹುದು ಅಥವಾ ನಿಮ್ಮ ಕ್ಯಾಶ್‌ಬ್ಯಾಕ್ ಅನ್ನು "ಸಕ್ರಿಯಗೊಳಿಸುವ" ನೆಪದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ಅವರು ತೆಗೆದುಕೊಳ್ಳಬಹುದು.

ನಕಲಿ ವೆಬ್‌ಸೈಟ್‌ಗಳು: ಕೆಲವೊಮ್ಮೆ ವಂಚಕರು ನಿಮ್ಮನ್ನು ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯಲು ಅಥವಾ ನಕಲಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಂತೆ ಹೇಳಬಹುದು. ಈ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ನೈಜ ವೆಬ್ ಸೈಟ್ ಹಾಗೂ ಆಪ್ ನಂತೆಯೇ ಕಾಣುತ್ತವೆ. ಆದರೆ, ವಾಸ್ತವದಲ್ಲಿ ಅವು ನಿಮ್ಮ ಮಾಹಿತಿಯನ್ನು ಕದಿಯುತ್ತವೆ ಅಥವಾ ಸಣ್ಣ ಪಾವತಿಗಳನ್ನು ಮಾಡುವಂತೆ ಮಾಡುತ್ತವೆ, ನಂತರ ಕೂಡ ಅದು ನಿಮಗೆ ತಿಳಿಯುವುದಿಲ್ಲ.

ನಾವು ಹೇಗೆ ಪಾರಾಗಬೇಕು? (Safety Measures)
>> ಮೊದಲು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ: ಯಾವುದೇ ಕ್ಯಾಶ್‌ಬ್ಯಾಕ್ ಪ್ರೋಗ್ರಾಂಗೆ ಸೇರುವ ಮೊದಲು, ಕಂಪನಿ ಅಥವಾ ಪ್ಲಾಟ್‌ಫಾರ್ಮ್ ನೀಡುವ ಮಾಹಿತಿಯ ಕುರಿತು ನಿಮ್ಮದೇ ಆದ ರೀತಿಯಲ್ಲಿ ಸಂಶೋಧನೆ ನಡೆಸಿ. ಇತರರು ಯಾವ ಅನುಭವಗಳನ್ನು ಹೊಂದಿದ್ದಾರೆ ಮತ್ತು ಅವರ ವೆಬ್‌ಸೈಟ್ ನಿಜವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಿ.

>> ನಂಬಿಕೆಗೆ ಅರ್ಹವಾದ ವಿಷಯಗಳನ್ನು ಆಯ್ಕೆಮಾಡಿ: ದೊಡ್ಡ ಹೆಸರಿನ ಅಂಗಡಿಗಳು, ಕ್ರೆಡಿಟ್ ಕಾರ್ಡ್ ಕಂಪನಿಗಳು ಅಥವಾ ವಿಶ್ವಾಸಾರ್ಹ ಲಾಯಲ್ಟಿ ಕಾರ್ಯಕ್ರಮಗಳಿಂದ ಕ್ಯಾಶ್‌ಬ್ಯಾಕ್ ಕಾರ್ಯಕ್ರಮಗಳನ್ನು ಆಯ್ಕೆಮಾಡಿ.

ಇದನ್ನೂ ಓದಿ-Karnataka Govt DA Hike: ರಾಜ್ಯ ಸರ್ಕಾರಿ ನೌಕರರಿಗೂ ಸಿಕ್ತು ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ

>> ಲಿಂಕ್‌ಗಳು ಮತ್ತು ಡೌನ್‌ಲೋಡ್‌ಗಳಿಗೆ ಗಮನ ಕೊಡಿ: ವಿಚಿತ್ರವಾಗಿ ಕಾಣುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಅಜ್ಞಾತ ಸ್ಥಳಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.

ಇದನ್ನೂ ಓದಿ-Aadhaar Card ವಂಚನೆಯಿಂದ ಪಾರಾಗಲು ಪ್ರತಿಯೊಬ್ಬರಿಗೂ ತಿಳಿದಿರಬೇಕು ಈ ಐದು ಸಂಗತಿಗಳು!

>> ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಿಕೊಳ್ಳಿ: ನಿಮ್ಮ ಹಣಕಾಸಿನ ಮಾಹಿತಿಯನ್ನು ಯಾವುದೇ ಅಪರಿಚಿತ ವೆಬ್‌ಸೈಟ್ ಅಥವಾ ನೀವು ನಂಬದ ಯಾರೊಂದಿಗೂ ಎಂದಿಗೂ ಹಂಚಿಕೊಳ್ಳಬೇಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News