Bengaluru : 8 ಲಲನೆಯರ ಅಕೌಂಟ್ಗೆ 6 ಕೋಟಿ ಸುರಿದ ಬ್ಯಾಂಕ್ ಮ್ಯಾನೇಜರ್!

ಸಾಲ ಮಾಡಿ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದ ಯುವತಿಗೆ ಹಣ ನೀಡಿದ್ದೆ ಎಂದು ಮ್ಯಾನೇಜರ್ ಹರಿಶಂಕರ್ ಹೇಳಿಕೆ ನೀಡಿದ್ದ. ತನಿಖೆ ವೇಳೆ ಒಟ್ಟು 30 ಬ್ಯಾಂಕ್ ಅಕೌಂಟ್ ಗಳಿಗೆ ಸುಮಾರು 6 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಪರಿಶೀಲಿಸಿದಾಗ ಆರು ಮಂದಿ ಅಪರಿಚಿತ ಯುವತಿಯರಿಗೆ ಹಣ ಹೋಗಿರುವುದನ್ನು ಕಂಡುಕೊಂಡಿದ್ದಾರೆ.

Written by - VISHWANATH HARIHARA | Last Updated : Jun 29, 2022, 07:19 PM IST
  • ಸಹೋದ್ಯೋಗಿ ಹೆಸರಿನಲ್ಲಿ‌ ಆರು ಕೋಟಿ ಸಾಲ ಮಾಡಿ ವಂಚನೆ
  • ಬ್ಯಾಂಕ್‌ ಮ್ಯಾನೇಜರ್ ನ ವಿಚಾರಣೆ ವೇಳೆ ಹಲವು ಸಂಗತಿಗಳು ಬಹಿರಂಗ
  • ಹನುಮಂತನಗರದಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆ
Bengaluru : 8 ಲಲನೆಯರ ಅಕೌಂಟ್ಗೆ 6 ಕೋಟಿ ಸುರಿದ ಬ್ಯಾಂಕ್ ಮ್ಯಾನೇಜರ್! title=

ಬೆಂಗಳೂರು : ಸಹೋದ್ಯೋಗಿ ಹೆಸರಿನಲ್ಲಿ‌ ಆರು ಕೋಟಿ ಸಾಲ ಮಾಡಿ ವಂಚನೆ ಎಸಗಿ ಬಂಧನಕ್ಕೊಳಗಾಗಿದ್ದ ಬ್ಯಾಂಕ್‌ ಮ್ಯಾನೇಜರ್ ನ ವಿಚಾರಣೆ ವೇಳೆ ಹಲವು ಸಂಗತಿಗಳ ಬಗ್ಗೆ ಹನುಮಂತನಗರ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಸಾಲ ಮಾಡಿ ಡೇಟಿಂಗ್ ಆ್ಯಪ್ ನಲ್ಲಿ ಪರಿಚಯಗೊಂಡಿದ್ದ ಯುವತಿಗೆ ಹಣ ನೀಡಿದ್ದೆ ಎಂದು ಮ್ಯಾನೇಜರ್ ಹರಿಶಂಕರ್ ಹೇಳಿಕೆ ನೀಡಿದ್ದ. ತನಿಖೆ ವೇಳೆ ಒಟ್ಟು 30 ಬ್ಯಾಂಕ್ ಅಕೌಂಟ್ ಗಳಿಗೆ ಸುಮಾರು 6 ಕೋಟಿ ರೂಪಾಯಿ ವರ್ಗಾವಣೆ ಮಾಡಿದ್ದನ್ನು ಪತ್ತೆ ಹಚ್ಚಿದ್ದ ಪೊಲೀಸರು ಪರಿಶೀಲಿಸಿದಾಗ ಆರು ಮಂದಿ ಅಪರಿಚಿತ ಯುವತಿಯರಿಗೆ ಹಣ ಹೋಗಿರುವುದನ್ನು ಕಂಡುಕೊಂಡಿದ್ದಾರೆ.

ಇದನ್ನೂ ಓದಿ : Bank Manager : ಡೇಟಿಂಗ್ ಆ್ಯಪ್​ನಲ್ಲಿ ಬ್ಯಾಂಕ್ ಮ್ಯಾನೇಜರ್ ಗೆ 6 ಕೋಟಿ ಪಂಗನಾಮ ಹಾಕಿದ ಯುವತಿ!

ಹನುಮಂತನಗರದಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ಮನೆ ಮಕ್ಕಳು ಅಂತ ಸುಖವಾಗಿರಬೇಕಾದ ವಯಸ್ಸಲ್ಲೆ ಡೇಟಿಂಗ್ ಆ್ಯಪ್ ಸುಂದರಿಯರಿಗಾಗಿ ದೊಡ್ಡದೊಂದು ಯಡವಟ್ಟು ಮಾಡ್ಕೊಂಡು ಪೊಲೀಸರ ಅತಿಥಿಯಾಗಿದ್ದಾನೆ.

ಪರಿಚಯವೇ ಇಲ್ಲದ ಡೇಟಿಂಗ್ ಬೆಡಗಿಯ ಕಲರ್ ಕಲರ್ ಮೆಸೇಜ್ ಗೆ ಮನಸೋತು ತನ್ನ ಬಳಿಯಿದ್ದ 6 ಕೋಟಿ ಹಣವನ್ನ ಕಳೆದುಕೊಂಡ ಹರಿಶಂಕರ್ ಈಗ ಕಂಗಾಲಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನಂದ್ರೆ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಈತನಿಗೆ ಹುಡುಗಿಯರ ಹುಚ್ಚು ಹೆಚ್ಚಾಗಿತ್ತು. ಅದಕ್ಕಾಗಿ ಡೇಟಿಂಗ್ ಆ್ಯಪ್ ಅನ್ನು ನಿರಂತರವಾಗಿ ಬಳಸುತ್ತಿದ್ದ ಅಲ್ಲಿ ಪರಿಚಯ ಆಗುವ ಹುಡುಗಿಯರಿಗೆ ಬೇಕು ಎಂದಾಗಲೆಲ್ಲ ಹಣ ಹಾಕ್ತಿದ್ದ. ಅದು ಕೂಡ ತನ್ನ ಸಂಬಳದ ದುಡ್ಡಲ್ಲ.ಅದೇ ಬ್ಯಾಂಕ್ ನಿಂದ ಸಾಲಪಡೆದು. ಮೊದಮೊದಲು ತನಿಖೆಗೆ ಇಳಿದ ಪೊಲೀಸರಿಗೆ ಓರ್ವ ಯುವತಿಗೆ 12 ಲಕ್ಷ ಹಣ ಹಾಕಿದ್ದು ಗೊತ್ತಾಗಿತ್ತು. ನಂತರ ತನಿಖೆಯ ಆಳಕ್ಕೆ ಇಳಿತಾ ಇದ್ದಂತೆ ಈತನ ಪ್ರೇಮಕಹಾನಿಯೇ ತೆರೆದುಕೊಂಡಿತ್ತು. ಬರೋಬ್ಬರಿ 8 ಜನ ಯುವತಿಯರ ಖಾತೆಗೆ ಸುಮಾರು 6 ಕೋಟಿ ಹಣ ವರ್ಗಾವಣೆ ಮಾಡಿದ್ದಾನೆ.

ಇದನ್ನೂ ಓದಿ : ಹೆಲ್ಮೆಟ್ ಹಾಕದೇ ಬೈಕ್ ಬಳಸಿ ರೀಲ್ಸ್: ಟಿಕ್‌ಟಾಕ್‌ ಸ್ಟಾರ್‌ಗೆ ಬಿತ್ತು ಭಾರಿ ದಂಡ..!

ತಾನು ಕೆಲಸ ಮಾಡ್ತಿದ್ದ ಇಂಡಿಯನ್ ಬ್ಯಾಂಕ್‌ನ ಠೇವಣಿದಾರರಾದ ಅನಿತಾ ಎಂಬಾಕೆಯ ಉಳಿತಾಯ ಖಾತೆಯಲ್ಲಿದ್ದ 1.3 ಕೋಟಿ ರೂ ಮೇಲೆ ಆಕೆಗೆ ಗೊತ್ತಿಲ್ಲದಂತೆ ಆರು ಕೋಟಿಯಷ್ಟು ಓವರ್ ಡ್ರಾಫ್ಟ್ ಮಾಡಿ ಸಾಲವನ್ನ ಪಡೆದಿದ್ದ. ಆರು ಕೋಟಿಯನ್ನ 8 ಡೇಟಿಂಗ್ ಬೆಡಗಿಯರು ಹೇಳಿದ 30 ವಿವಿಧ ಖಾತೆಗಳಿಗೆ ಹಂತಹಂತವಾಗಿ ವರ್ಗಾಯಿಸಿದ್ದಾನೆ ಎಂಬ ಮಾಹಿತಿ ಇದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News