ಬೆಂಗಳೂರು: ತಂತ್ರಜ್ಞಾನ ಮುಂದುವರೆದಂತೆ ಹೈಟೆಕ್ ರೀತಿಯಲ್ಲಿ ಮೋಸ ಸಲಿಸಾಗಿ ನಡೆಯುತ್ತಿದೆ. ಹೊಸ ತಂತ್ರಾಂಶದ ಬಗ್ಗೆ ತಿಳಿಯದ ಮುಗ್ದ ಜನರು ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಉದಾರಹಣೆಯಂತೆ ವ್ಯಕ್ತಿಯೊಬ್ಬರಿಗೆ ಹಣ ಪಾವತಿಯಾಗಿದೆ ಎಂಬ ನಕಲಿ ಬ್ಯಾಂಕ್ ಮೆಸೇಜ್ನ್ನು ಸೃಷ್ಟಿಸಿ ನಂಬಿಸಿ ವಂಚಿಸಿದ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಯಾವುದೇ ವ್ಯಕ್ತಿಗೆ ಆನ್ಲೈನ್ ಮೂಲಕ ಹಣ ಕಳುಹಿಸಿದರೆ ಅವರ ಖಾತೆಗೆ ಹಣ ಜಮಾವಣೆಯಾದ ಕುರಿತು ಸಂದೇಶ ಬರುತ್ತವೆ. ಆಗ ಹಣ ಖಾತೆಗೆ ಬಂತು ಅಂತ ಅರ್ಥ. ಸದ್ಯ ಇದನ್ನೆ ಬಂಡವಾಳವಾಗಿಸಿಕೊಂಡ ಯುವಕನೊಬ್ಬ ನಕಲಿ ಸಂದೇಶ ಸೃಷ್ಟಿಸಿ ಜ್ಯವೆಲರಿ ಶಾಪ್ ಮಾಲೀಕನಿಗೆ ಪಂಗನಾಮ ಹಾಕಿದ್ದಾರೆ.
ಇದನ್ನೂ ಓದಿ: Shocking Video : ನೃತ್ಯ ಮಾಡುತ್ತ ಕುಸಿದುಬಿದ್ದು ಪ್ರಾಣಬಿಟ್ಟ ಡ್ಯಾನ್ಸರ್
ಕಾರ್ತಿಕ್ ಅಲಿಯಾಸ್ ಶಿವ, ಶವಿ ಎಂಬ ವ್ಯಕ್ತಿ ಪಾರಸ್ಮಾಲ್ ಜೈನ್ ಎಂಬುವರ ಜ್ಯವೆಲರಿ ಶಾಪ್ನಲ್ಲಿ ಉಂಗುರ ಖರೀದಿಸಿದ್ದ. ಉಂಗುರ ಪಡೆದು 19000 ರೂ. ನಗದು ಹಣ ಇಲ್ಲ, ಆನ್ಲೈನ್ ಮೂಲಕ ಹಣ ಕಳುಹಿಸುವುದಾಗಿ ಹೇಳಿದ್ದಾನೆ. ನಂತರ ಹಣ ಕಡಿತವಾದರೆ ಬರುವ ನಕಲಿ ಸಂದೇಶವನ್ನು ಸೃಷ್ಟಿಸಿ ಅದರಲ್ಲಿ 19000 ಸಾವಿರ ರೂ. ಎಂದು ಹಣ ನಮೂದಿಸಿ ತಾನೇ ಮೆಸೇಜ್ ಕಳಿಸಿದ್ದಾನೆ. 19000 Credited ಎಂದು ಮೆಸೇಜ್ ಬಂದ ಹಿನ್ನೆಲೆ ಹಣ ಬಂದಿರಬಹುದೆಂದುಕೊಂಡ ಪಾರಾಸ್ಮಲ್ ಕಾರ್ತಿಕ್ಗೆ ಉಂಗುರ ಕೊಟ್ಟಿದ್ದಾರೆ.
ಎರಡು ತಿಂಗಳ ಬಳಿಕ ಪಾರಸ್ಮಾಲ್ ಅವರ ಮಗ ಭಾವಿಕ್ ತಂದೆಯ ಅಕೌಂಟ್ ಚೆಕ್ ಮಾಡುವ ಸಂದರ್ಭದಲ್ಲಿ ಕಾರ್ತಿಕ್ ಕಳುಹಿಸಿದ ಸಂದೇಶದಲ್ಲಿ 19/05/2022 ಮತ್ತು 19-05-22 ಎಂದು ಡೇಟ್ ಸಮೂದಿಸಲಾಗಿತ್ತು. ಇದರಿಂದ ಅನುಮಾನಗೊಂಡು ಪರೀಕ್ಷಿಸಿದಾಗ ಅಸಲಿ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದು, ಭಾವಿಕ್ ಜೈನ್ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.