ಬೆಂಗಳೂರು : ಒಂದೂವರೆ ವರ್ಷಗಳ ಹಿಂದೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನ ಬ್ರೈನ್ ಮ್ಯಾಪಿಂಗ್ ಮೂಲಕ ಪೊಲೀಸರು ಭೇದಿಸಿದ್ದಾರೆ. ಮನೆಗೆಲಸ ಮಾಡುತ್ತಿದ್ದ ಆರೋಪಿತೆಯನ್ನ ಬಂಧಿಸಿದ್ದಾರೆ ಸದ್ಯ ವಿಚಾರಣೆ ನಡೆಸಿದ್ದಾರೆ.
ಹಲವು ಬಾರಿ ನೊಟೀಸ್ ನೀಡಿ ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಪಿ) ಒಳಪಡಿಸಿದರೂ ಗುಟ್ಟು ಬಿಟ್ಟುಕೊಡದ ಕಿಲಾಡಿ ಮಹಿಳಾ ಆರೋಪಿತೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಪರೀಕ್ಷೆ ವೇಳೆ ನೀಡಿದ ಸುಳಿವು ಆಧರಿಸಿ ಪ್ರಕರಣವನ್ನ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಯೋಜನೆ/ ಆಕರ್ಷಕ ಬೆಂಗಳೂರಿಗಾಗಿ ಪ್ರತ್ಯೇಕ ಸಮಿತಿ ಜೊತೆ ಸಭೆ
ಗದಗ ಜಿಲ್ಲೆಯ ಜನತಾ ಕಾಲೋನಿಯ ನಿವಾಸಿ ಅನ್ನಪೂರ್ಣ ಬಂಧಿತ ಆರೋಪಿ. ಈಕೆ ಮಹಾಲಕ್ಷ್ಮೀ ಲೇಔಟನ ಉದ್ಯಮಿ ಹೊನ್ನಾಚಾರಿ ಎಂಬುವರ ಮನೆಯಲ್ಲಿ 2021 ರಿಂದ 2022 ಜನವರಿಗೂ ಕೆಲಸ ಮಾಡಿದ್ದಳು. ಹಂತ-ಹಂತವಾಗಿ 10 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಕೆಲಸದಾಕೆ ಮೇಲೆ ಅನುಮಾನಗೊಂಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.
ತನಿಖೆ ನಡೆಸಿ ನಾಲ್ಕು ಬಾರಿ ನೊಟೀಸ್ ಕೊಟ್ಟು ವಿಚಾರಣೆ ನಡೆಸಿದರೂ ಸಹ ಚಿನ್ನ ಕದ್ದಿಲ್ಲ ಎಂದು ಪೊಲೀಸರ ಮುಂದೆ ಮಹಿಳೆ ಸುಳ್ಳು ಹೇಳಿದ್ದಳು. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದಾಗ ಪೊಲೀಸರಿಗೆ ಮಹಿಳೆಯೇ ಕೃತ್ಯವೆಸಗಿದ್ದಾಳೆ ಎಂಬುದು ಗೊತ್ತಾಗಿತ್ತು. ಕಬ್ಬಿಣ್ಣದ ಕಡಲೆಯಂತಿದ್ದ ಪ್ರಕರಣ ಬೇಧಿಸಲು ಪಣತೊಟ್ಟ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಅನ್ನಪೂರ್ಣಳ ಒಪ್ಪಿಗೆ ಪಡೆದು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲಾಗಿತ್ತು. ಪರೀಕ್ಷೆ ನಡೆಸಿದರೂ ಕೃತ್ಯದ ಬಗ್ಗೆ ಒಂಚೂರು ಬಾಯ್ಬಿಟ್ಟಿರಲಿಲ್ಲ.
ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಅರ್ಜಿ ವಿಚಾರಣೆ ಜುಲೈ 31ಕ್ಕೆ ಮುಂದೂಡಿಕೆ
ಕೊನೆಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ತೀರ್ಮಾನಿಸಿದ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದು ಅನ್ನಪೂರ್ಣಳನ್ನ ಪರೀಕ್ಷೆಗೆ ಒಳಪಡಿಸಿದ್ದಾರೆ. ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಮಾಮಾ ಮಾಮ ಎಂದಷ್ಟೇ ಮಹಿಳೆ ಉತ್ತರಿಸಿದ್ದಳು. ಪರೀಕ್ಷೆ ವೇಳೆ ದೊರೆತ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು ಮತ್ತೆ ವಿಚಾರಣೆಗೊಳಪಡಿಸಿದಾಗ ಉದ್ಯಮಿ ಮನೆಯಲ್ಲಿ ಕದ್ದಿದ್ದ ಆಭರಣವನ್ನ ಗದಗದಲ್ಲಿರುವ ತನ್ನ ಮಾಮಾನಿಗೆ ಕೊಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಸದ್ಯ ಮಹಿಳೆಯ ಊರಿನಲ್ಲಿರುವ ಸಂಬಂಧಿ ಮಾವನಿಂದ ಹಾಗೂ ಗಿರವಿ ಅಂಗಡಿಗಳಲ್ಲಿ ಇಟ್ಟಿದ್ದ 100 ಗ್ರಾಂ ಹೆಚ್ಚಿನ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಆರೋಪಿತೆಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಶೀಘ್ರದಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಲಾಗಿದೆ.\
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.