ಈ ಕಾಲೇಜಿನಲ್ಲಿ MBBS ಮಾಡಲು ವರ್ಷಕ್ಕೆ ನೀಡಬೇಕಾಗಿರುವುದು ಕೇವಲ 1,600 ಫೀಸ್ ! ಅತ್ಯಂತ ಕಡಿಮೆ ಖರ್ಚಿನಲ್ಲಿ ಈಡೇರುವುದು ಡಾಕ್ಟರ್ ಆಗುವ ಕನಸು

MBBS Course Lowest Fee:ಈ ಕಾಲೇಜಿನಲ್ಲಿ ಅತ್ಯಂತ ಕಡಿಮೆ ಫೀಸ್ ನಲ್ಲಿ ಎಂಬಿಬಿಎಸ್ ಓದುವ ಕನಸು ಈಡೇರುವುದು.  

Written by - Ranjitha R K | Last Updated : Sep 6, 2024, 04:35 PM IST
  • ಎಂಬಿಬಿಎಸ್ ಓದಬೇಕು ಎನ್ನುವುದು ಬಹುತೇಕ ವಿದ್ಯಾರ್ಥಿಗಳ ಕನಸಾಗಿರುತ್ತದೆ.
  • ಎಲ್ಲರಿಗೂ ಎಂಬಿಬಿಎಸ್ ಓದುವುದು ಸಾಧ್ಯವಾಗುವುದಿಲ್ಲ.
  • ವೈದ್ಯಕೀಯ ಕಾಲೇಜುಗಳ ಶುಲ್ಕ ತುಂಬಾ ದುಬಾರಿಯಾಗಿರುತ್ತದೆ
ಈ ಕಾಲೇಜಿನಲ್ಲಿ MBBS ಮಾಡಲು ವರ್ಷಕ್ಕೆ ನೀಡಬೇಕಾಗಿರುವುದು ಕೇವಲ 1,600 ಫೀಸ್ ! ಅತ್ಯಂತ ಕಡಿಮೆ ಖರ್ಚಿನಲ್ಲಿ ಈಡೇರುವುದು ಡಾಕ್ಟರ್ ಆಗುವ ಕನಸು   title=

MBBS Course Lowest Fee : ಎಂಬಿಬಿಎಸ್ ಓದಬೇಕು ಎನ್ನುವುದು ಬಹುತೇಕ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಆದರೆ ಎಲ್ಲರಿಗೂ ಎಂಬಿಬಿಎಸ್ ಓದುವುದು ಸಾಧ್ಯವಾಗುವುದಿಲ್ಲ.ಎಂಬಿಬಿಎಸ್ ಮಾಡಲು ತೆರಬೇಕಾಗಿರುವ ಭಾರೀ ಶುಲ್ಕವೇ ಇದಕ್ಕೆ ಕಾರಣ.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕಾಲೇಜುಗಳ ಶುಲ್ಕ ತುಂಬಾ ದುಬಾರಿಯಾಗಿರುವ ನಡುವೆಯೇ ಅತ್ಯಂತ ಸಣ್ಣ ಮೊತ್ತವನ್ನು ಕಟ್ಟಿಸಿಕೊಂಡು ಎಂಬಿಬಿಎಸ್ ಶಿಕ್ಷಣ ನೀಡುವ ಸಂಸ್ಥೆಯೂ ಇದೆ.ಇಲ್ಲಿ ಪ್ರವೇಶ ಪಡೆದರೆ ವೈದ್ಯಕೀಯ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್ ಓದಿ ವೈದ್ಯನಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. 

ನೆಪ ಮಾತ್ರಕ್ಕೆ ಫೀಸ್ : 
 ವರ್ಷಕ್ಕೆ ಕೇವಲ 1638 ರೂ.  ಶುಲ್ಕ ಪಾವತಿಸುವ ಮೂಲಕ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, AIIMS ನಿಂದ  MBBS ಪದವಿ ಪಡೆಯಬಹುದು.ದೇಶದ ಈ ಪ್ರಸಿದ್ಧ ವೈದ್ಯಕೀಯ ಸಂಸ್ಥೆಯಲ್ಲಿ ಎಂಬಿಬಿಎಸ್ ಕೋರ್ಸ್‌ನ ಶುಲ್ಕವು ಅತ್ಯಂತ ಕಡಿಮೆಯಾಗಿದೆ.ಇಲ್ಲಿಂದ ಎಂಬಿಬಿಎಸ್ ಮಾಡುತ್ತಿರುವ ವಿದ್ಯಾರ್ಥಿಗಳು ಸಂಪೂರ್ಣ ಐದು ವರ್ಷಗಳಲ್ಲಿ ಕೇವಲ 19,896 ರೂ.ಶುಲ್ಕ ಪಾವತಿಸಿದರೆ ಸಾಕಾಗುತ್ತದೆ.ಮಾಹಿತಿ ಪ್ರಕಾರ ದೆಹಲಿಯ ಏಮ್ಸ್ ಹಾಸ್ಟೆಲ್ ಶುಲ್ಕ 2000 ರೂ.ಹಾಗಾಗಿ ಇಲ್ಲಿ ಅಧ್ಯಯನ ಮಾಡುವ ವೆಚ್ಚವು  ಹಾಸ್ಟೆಲ್ ವೆಚ್ಚಕ್ಕಿಂತ ಕಡಿಮೆಯಾಗಿದೆ. 

ಇದನ್ನೂ ಓದಿ : ಪದವಿಪೂರ್ವ ವಿದ್ಯಾರ್ಥಿಗಳಿಗೆ RBI ರಸಪ್ರಶ್ನೆ!ಗೆದ್ದರೆ 10 ಲಕ್ಷ ರೂಪಾಯಿ ಬಹುಮಾನ !

ಎಷ್ಟು ಸೀಟುಗಳಿವೆ : 
ದೆಹಲಿ ಏಮ್ಸ್‌ನಲ್ಲಿ 132 ಸೀಟುಗಳು ಮಾತ್ರ ಲಭ್ಯವಿವೆ.ಅದರಲ್ಲಿ 125 ಸೀಟುಗಳು ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ಉಳಿದ 7 ಸೀಟುಗಳನ್ನು ವಿದೇಶಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ.NEET UG ಸ್ಕೋರ್ ಆಧಾರದ ಮೇಲೆ ದೆಹಲಿಯ AIIMS ನಲ್ಲಿ ಪ್ರವೇಶ ಸಿಗುತ್ತದೆ.ಇದಕ್ಕಾಗಿ,ಕೌನ್ಸೆಲಿಂಗ್‌ಗೆ ನೋಂದಣಿ ಸಮಯದಲ್ಲಿ,ಎಂಎಸ್ ದೆಹಲಿಯನ್ನು ಮೊದಲ ಆದ್ಯತೆಯಲ್ಲಿ ಆಯ್ಕೆ ಮಾಡಬೇಕು.

ಸೀಟು ಪಡೆಯಲು ಹರಸಾಹಸ : 
ಈ ಕಾಲೇಜು ಕಡಿಮೆ ಶುಲ್ಕಕ್ಕೆ ಹೆಸರುವಾಸಿಯಾಗಿದೆ.ಇಲ್ಲಿನ ಶಿಕ್ಷಣವೂ ಅಷ್ಟೇ ಉತ್ತಮವಾಗಿದೆ. ಹಾಗಾಗಿಯೇ ಇಲ್ಲಿ ಪ್ರವೇಶ ಪಡೆಯಲು ವೈದ್ಯ ವಿದ್ಯಾರ್ಥಿಗಳ ನಡುವೆ  ನೂಕು ನುಗ್ಗಲು ನಡೆಯುತ್ತದೆ.AIIMSನಲ್ಲಿ MBBS ಸೀಟುಗಳಿಗೆ ಪ್ರವೇಶಕ್ಕಾಗಿ, ಅಭ್ಯರ್ಥಿಗಳು NEET UG ನಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ಅಗತ್ಯ. 

ಇದನ್ನೂ ಓದಿ :  ನಿಮಗೆ 1.77 ಲಕ್ಷ ಸಂಬಳ ಬೇಕಿದ್ದರೆ ಈಗಲೇ ಅರ್ಜಿ ಸಲ್ಲಿಸಿ, ಈ ಉತ್ತಮ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ..!

ದೆಹಲಿ AIIMS ನಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣದ ಕಾರಣ, ಇಲ್ಲಿ MBBS ಸೀಟು ಪಡೆಯಲು ಸಾಕಷ್ಟು ಪೈಪೋಟಿ ಇದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News