ಎಲ್ಲಾ ಸೂಪರ್ ಸ್ಟಾರ್ ಮಕ್ಕಳು ಓದುವುದು ಇದೇ ಶಾಲೆಯಲ್ಲಿ !ಇಲ್ಲಿಯ ಒಂದು ವರ್ಷದ ಫೀಸ್ ಕೇಳಿದರೆ ಎದೆಯೊಡೆಯುತ್ತದೆ !

ಸ್ಟಾರ್ ಕಿಡ್ಸ್ ಎಂದ ಕೂಡಲೇ ಅವರಿಗೆ ಸಿಗುವ ಸೌಲಭ್ಯಗಳು ವಿಶೇಷವಾಗಿರುತ್ತದೆ. ಹಾಗೆಯೇ ಬಾಲಿವುಡ್ ನ ಸೂಪರ್ ಸ್ಟಾರ್ ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿರುವುದು. 

Written by - Ranjitha R K | Last Updated : Aug 12, 2024, 04:57 PM IST
  • ಈ ಶಾಲೆಯನ್ನು ನೀತಾ ಅಂಬಾನಿ ನಡೆಸುತ್ತಿದ್ದಾರೆ
  • 2003ರಲ್ಲಿ, ನೀತಾ ಅಂಬಾನಿ ಆರಂಭಿಸಿದ ಶಾಲೆ
  • ಆಧುನಿಕ ಸೌಲಭ್ಯಗಳು ಮತ್ತು ಸಮಗ್ರ ಬೋಧನಾ ವಿಧಾನಗಳಿಗೆ ಹೆಸರುವಾಸಿ
ಎಲ್ಲಾ ಸೂಪರ್ ಸ್ಟಾರ್ ಮಕ್ಕಳು ಓದುವುದು ಇದೇ ಶಾಲೆಯಲ್ಲಿ !ಇಲ್ಲಿಯ ಒಂದು ವರ್ಷದ ಫೀಸ್ ಕೇಳಿದರೆ ಎದೆಯೊಡೆಯುತ್ತದೆ !    title=

Star Kids School : ಹೆಚ್ಚಿನ ಬಾಲಿವುಡ್ ತಾರೆಯರ ಮಕ್ಕಳು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿಯೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.ಈ ಶಾಲೆಯನ್ನು ನೀತಾ ಅಂಬಾನಿ ನಡೆಸುತ್ತಿದ್ದಾರೆ.2003 ರಲ್ಲಿ,ನೀತಾ ಅಂಬಾನಿ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಿದರು.1,30,000 ಚದರ ಅಡಿಗಳಲ್ಲಿ ಹರಡಿರುವ 7 ಅಂತಸ್ತಿನ ಕಟ್ಟಡದಲ್ಲಿನ ಈ ಶಾಲೆಯು ಆಧುನಿಕ ಸೌಲಭ್ಯಗಳು ಮತ್ತು ಸಮಗ್ರ ಬೋಧನಾ ವಿಧಾನಗಳಿಗೆ ಹೆಸರುವಾಸಿಯಾಗಿದೆ.  

ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಪದವಿ ಪಡೆದಿದ್ದಾರೆ.ಜಾನ್ವಿಯ ಕಿರಿಯ ಸಹೋದರಿ ಖುಷಿ ಕಪೂರ್ ಕೂಡಾ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯನ್ನು ಆಯ್ಕೆ ಮಾಡುವ ಮೊದಲು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿಯೇ ಓದಿರುವುದು. 

ಇದನ್ನೂ ಓದಿ : NIRF Ranking 2024: ಯಾವ ವಿಶ್ವವಿದ್ಯಾನಿಲಯ,ಯಾವ ಕಾಲೇಜು ಭಾರತದಲ್ಲಿ ನಂಬರ್-1, ಇಂದು ಹೊರ ಬರಲಿದೆ ಸರ್ಕಾರದ ಪಟ್ಟಿ
 
ಸಾರಾ ಅಲಿ ಖಾನ್ : 
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿ,ನಟಿ ಸಾರಾ ಅಲಿ ಖಾನ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡುವ ಮೊದಲು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸಾರಾ ಕಿರಿಯ ಸಹೋದರ ಇಬ್ರಾಹಿಂ ಅಲಿ ಖಾನ್ ಕೂಡಾ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿಯೇ ಶಿಕ್ಷಣ ಪೂರೈಸಿರುವುದು.  

ಸುಹಾನಾ ಖಾನ್ : 
ಶಾರುಖ್ ಖಾನ್ ಮತ್ತು ಗೌರಿ ಖಾನ್ ಪುತ್ರಿ ಸುಹಾನಾ ಖಾನ್ ಈ ಶಾಲೆಯಿಂದಲೇ ಓದಿರುವುದು.ಶಾರುಖ್ ಖಾನ್ ಮತ್ತು ಗೌರಿ ಖಾನ್ ಹಿರಿಯ ಮಗ ಆರ್ಯನ್ ಖಾನ್, ಇಂಗ್ಲೆಂಡ್‌ನ ಸೆವೆನ್ ಓಕ್ಸ್ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರೆಸುವ ಮೊದಲು ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿಯೇ ಶಿಕ್ಷಣ ಪಡೆದಿರುವುದು.ಶಾರುಖ್ ಖಾನ್ ಮೂರನೇ ಮಗು ಅಬ್ರಾಮ್ ಕೂಡಾ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದುತ್ತಿದ್ದಾರೆ. 
 
ಇದನ್ನೂ ಓದಿ : ಯಾವುದೇ ಪರೀಕ್ಷೆ ಇಲ್ಲದೆ ಇಲ್ಲಿದೆ ಸರ್ಕಾರಿ ನೌಕರಿ..! ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆ ದಿನ..!

ಆರಾಧ್ಯ ಬಚ್ಚನ್ : 
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಈಗಾಗಲೇ ಸೆಲೆಬ್ರಿಟಿಯಾಗಿದ್ದಾರೆ. ಆರಾಧ್ಯ ಕೂಡಾ ಇದೇ ವಿದ್ಯಾರ್ಥಿನಿ. 

ಅಂದ ಹಾಗೆ ನೀತಾ ಅಂಬಾನಿ ನಡೆಸುತ್ತಿರುವ ಈ ಶಾಲೆಯ ವಾರ್ಷಿಕ ಶುಲ್ಕ 4,48,000 ರೂಪಾಯಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News