Indian Army Recruitment 2022: ಭಾರತೀಯ ಸೇನೆಯಲ್ಲಿ 8ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ

Indian Army Recruitment 2022:  ಅಗ್ನಿಪಥ್ ಯೋಜನೆ  2022 ಆರ್ಮಿ ಅಗ್ನಿವೀರ್ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ ರ್ಯಾಲಿ ನೋಂದಣಿ joinindianarmy.nic.in ನಲ್ಲಿ ಪ್ರಾರಂಭವಾಗಿದೆ.  

Written by - Yashaswini V | Last Updated : Jul 6, 2022, 02:01 PM IST
  • ಅಗ್ನಿವೀರ್ ಯೋಜನೆಯಡಿ ಉದ್ಯೋಗಕ್ಕೆ ಸೇರಲು ಬಯಸುವವರಿಗೆ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ.
  • ಅರ್ಜಿ ಪ್ರಕ್ರಿಯೆಯು ಈ ತಿಂಗಳ ಆರಂಭದಲ್ಲಿ ಜುಲೈ 1, 2022 ರಿಂದ ಪ್ರಾರಂಭವಾಗಿದೆ.
  • ಅಗ್ನಿಪಥ್ ಸ್ಕೀಮ್ 2022 ಗೆ ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 3, 2022.
Indian Army Recruitment 2022: ಭಾರತೀಯ ಸೇನೆಯಲ್ಲಿ 8ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ  title=
Agniveer recruitment 2022

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ: ಭಾರತೀಯ ಸೇನೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 10 ನೇ ತರಗತಿ ಪಾಸ್ ಮತ್ತು ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 8 ನೇ  ತರಗತಿ  ಪಾಸ್‌ ಆದವರಿಗಾಗಿ ನೇಮಕಾತಿ ರ್ಯಾಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 30, 2022 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

ಅರ್ಜಿ ಪ್ರಕ್ರಿಯೆಯು ಈ ತಿಂಗಳ ಆರಂಭದಲ್ಲಿ ಜುಲೈ 1, 2022 ರಿಂದ ಪ್ರಾರಂಭವಾಗಿದೆ. ಅಗ್ನಿಪಥ್ ಯೋಜನೆ  2022 ಗೆ ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 3, 2022. ಅಗ್ನಿವೀರ್ ಯೋಜನೆಯಡಿ ಉದ್ಯೋಗಕ್ಕೆ ಸೇರಲು ಬಯಸುವವರಿಗೆ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ. 

ಇದನ್ನೂ ಓದಿ- NVS Recruitment 2022 : ನವೋದಯ ವಿದ್ಯಾಲಯ ಸಮಿತಿಯಲ್ಲಿ 1,616 ಹುದ್ದೆಗಳಿಗೆ ಅರ್ಜಿ!

ಅಧಿಸೂಚನೆಯು ಎಲ್ಲಾ ನಿಯಮಗಳು ಮತ್ತು ಷರತ್ತುಗಳು, ಸೇವೆ, ವೇತನ ಶ್ರೇಣಿ, ಸೇವೆ, ದಾಖಲಾತಿ, ಉದ್ಯೋಗಾವಕಾಶ, ರಜೆ ಮತ್ತು ಇತರ ವಿವರಗಳನ್ನು ಉಲ್ಲೇಖಿಸಿದೆ. ಅಭ್ಯರ್ಥಿಗಳು ಭಾರತೀಯ ಸೇನೆಯ ಅಗ್ನಿಪಥ್ ಯೋಜನೆ 2022 ಗೆ ನೋಂದಾಯಿಸುವ ಮತ್ತು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ತಪ್ಪದೇ ಪೂರ್ತಿಯಾಗಿ ಓದಿ.

ಇದನ್ನೂ ಓದಿ- Railway job 2022 : ರೈಲ್ವೆ ಇಲಾಖೆಯಲ್ಲಿ 16500 ಹುದ್ದೆ ಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ಪರಿಶೀಲಿಸಿ

ಭಾರತೀಯ ಸೇನೆಯಲ್ಲಿ ಆನ್‌ಲೈನ್ ನೋಂದಣಿಗೆ ಕಾರ್ಯವಿಧಾನ:
* ಭಾರತೀಯ ಸೇನೆಯಲ್ಲಿ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮೊದಲು joinindianarmy.nic.in ಗೆ ಹೋಗಬೇಕು .
* ನಂತರ ಅಗ್ನಿಪಥ್ ಯೋಜನೆ 2022 ಗಾಗಿ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ
* ಇಲ್ಲಿ ನೋಂದಾಯಿಸಿ ಮತ್ತು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಈ ವೇಳೆ 
ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, ಕೇಳಲಾದ ದಾಖಲೆಗಳನ್ನು ಅಪ್‌ಲೋಡ್ ಮಾಡಿ
* ನಂತರ ಶುಲ್ಕವನ್ನು ಪಾವತಿಸಿ (ಯಾವುದಾದರೂ ಇದ್ದರೆ) 
* ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಅದರ ಪ್ರಿಂಟ್ ತೆಗೆದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News