ಕೆಲಸವಿಲ್ಲದೇ ಸುಮ್ಮನೇ ಕುಳಿತಿದ್ದೀರಾ ? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ..!

ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಲಯದಡಿ ಕೆನರಾ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಅರ್ಹ ಬಿ.ಪಿ.ಎಲ್ ಕುಟುಂಬದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

Written by - Zee Kannada News Desk | Last Updated : May 19, 2022, 02:01 PM IST
  • ಗ್ರಾಮೀಣ ಭಾಗದ ಅರ್ಹ ಬಿ.ಪಿ.ಎಲ್ ಕುಟುಂಬದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೆಲಸವಿಲ್ಲದೇ ಸುಮ್ಮನೇ ಕುಳಿತಿದ್ದೀರಾ ? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ..! title=

ಬೆಂಗಳೂರು: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಲಯದಡಿ ಕೆನರಾ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಗ್ರಾಮೀಣ ಭಾಗದ ಅರ್ಹ ಬಿ.ಪಿ.ಎಲ್ ಕುಟುಂಬದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಡಿ.ಎಸ್ ನಾಗಭೂಷಣ ಅವರ ಗಾಂಧೀ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬಿ.ಪಿ.ಎಲ್ ಕುಟುಂಬದ 18 ರಿಂದ 45 ವರ್ಷದೊಳಗಿನ ವಾಣಿಜ್ಯ ವಿಷಯವನ್ನು ಓದಿದ ನಿರುದ್ಯೋಗಿ ಯುವಕ-ಯುವತಿಯರಿಗೆ 10 ದಿನಗಳ ಪೇಪರ್ ಕವರ್, ಬ್ಯಾಗ್ ಮತ್ತು ಪೇಪರ್ ಲಕೋಟೆಗಳ ತಯಾರಿಕಾ ತರಬೇತಿ, 10 ದಿನಗಳ ಫಾಸ್ಟ್ ಫುಡ್ ತರಬೇತಿ ಹಾಗೂ ನಿರುದ್ಯೋಗಿ ಯುವಕರಿಗಾಗಿ 13 ದಿನಗಳ ಸಿ.ಸಿ ಕ್ಯಾಮೆರಾ ದುರಸ್ತಿ ಮತ್ತು ಅಳವಡಿಕೆಯ ತರಬೇತಿ, 30 ದಿನಗಳ ಎಲೆಕ್ಟಿçಕ್ ಮೋಟರ್ ರಿವೈಂಡಿಂಗ್ ತರಬೇತಿಯನ್ನು ಊಟ ಹಾಗೂ ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತದೆ.

ಆಸಕ್ತರು ಕೆನರಾ ಬ್ಯಂಕ್ ದೇಶಪಾಂಡೆ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ವಿಳಾಸಕ್ಕೆ ಮೇ 31 ರೊಳಗಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08284-295307, ಮೊ.ಸಂ: 9483485489, 9482188780, 9844796998, 8197022501 ಗೆ ಸಂಪರ್ಕಿಸಬಹುದು ಎಂದು ಆರ್‌ಸೆಟಿ ಸಂಸ್ಥೆಯ ನಿರ್ದೇಶಕ ಪ್ರಸನ್ನಕುಮಾರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News