ಅಗ್ನಿಪತ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 50 ರಷ್ಟು ಅಂಕಗಳು ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇಕಡಾ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಅಥವಾ ವಿಜ್ಞಾನೇತರ ವಿಭಾಗದಲ್ಲಿ ಶೇಕಡಾ 50 ರಷ್ಟು ಅಂಕಗಳು ಮತ್ತು ಇಂಗ್ಲೀಷ್ ವಿಷಯಲ್ಲಿ ಶೇಕಡಾ 50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.

Written by - Zee Kannada News Desk | Last Updated : Mar 25, 2023, 07:30 PM IST
  • ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 50 ರಷ್ಟು ಅಂಕಗಳು
  • ಇಂಗ್ಲೀಷ್ ವಿಷಯದಲ್ಲಿ ಶೇಕಡಾ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು
  • ಇಂಗ್ಲೀಷ್ ವಿಷಯಲ್ಲಿ ಶೇಕಡಾ 50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಅಗ್ನಿಪತ್ ಯೋಜನೆಯಡಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ title=
ಸಾಂದರ್ಭಿಕ ಚಿತ್ರ

ಕೊಪ್ಪಳ: ಭಾರತೀಯ ವಾಯುಪಡೆಯಿಂದ ಅಗ್ನಿಪತ್ ಯೋಜನೆಯಡಿಯಲ್ಲಿ ಅಗ್ನಿವೀರ್ ವಾಯು ಹುದ್ದೆಯಲ್ಲಿ ಸೇವೆ ಸಲ್ಲಿಸಲು ಹಾಗೂ ಮೇ-2023 ರಲ್ಲಿ ನಡೆಯುವ ಆನ್‌ಲೈನ್ ಆಯ್ಕೆ ಪರೀಕ್ಷೆಗಾಗಿ ಅವಿವಾಹಿತ ಯುವಕ, ಯುವತಿಯರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಸಹಾಯ ಒದಗಿಸಲಾಗುವುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತಡೆಗೋಡೆ ನಿರ್ಮಾಣದ ವೇಳೆ ಮಣ್ಣು ಕುಸಿದ ಪರಿಣಾಮ 3 ಕಾರ್ಮಿಕರು ಸಾವು

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 50 ರಷ್ಟು ಅಂಕಗಳು ಮತ್ತು ಇಂಗ್ಲೀಷ್ ವಿಷಯದಲ್ಲಿ ಶೇಕಡಾ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಅಥವಾ ವಿಜ್ಞಾನೇತರ ವಿಭಾಗದಲ್ಲಿ ಶೇಕಡಾ 50 ರಷ್ಟು ಅಂಕಗಳು ಮತ್ತು ಇಂಗ್ಲೀಷ್ ವಿಷಯಲ್ಲಿ ಶೇಕಡಾ 50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಡಿಪ್ಲೋಮಾ ವಿಭಾಗದ ಮೆಕ್ಯಾನಿಕಲ್, ಇಲೆಕ್ಟ್ರೀಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟ್ರುಮೆಂಟ್ ಟೆಕ್ನಾಲಜಿ, ಇನ್‌ಪರ‍್ಮೇಷನ್ ಟೆಕ್ನಾಲಜಿಯಲ್ಲಿ ಶೇಕಡಾ 50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಅಥವಾ 2 ವರ್ಷದ ವೃತ್ತಿಪರ ಕೋರ್ಸ್ಗಳಲ್ಲಿ ಭೌತಶಾಸ್ತç ಮತ್ತು ಗಣಿತ ವಿಷಯಗಳನ್ನು ವ್ಯಾಸಂಗ ಮಾಡಿ ಶೇಕಡಾ 50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಅಥವಾ ಯಾವುದೇ ಪಿಯುಸಿ ವಿಭಾಗದಲ್ಲಿ ಶೇಕಡಾ 50 ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಅಭ್ಯರ್ಥಿಗಳ ವಯೋಮಿತಿ 26 ಆಗಿದ್ದು, 2002ರ ಡಿಸೆಂಬರ್ ರಿಂದ 2006ರ ಜೂನ್ 26ರ ನಡುವೆ ಜನಿಸಿದವರಾಗಿರಬೇಕು.

ಇದನ್ನೂ ಓದಿ: "ಯಾರ್ಯಾರೋ ನಾನೇ ಸಿಎಂ ನಾನೇ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ"

ಅರ್ಜಿ ಶುಲ್ಕ 250 ರೂ.ಗಳು ಆಗಿದ್ದು, ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ವಿವರಗಳಿಗೆ ಅಥವಾ ಸೂಚನೆಗಳಿಗೆ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗಾಗಿ ವೆಬ್‌ಸೈಟ್ https://agnipathvayu.cdac.in ಗೆ ಭೇಟಿ ನೀಡಬೇಕು.ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಸಹಾಯ ಒದಗಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News